ದೊಡ್ಡಬಳ್ಳಾಪುರ, (ಡಿ.27); ಮಹಿಳೆಯರ ಒಳ ಉಡುಪು ತಯಾರಿಕಾ ಕಾರ್ಖಾನೆಯಲ್ಲಿ ಉಂಟಾದ ಅಗ್ನಿ ಅವಘಡದಲ್ಲಿ ಅಪಾರ ಪ್ರಮಾಣದ ಬಟ್ಟೆಗಳು ಬೆಂಕಿಗೆ ಸುಟ್ಟು ಹೋಗಿರುವ ಘಟನೆ ಕೆಇಸಿಪಿ ವೃತ್ತದ ಬಳಿ ಮಂಗಳವಾರ ರಾತ್ರಿ ಸಂಭವಿಸಿದೆ.
ನೆಲಮಂಗಲ ರಸ್ತೆಯ ಕೆಸಿಪಿ ಸರ್ಕಲ್ ಬಳಿ ಇರುವ ಖಾಸಗಿ ಗಾರ್ಮೆಂಟ್ಸ್ ಮಹಿಳೆಯರ ಒಳ ಉಡುಪುಗಳ ಕಾರ್ಖಾನೆಗೆ ಬೆಂಕಿ ಬಿದ್ದು ಬಟ್ಟೆಗಳು ಸುಟ್ಟು ಹೋಗಿವೆ.
ಕಾರ್ಖಾನೆಯ ಎರಡನೇ ಹಂತದಲ್ಲಿರುವ ಫಿನ್ನಿಶಿಂಗ್ ಘಟಕದಲ್ಲಿ ಈ ಅವಘಡ ಸಂಭಿಸಿದ್ದು, ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ಭೇಟಿ ನೀಡಿ ಬೆಂಕಿಯನ್ನು ನಂದಿಸಿದ್ದಾರೆಂದು ಮೂಲಗಳು ತಿಳಿಸಿವೆ.
ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….