Site icon ಹರಿತಲೇಖನಿ

ಕುಸ್ತಿ ಪಟುಗಳೊಂದಿಗೆ ಸಮಯ ಕಳೆದು, ಹೋರಾಟವನ್ನು ಬೆಂಬಲಿಸಿದ ರಾಹುಲ್ ಗಾಂಧಿ

ಹರ್ಯಾಣ, (ಡಿ.27): ಭಾರತೀಯ ಕುಸ್ತಿ ಅಸೋಸಿಯೇಷನ್ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಮತ್ತು ಕುಸ್ತಿಪಟುಗಳ  ನಡುವಿನ ಗಲಾಟೆ ಮುಂದುವರೆದಿದೆ. ಈ ನಡುವೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕುಸ್ತಿಪಟುಗಳನ್ನು ಭೇಟಿಯಾಗಿ ಅವರ ಜೊತೆ ಸಮಯ ಕಳೆದು, ಧೈರ್ಯ ತುಂಬಿದ್ದಾರೆ.

ಇಂದು ಬೆಳಿಗ್ಗೆ ಹರ್ಯಾಣದ ಜಜ್ಜರ್ ಜಿಲ್ಲೆಯ ಛಾರಾ ಗ್ರಾಮಕ್ಕೆ ದಿಢೀರ್ ಭೇಟಿ ನೀಡಿದ ರಾಹುಲ್ ಗಾಂಧಿ ಕುಸ್ತಿಪಟು ದೀಪಕ್ ಪುನಿಯಾ ಅವರನ್ನು ಭೇಟಿಯಾಗಿ, ಕುಸ್ತಿಪಟುಗಳ ದಿನಚರಿ, ಅವರ ಅಭ್ಯಾಸ ಕ್ರಮವನ್ನು ವೀಕ್ಷಿಸಿದರು. ಕುಸ್ತಿಪಟುಗಳ ಜೊತೆ ರಾಗಿ ರೊಟ್ಟಿ ಕೂಡ ಸವಿದು ಸಂವಾದ ನಡೆಸಿದರು. ರಾಗಾ ದಿಢೀರ್ ಭೇಟಿಗೆ ಇಡೀ ಗ್ರಾಮವೇ ಸಂತಸ ವ್ಯಕ್ತಪಡಿಸಿದೆ. ಈ ವೇಳೆ ಭಜರಂಗ ಪುನಿಯಾ ಮತ್ತು ಶಾಸಕ ರಘುಬೀರ್ ಕಡಿಯನ್ ಕೂಡ ಉಪಸ್ಥಿತರಿದ್ದರು.

ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಪೋಸ್ಟ್ ಶೇರ್ ಮಾಡಿರುವ ರಾಹುಲ್ ಗಾಂಧಿ ಕುಸ್ತಿಪಟುಗಳು ನಿತ್ಯ ರಕ್ತ, ಬೆವರು ಸುರಿಸು, ಕಠಿಣ ಶ್ರಮಗಳ ಅಭ್ಯಾಸದಿಂದ ದೇಶಕ್ಕಾಗಿ ಮೆಡಲ್ ತರುತ್ತಾರೆ. ಭಾರತದ ಕ್ರೀಡಾಪಟುಗಳು ಮಹಿಳಾ ಕುಸ್ತಿಪಟುಗಳು ತಮ್ಮ ಅಖಾಡ ಬಿಟ್ಟು ನ್ಯಾಯಕ್ಕಾಗಿ ಬೀದಿಲಿ ಹೋರಾಟ ಮಾಡಿದರೆ, ಅವರ ಮಕ್ಕಳನ್ನು ಈ ಮಾರ್ಗದಲ್ಲಿ ಉತ್ತೇಜಿಸುವವರು ಯಾರು ಎಂದು ಪ್ರಶ್ನಿಸಿದ್ದಾರೆ. ಈ ಮೂಲಕ ಕುಸ್ತಿಪಟುಗಳ ಬೆಂಬಲಕ್ಕೆ ರಾಹುಲ್‌ ಗಾಂಧಿ ನಿಂತಿದ್ದಾರೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

Exit mobile version