ಬೀದರ್, (ಡಿ.27); ಎರಡು ವರ್ಷದ ಮಗುವಿನ ಮೇಲೆ ಇನ್ನೋವಾ ಕಾರು ಹರಿದ ಪರಿಣಾಮ ಮಗು ಸ್ಥಳದಲ್ಲೆ ಸಾವನ್ನಪ್ಪಿದ ಘಟನೆ ನಗರದ ಹಾರೋಗೇರಿ ಬಡಾವಣೆಯಲ್ಲಿರುವ ಗುರುಪಾದಪ್ಪಾ ನಾಗಮಾರಪಳ್ಳಿ ಆಸ್ಪತ್ರೆ ಮುಂಭಾಗದಲ್ಲಿ ಸಂಭವಿಸಿದೆ.
ಹಾರೊಗೇರಿ ನಿವಾಸಿಗಳಾದ ಸತೀಶ ಹಾಗೂ ಸಂಗೀತಾ ಪಾಟೀಲ ಪುತ್ರ ಬಸವಚೇತನ (2 ವರ್ಷ) ಮೃತ ದುರ್ದೈವಿ. ನಿನ್ನೆ ಮದ್ಯಾಹ್ನ ಅತ್ತೆ ಮನೆಗೆಂದು ತೆರಳಿದ್ದ ಬಸವಚೇತನ ರಸ್ತೆ ಬದಿಯಲ್ಲಿ ಆಟವಾಡುತ್ತ ನಿಂತಿದ್ದಾನೆ.
ಆ ಸಮಯದಲ್ಲಿ ಯಮಧೂತನಂತೆ ಬಂದ ಇನ್ನೊವಾ ಕ್ರಿಸ್ಟಾ ಕಾರು ಬಾಲಕನ ಮೇಲೆ ಹರಿದಿದ್ದು, ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮಗುವಿನ ಮೇಲೆ ಕಾರು ಹರಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಗಾಂಧಿಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….