ದೊಡ್ಡಬಳ್ಳಾಪುರ, (ಡಿ.25); ಮೈತ್ರಿ ಹಿನ್ನಲೆಯಲ್ಲಿ ಕಮಲ – ದಳ ಪಕ್ಷದ ಮುಖಂಡರು, ಕಾರ್ಯಕರ್ತರು ಸ್ನೇಹಮಯವಾಗಿರಬೇಕೆ ಹೊರತು ದ್ವೇಷ ಮಯವಾಗಿರಬಾರದೆಂದು ಹರೀಶ್ ಗೌಡ ಬಿಜೆಪಿ ರಾಜ್ಯಾಧ್ಯಕ್ಷ ಆರ್.ಅಶೋಕ್ ಅವರಿಗೆ ಸಲಹೆ ನೀಡಿದ್ದಾರೆ.
ಇಂದು ನಗರದಲ್ಲಿ ನಡೆದ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗಿರುವ ಕುರಿತು, ವಿರೋಧ ಪಕ್ಷದ ನಾಯಕರು ಜೆಡಿಎಸ್ ಕಾರ್ಯಕರ್ತರನ್ನು ಕೊಳ್ಳುವ ಮಾತನಾಡಿದ್ದಾರೆ ಇದು ಉತ್ತಮ ಬೆಳವಣಿಗೆಯಲ್ಲ.
ವರಿಷ್ಠರು ಮೈತ್ರಿ ಸಾಧಿಸಿ ಎರಡು ಪಕ್ಷಗಳು ಸ್ನೇಹಮಯವಾಗಿ ಸಾಗುವಂತೆ ಸೂಚಿಸಿದ್ದಾರೆ. ಬಿಜೆಪಿಯ ಒಳ್ಳೆಯ ಕೆಲಸಗಳಿಗೆ ಜೆಡಿಎಸ್ ಪಕ್ಷದ ಸಹಕಾರ ಎಂದಿಗೂ ಇರುತ್ತದೆ. ನಗರಸಭೆಯಲ್ಲಿ ಯಾವ ರೀತಿ ಹೊಂದಾಣಿಕೆಯಲ್ಲಿ ಇದ್ದೇವೆ ಎಂಬುದು ನಿಮಗೆ ತಿಳಿದಿದೆ. ಆದರೆ ಕೆಟ್ಟ ಕೆಲಸ ಕಂಡುಬಂದರೆ ಖಂಡಿಸುವ ಶಕ್ತಿಯನ್ನು ಪಕ್ಷದ ವರಿಷ್ಠರು ನಮಗೆ ನೀಡಿದ್ದಾರೆ ಎಂಬುದು ನಿಮ್ಮ ಗಮನಕ್ಕಿರಲಿ ಎಂದು ವಾರ್ನಿಂಗ್ ನೀಡಿದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….