ಬೆಂ.ಗ್ರಾ.ಜಿಲ್ಲೆ, (ಡಿ.23); ಹಿಜಾಬ್ ನಿಷೇಧದ ಕುರಿತು ದಿನಕ್ಕೊಂದು ಹೇಳಿಕೆ ನೀಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ವರ್ತನೆ ಕುರಿತು ಬೆಂಗಳೂರು ಗ್ರಾಮಾಂತರ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಿ.ಮುನೇಗೌಡ ಬೇಸರ ವ್ಯಕ್ತಪಡಿಸಿದ್ದು, ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಗೌರವ, ಘನತೆಯಿಂದ ವರ್ತಿಸಬೇಕೆಂದಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ಸಿದ್ದರಾಮಯ್ಯ ಅಲ್ಲೋಲ ಕಲ್ಲೋಲ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಜೆಡಿಎಸ್ ಬಿಜೆಪಿ ಒಂದಾಗಿರುವ ಕಾರಣ ಮುಂದೆ ನನ್ನ ಪರಿಸ್ಥಿತಿ ಏನು..?, ಲೋಕಸಭೆ ಚುನಾವಣೆಯಲ್ಲಿ ಯಾವ ರೀತಿ ಕಷ್ಟವನ್ನು ಎದುರಿಸಬೇಕು..?, ಮತ್ತೊಂದು ಕಡೆ ಡಿಕೆ ಶಿವಕುಮಾರ್ ಅವರದೊಂದು ಬಾಧೆ. ಇದರೆಲ್ಲರಿಂದ ಒಂದು ನಿರ್ಣಯಕ್ಕೆ ಬರಲು ಸಾಧ್ಯವಾಗುತ್ತಿಲ್ಲ.
ಮುಸ್ಲಿಂ ಸಮುದಾಯವ ಓಲೈಸಲು ಹೇಳಿಕೆ ನಿಡುತ್ತಾರೆ.. ಅದು ಹಿಂದೂಗಳಿಂದ ಆಕ್ರೋಶ ಉಂಟಾದರೆ ಆ ಕೂಡಲೇ ಯೂಟರ್ನ್ ಹೊಡಿತಾರೆ…ಇವರೆಲ್ಲ ಗೇಮ್ ಆಡ್ತಾ ಇದ್ದಾರೆ ಹೊರತು, ಕೆಲಸ ಮಾಡ್ತಾ ಇಲ್ಲ.
ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಸ್ಟ್ಯಾಂಡರ್ಡ್ ಮೇಂಟೇನ್ ಮಾಡಬೇಕು, ಮಾತಾಡುವಾಗ ಗೌರವ, ಘನತೆಯಿಂದ ವರ್ತಿಸಬೇಕು ಎಂದಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….