ಬೆಂಗಳೂರ, (ಡಿ.22): ಸಿಎಂ, ಸಚಿವರು ಜೆಟ್‌ನಲ್ಲಿ ಪ್ರಯಾಣ ಬೆಳೆಸುತ್ತಾರೆ, ಅದೇ ಮಕ್ಕಳು ಜೆಸಿಬಿಯಲ್ಲಿ ಪ್ರಯಾಣ ಮಾಡುತ್ತಾರೆ. ಇದೇನಾ ನಿಮ್ಮಸಮಾಜವಾದ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜಮೀರ್ ಅಹಮದ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಜೆಟ್ ವಿಮಾನ ಪ್ರಯಾಣದ ವಿಡಿಯೋ ಸಂಬಂಧಿಸಿ ಪ್ರತಿಕ್ರಿಯೆ ನೀಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಜಮೀರ್ ಅಹ್ಮದ್ ಖಾನ್, ಕೃಷ್ಣಬೈರೇಗೌಡ ಐಷಾರಾಮಿ ಜೆಟ್‌ನಲ್ಲಿ ಪ್ರಯಾಣ ಮಾಡುತ್ತಾರೆ. ಆದರೆ ಇತ್ತ ರಾಜ್ಯದಲ್ಲಿ ಬರದ ಸಂಕಷ್ಟಕ್ಕೆ ರೈತರು ಆತ್ಮಹತ್ಯೆ ದಾರಿ ತುಳಿಯುತ್ತಿದ್ದಾರೆ.
60 ಲಕ್ಷಕ್ಕೂ ಹೆಚ್ಚು ರೈತರ ಜಮೀನಿನಲ್ಲಿ ಬೆಳೆ ನಷ್ಟ ಆಗಿದೆ. ರೈತರು ಬೇರೆ ರಾಜ್ಯಗಳಿಗೆ ಗುಳೇ ಹೋಗುವ ಪರಿಸ್ಥಿತಿ ಇದೆ ಎಂದು ಕಿಡಿಕಾರಿದರು.
ಮತ್ತೊಂದು ಕಡೆ ಜೆಸಿಬಿಯಲ್ಲಿ ಶಾಲೆ ಮಕ್ಕಳು ಶಾಲೆಗೆ ಹೋಗ್ತಿದ್ದಾರೆ. ಇತ್ತ ಆದರೆ ಇತ್ತ ಬರದ ಛಾಯೆ ಸಂದರ್ಭದಲ್ಲಿ ಸಿಎಂ ಸಚಿವರು ಐಷಾರಾಮಿ ವಿಮಾನ ಪ್ರಯಾಣ ಬಗ್ಗೆ ಖುಷಿಯಾಗಿದೆ ಎಂದು ಜಮೀರ್ ವಿಡಿಯೋ ಹಂಚಿಕೊಂಡಿದ್ದಾರೆ.
ಸಿಎಂ ಹಾಗೂ ಸಚಿವರು ಜೆಟ್‌ನಲ್ಲಿ ಪ್ರಯಾಣ, ಮಕ್ಕಳು ಜೆಸಿಬಿಯಲ್ಲಿ ಪ್ರಯಾಣ, ಇದೇನಾ ನಿಮ್ಮ ಸಮಾಜವಾದ ಈ ರೀತಿಯ ದೌಲತ್ತು ಸಿಎಂ, ಸಚಿವರಿಗೆ ಬೇಕಿತ್ತಾ ಎಂದು ಪ್ರಶ್ನಿಸುತ್ತಾ ಅಶೋಕ್ ಅವರು ಎರಡು ಫೋಟೋಗಳನ್ನು ಬಿಡುಗಡೆಗೊಳಿಸಿದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….