ಬೆಳಗಾವಿ, (ಡಿ.14): ಅಧಿವೇಶನ ಆರಂಭವಾದಾಗಿನಿಂದಲೂ ಸ್ವಪಕ್ಷದ ನಾಯಕರನ್ನು ಎಷ್ಟು ಕೆಣಕಲು ಸಾಧ್ಯವೋ ಎಲ್ಲಾ ಅವಕಾಶವನ್ನೂ ಬಿಜೆಪಿ ಶಾಸಕ ಬಸನ ಗೌಡ ಪಾಟೀಲ್ ಯತ್ನಾಳ್ ಬಳಸಿಕೊಳ್ಳುತ್ತಿರುವಂತಿದೆ. ಇಂದು ಕೂಡ ಪೂರಕ ಬಜೆಟ್ ವಿಚಾರದ ಚರ್ಚೆಯಲ್ಲಿ ಆರ್.ಅಶೋಕ್, ಬಿ.ವೈ.ವಿಜಯೇಂದ್ರ ಅವರನ್ನು ಯತ್ನಾಳ ಎಳೆದು ತಂದಿದ್ದಾರೆ.
ಬುಧವಾರ ಕಾಂಗ್ರೆಸ್ ನಾಯಕರು ಮಂಡಿಸಿದ ಪೂರಕ ಬಜೆಟ್ ಬಗ್ಗೆ ವಿಚಾರ ಎತ್ತಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಪ್ರತಿ ಸಲ ಪ್ರಧಾನಿ ಮೋದಿ ಅವರ ಹೆಸರನ್ನು ಎಳೆದು ತರಲಾಗುತ್ತಿದೆ, ಅವರನ್ನೇ ಯಾಕೆ ಟಾರ್ಗೆಟ್ ಮಾಡುತ್ತಿದ್ದೀರಿ..? ರಾಜ್ಯ ವಿಧಾನಸಭೆಯಲ್ಲಿ ಪ್ರಧಾನಿ ಹೆಸರು ಯಾಕೆ ಎಂದು ಪ್ರಶ್ನಿಸಿದ್ದಾರೆ.
ಇದಿಷ್ಟಕ್ಕೆ ಸುಮ್ಮನಾಗದ ಯತ್ನಾಳ್ ನಮ್ಮ ರಾಜ್ಯದ ಎರಡು ಜೋಡೆತ್ತುಗಳನ್ನು ಯಾರಾದರೂ ಪ್ರಶ್ನೆ ಮಾಡಿ ಇವರ ಬಗ್ಗೆ ಯಾಕೆ ಮಾತನಾಡುತ್ತಿಲ್ಲ ಎಂದು ಬಿಜೆಪಿ ನಾಯಕರನ್ನು ಮೂದಲಿಸಿದ್ದಾರೆ.
ಯತ್ನಾಳ್ ಮಾತಿಗೆ ಸಿಟ್ಟಾದ ಸಚಿವ ಪ್ರಿಯಾಂಕ್ ಖರ್ಗೆ, ಮೋದಿ ಅವರು ಕೊಟ್ಟಿದ್ದರೆ ಎದೆ ತಟ್ಟಿಕೊಂಡು ಹೇಳುತ್ತಿದ್ರಿ ಈಗ ಯಾಕೆ ಕೇಳಬಾರದು, ಹಣ ಕೊಟ್ಟಿಲ್ಲ ಅದಿಕ್ಕೆ ಪ್ರಧಾನಿ ಅವರನ್ನು ಕೇಳುತ್ತಿದ್ದೇವೆ ತಪ್ಪೇನು ಎಂದು ಪ್ರಶ್ನಿಸಿದ್ದಾರೆ.
ಬರ ಪರಿಹಾರ ವಿಚಾರದಲ್ಲಿ ರಾಜ್ಯ ಕೇಂದ್ರ ನಡುವೆ ಜಟಾಪಟಿ ನಡೆಯುತ್ತಿರುವುದು ಗೊತ್ತೇ ಇದೆ, ಹೀಗಿರುವಾಗ ಆರ್.ಅಶೋಕ್ ಮತ್ತು ಬಿ.ವೈ.ವಿಜಯೇಂದ್ರ ಅವರನ್ನು ಗೇಲಿ ಮಾಡುವ ಸಲುವಾಗಿಯೇ ಯತ್ನಾಳ್ ಇವರಿಬ್ಬರ ಹೆಸರನ್ನು ತಂದಂತಿದ್ದಾರೆ ಎನ್ನಲಾಗಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….