ನವದೆಹಲಿ, (ಡಿ.11); ಮಹಿಳಾ ಪ್ರೀಮಿಯರ್ ಲೀಗ್ 2024ರ ಹರಾಜಿನ ನಂತರ, ಪಂದ್ಯಾವಳಿಯ ಎರಡನೇ ಆವೃತ್ತಿಯ ಉತ್ಸಾಹವು ಹೆಚ್ಚಾಗಿದೆ. ಏಕೆಂದರೆ ಅಭಿಮಾನಿಗಳು ತಮ್ಮ ನೆಚ್ಚಿನ ತಂಡಗಳು ಮೈದಾನದಲ್ಲಿ ಮುಖಾಮುಖಿಯಾಗುವುದನ್ನು ನೋಡಲು ಕಾಯುತ್ತಿದ್ದಾರೆ.
ಇತ್ತೀಚೆಗೆ, ಪಂದ್ಯಾವಳಿಯ ಮುಂಬರುವ ಆವೃತ್ತಿಯ ಬಗ್ಗೆ ಕೆಲವು ಮಾಹಿತಿಯನ್ನು ಬಹಿರಂಗಪಡಿಸಿದ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಟಿ20 ಕ್ರಿಕೆಟ್ ವೈಭವವು 2024ರ ಫೆಬ್ರವರಿ ಎರಡನೇ ಅಥವಾ ಮೂರನೇ ವಾರದಿಂದ ಪ್ರಾರಂಭವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.
ಇವೆಲ್ಲದರ ನಡುವೆ ಪಂದ್ಯಾವಳಿಯು ಭಾರತದ ಕೇವಲ ಒಂದು ರಾಜ್ಯದಲ್ಲಿ ನಡೆಯಲಿದೆ ಎಂದು ಶಾ ಹೇಳಿದ್ದಾರೆ. ಈ ಮೂಲಕ ಅವರು ತವರಿನ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ. ಇದರಿಂದಾಗಿ ಆರ್ಸಿಬಿಯ ಅಭಿಮಾನಿಗಳಿಗೆ ತಮ್ಮ ತಂಡ ಬೆಂಗಳೂರಿನಲ್ಲಿ ಆಡುವುದನ್ನು ನೊಡುವ ಅವಕಾಶ ಸಿಗುವುದಿಲ್ಲ.
ವಿಶೇಷವೆಂದರೆ, ಡಬ್ಲ್ಯುಪಿಎಲ್ ಮೊದಲ ಆವೃತ್ತಿಯನ್ನು ಮುಂಬೈನಲ್ಲಿ ಮಾತ್ರ ಎರಡು ಸ್ಥಳಗಳಲ್ಲಿ ಆಡಲಾಯಿತು, ಬ್ರಬೋರ್ನ್ ಕ್ರೀಡಾಂಗಣ ಮತ್ತು ಡಿವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ಪಂದ್ಯಗಳು ನಡೆದಿದ್ದವು.
ಈ ಬಾರಿಯೂ ಎಲ್ಲ ಪಂದ್ಯಗಳನ್ನು ಅಲ್ಲೇ ನಡೆಯುವ ಸಾಧ್ಯತೆಗಳಿವೆ ಎಂಬುದು ಜಯ್ ಶಾ ಹೇಳಿಕೆಯಿಂದ ಅಂದಾಜು ಮಾಡಿಕೊಳ್ಳಬಹುದು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….