ಹರಿತಲೇಖನಿ ದಿನಕ್ಕೊಂದು ಕಥೆ; ಸಂತ ನಿವೃತ್ತಿನಾಥ

ಸಂತ ನಿವೃತ್ತಿನಾಥರು ಸಂತ ಜ್ಞಾನೇಶ್ವರರ ಹಿರಿಯ ಸಹೋದರ ಹಾಗೂ ಗುರುಗಳಾಗಿದ್ದರು. ಸಂಸಾರದಲ್ಲಿ ಮನಸ್ಸು ಒಲಿಯದ ಕಾರಣವಾಗಿ ನಿವೃತ್ತಿನಾಥರ ತಂದೆ ವಿಠ್ಠಲಪಂತರು ಒಂದು ದಿನ ಮನೆಯನ್ನು ತ್ಯಜಿಸಿ ನೇರವಾಗಿ ಕಾಶಿಗೆ ಹೊರಟು ಹೋದರು. ಅಲ್ಲಿ ರಾಮಾನಂದರೆಂಬ ಸದ್ಗುರುಗಳಿದ್ದರು. ವಿಠ್ಠಲಪಂತರು ಅವರಿಂದ ಸನ್ಯಾಸ ದೀಕ್ಷೆಯನ್ನು ಪಡೆದು ಅವರೊಂದಿಗೆ ಅಧ್ಯಯನ ಮಾಡುತ್ತ, ಅವರ ಸೇವೆ ಮಾಡುತ್ತ ಅಲ್ಲಿಯೇ ವಾಸಿಸತೊಡಗಿದರು.

ಮುಂದೆ ಗುರುಗಳ ಆಜ್ಞೆಯಂತೆ ವಿಠ್ಠಲಪಂತರು ಆಳಂದಿಗೆ ಬಂದು ಪುನಃ ಸಂಸಾರವನ್ನು ಪ್ರಾರಂಭಿಸಿದರು. ಅನಂತರ ವಿಠ್ಠಲಪಂತರಿಗೆ ನಾಲ್ಕು ಮಕ್ಕಳಾದರು. ಅವರಲ್ಲಿ ಮೊದಲನೆಯವರು ನಿವೃತ್ತಿನಾಥರು, ಎರಡನೆಯವರು ಜ್ಞಾನೇಶ್ವರರು, ಮೂರನೆಯವರು ಸೋಪಾನದೇವ ಹಾಗೂ ನಾಲ್ಕನೆಯವರು ಮುಕ್ತಾಬಾಯಿ. ವಿಠ್ಠಲಪಂತರು ತಮ್ಮ ಮಕ್ಕಳಿಗೆ ಕಾಲಾನುಸಾರ ಎಲ್ಲವನ್ನೂ ಕಲಿಸಿದರು.

ಒಮ್ಮೆ ವಿಠ್ಠಲಪಂತರು ತಮ್ಮ ಪತ್ನಿ ಹಾಗೂ ಮಕ್ಕಳೊಂದಿಗೆ ತ್ರ್ಯಂಬಕೇಶ್ವರದ ಪಕ್ಕದ ಬೆಟ್ಟದ ಮೇಲೆ ಹೋದರು. ಆ ಬೆಟ್ಟದ ಮೇಲೆ ದಟ್ಟವಾದ ಅರಣ್ಯವಿತ್ತು. ಬೆಟ್ಟದ ಮೇಲೆ ಸುತ್ತಾಡುವಾಗ ಒಂದು ಹುಲಿಯು ಅವರ ಬಳಿ ಧಾವಿಸಿ ಬಂತು. ಅದನ್ನು ನೋಡಿ ಎಲ್ಲರೂ ಗಾಬರಿಗೊಂಡರು. ವಿಠ್ಠಲಪಂತರು ಪತ್ನಿ ಹಾಗೂ ಮಕ್ಕಳೊಂದಿಗೆ ಓಡಿ ಆ ಅರಣ್ಯದಿಂದ ಹೊರಬಂದರು, ಆಗ ಅವರಿಗೆ ಹೋದ ಜೀವ ಬಂದಂತಾಯಿತು; ಆದರೆ ನಿವೃತ್ತಿನಾಥ ಎಲ್ಲಿಯೂ ಕಾಣಿಸಲಿಲ್ಲ! ಸಾಕಷ್ಟು ಹುಡುಕಿದರೂ ನಿವೃತ್ತಿನಾಥ ಸಿಗಲಿಲ್ಲ. ಹೀಗೆ ಏಳು ದಿನಗಳು ಕಳೆದವು ಹಾಗೂ ಎಂಟನೆಯ ದಿನ ನಿವೃತ್ತಿನಾಥ ‘ದತ್ತ’ ಎನ್ನುತ್ತ ಎದುರಿಗೆ ಬಂದು ನಿಂತರು. ಎಲ್ಲರಿಗೂ ಬಹಳ ಆನಂದವಾಯಿತು. ಅವರು ಬಹಳ ತೇಜಸ್ವಿಯಾಗಿ ಕಾಣುತ್ತಿದ್ದರು.

ವಿಠ್ಠಲಪಂತರು ಅವರಿಗೆ ’ಇಷ್ಟು ದಿನ ನೀನು ಎಲ್ಲಿ ಹೊರಟು ಹೋಗಿದ್ದೆ ?’ ಎಂದು ವಿಚಾರಿಸಿದರು. ಆಗ ನಿವೃತ್ತಿನಾಥ ’ಅಪ್ಪಾಜಿ, ಹುಲಿಗೆ ಹೆದರಿ ಓಡುವಾಗ ನಾನೊಂದು ಗುಹೆಯಲ್ಲಿ ಹೊಕ್ಕೆನು. ಅಲ್ಲಿ ಓರ್ವ ಸ್ವಾಮಿ ಕುಳಿತಿದ್ದರು. ಆ ಕತ್ತಲು ತುಂಬಿದ ಗುಹೆಯಲ್ಲಿಯೂ ನನಗೆ ಅವರ ಕಾಂತಿಯು ಸ್ಪಷ್ಟವಾಗಿ ಕಾಣುತ್ತಿತ್ತು. ಅವರ ಹೆಸರು ಗಹಿನಿನಾಥ ಎಂದಾಗಿತ್ತು. ಅವರು ನನಗೆ ಯೋಗವನ್ನು ಕಲಿಸಿದರು ಹಾಗೂ ’ಈಗ ಜಗತ್ತಿನಲ್ಲಿರುವ ನೊಂದ ಜೀವಿಗಳನ್ನು ನೀನು ಸುಖಿಗೊಳಿಸು’, ಎಂದು ಅವರು ಹೇಳಿದರು” ಎಂದು ಹೇಳಿದರು.

ನಂತರ ಮಕ್ಕಳ ಉಪನಯನ ಮಾಡಿಸುವ ಸಮಯ ಬಂತು. ವಿಠ್ಠಲಪಂತರು ಉಪನಯನ ಮಾಡಲು ಮಕ್ಕಳನ್ನು ಆಳಂದಿಗೆ ಕರೆದುಕೊಂಡು ಬಂದರು; ಆದರೆ ಆಳಂದಿಯ ನಿಷ್ಠುರ ಜನರು ಅವರಿಗೆ ’ನೀವು ಸನ್ಯಾಸದಿಂದ ಮರಳಿ ಗೃಹಸ್ಥಾಶ್ರಮವನ್ನು ಸ್ವೀಕರಿಸಿದ್ದೀರಿ. ನಿಮಗೆ ಸಾವಿನ ಪ್ರಾಯಶ್ಚಿತ್ತದ ಹೊರತು ಬೇರೆ ಪ್ರಾಯಶ್ಚಿತ್ತವೇ ಇಲ್ಲ. ಅದನ್ನು ನೀವು ಸ್ವೀಕರಿಸಿದರೆ ಮಾತ್ರ ನಿಮ್ಮ ಮಕ್ಕಳ ಉಪನಯನವಾಗುವುದು’ ಎಂದು ಹೇಳಿದರು.

ಈ ಉತ್ತರವನ್ನು ಕೇಳಿ ವಿಠ್ಠಲಪಂತರು ಮನೆಗೆ ಬಂದರು. ವಿಠ್ಠಲಪಂತರು ಹಾಗೂ ರುಕ್ಮಿಣಿಬಾಯಿ ಮಕ್ಕಳು ಗಾಢ ನಿದ್ರೆಯಲ್ಲಿರುವಾಗ ಮನೆ ಬಿಟ್ಟು ನೇರವಾಗಿ ಪ್ರಯಾಗಕ್ಕೆ ಹೋದರು ಹಾಗೂ ಅಲ್ಲಿ ಗಂಗಾನದಿಯಲ್ಲಿ ಜಲಸಮಾಧಿ ಪಡೆದರು.

ಮಾರನೆಯ ದಿನ ಮಕ್ಕಳು ಎದ್ದಾಗ ಅವರಿಗೆ ತಮ್ಮ ತಂದೆ-ತಾಯಿಯರು ಮನೆಬಿಟ್ಟು ಹೊರಟು ಹೋದ ಸಂಗತಿ ತಿಳಿಯಿತು. ಅವರಿಗಿದ್ದ ಆಧಾರವೇ ವಿಧಿ ಕಸಿದುಕೊಂಡಿತ್ತು. ಎಲ್ಲ ಭಾರವು ನಿವೃತ್ತಿನಾಥರ ಮೇಲೆ ಬಂದಿತು. ನಿವೃತ್ತಿನಾಥರು ಜ್ಞಾನದೇವ, ಸೋಪಾನದೇವ ಹಾಗೂ ಮುಕ್ತಾಯಿಯರನ್ನು ತಂದೆ ತಾಯಿಯಂತೆ ವಾತ್ಸಲ್ಯದಿಂದ ಬೆಳೆಸಿದರು.

ಮುಂದೆ ಗುರು ನಿವೃತ್ತಿನಾಥರ ಆಜ್ಞೆಯಂತೆ ಜ್ಞಾನೇಶ್ವರರು ಸಂಸ್ಕೃತ ಭಾಷೆಯ ಶ್ರೀಮದ ಭಗವದ್ಗೀತೆಯನ್ನು ಸಂಮಾನ್ಯ ಜನರಿಗೆ ತಿಳಿಯುವಂತೆ ಮರಾಠಿ ಭಾಷೆಯಲ್ಲಿ ‘ಜ್ಞಾನೇಶ್ವರಿ’ ಎಂಬ ಅಪ್ರತಿಮವಾದ ಗ್ರಂಥವನ್ನು ಬರೆದರು. ಅನಂತರ ಅವರು ‘ಅಮೃತಾನುಭವ’ಎಂಬ ಗ್ರಂಥವನ್ನು ಬರೆದರು. ಇದರಲ್ಲಿ ಹತ್ತು ಅಧ್ಯಾಯಗಳಿದ್ದು ಸುಮಾರು ಏಳರಿಂದ ಎಂಟುನೂರು ಸಾಲುಗಳಿವೆ; ಆದರೆ ಅದರಲ್ಲಿ ಗಹನವಾದ ಆಧ್ಯಾತ್ಮಿಕ ಅನುಭವ ತುಂಬಿದೆ. ಇದು ಜಗತ್ತಿನ ತತ್ತ್ವಜ್ಞಾನದಲ್ಲಿನ ಒಂದು ಅಪೂರ್ವ ಗ್ರಂಥವಾಗಿದೆ.

ಕೃಪೆ; ಹಿಂದೂ ಜಾಗೃತಿ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

ರಾಜಕೀಯ

ಗ್ಯಾರಂಟಿ ಸಮಿತಿಗಳಿಂದ ಶಾಸಕರ ಘನತೆಗೆ ಕುಂದಿಲ್ಲ: Cmsiddaramaiah

ಗ್ಯಾರಂಟಿ ಸಮಿತಿಗಳಿಂದ ಶಾಸಕರ ಘನತೆಗೆ ಕುಂದಿಲ್ಲ: Cmsiddaramaiah

ಬೆಂಗಳೂರು: ಗ್ಯಾರಂಟಿ ಸಮಿತಿಗಳಿಂದ ಶಾಸಕರ ಘನತೆಗೆ ಕುಂದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ( Cmsiddaramaiah ) ನುಡಿದರು. ಗ್ಯಾರಂಟಿ ಸಮಿತಿಯಿಂದ ಶಾಸಕರ ಘನತೆಗೆ ದಕ್ಕೆಯಾಗಿದೆ ಎಂಬ ಕುರಿತು ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕರ ಆರೋಪಕ್ಕೆ ಪ್ರತಿಕ್ರಿಯಿಸಿದರು.

[ccc_my_favorite_select_button post_id="104074"]
ಕೇಂದ್ರಕ್ಕೆ ಮಹತ್ವದ ವಿವಿಧ ಬೇಡಿಕೆಗಳನ್ನಿಟ್ಟ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ

ಕೇಂದ್ರಕ್ಕೆ ಮಹತ್ವದ ವಿವಿಧ ಬೇಡಿಕೆಗಳನ್ನಿಟ್ಟ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ

ನವದೆಹಲಿ: ಕರ್ನಾಟಕದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಮೈಸೂರು ಮತ್ತು ಧಾರವಾಡ ವಿವಿಗಳು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಕೇಂದ್ರ ಸರ್ಕಾರ ನೆರವಿಗೆ ಧಾವಿಸಬೇಕು ಎಂದು ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡ (HD Deve Gowda) ಅವರು ಮನವಿ

[ccc_my_favorite_select_button post_id="103998"]
ಸಿಎಂ ಸಿದ್ದರಾಮಯ್ಯರ ಭೇಟಿಯಾದ ತಮಿಳುನಾಡು ಅರಣ್ಯ ಸಚಿವ.. ಮಹತ್ವದ ಚರ್ಚೆ

ಸಿಎಂ ಸಿದ್ದರಾಮಯ್ಯರ ಭೇಟಿಯಾದ ತಮಿಳುನಾಡು ಅರಣ್ಯ ಸಚಿವ.. ಮಹತ್ವದ ಚರ್ಚೆ

ಬೆಂಗಳೂರು; ತಮಿಳುನಾಡಿನ ಅರಣ್ಯ ಸಚಿವರಾದ ಡಾ.ಕೆ.ಪೊನ್ನುಮುಡಿ ಮತ್ತು ರಾಜ್ಯಸಭಾ ಸದಸ್ಯರಾದ ಮೊಹಮದ್ ಅಬ್ದುಲ್ಲಾ ಇಸ್ಮಾಯಿಲ್ ಅವರು ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Cmsiddaramaiah) ಅವರನ್ನು ಭೇಟಿಯಾದರು. ಈ ವೇಳೆ ಕೇಂದ್ರ ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ

[ccc_my_favorite_select_button post_id="104024"]
los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

ಹಾಲಿವುಡ್ ಹಿಲ್ ಹಾಗೂ ಸ್ಟುಡಿಯೋ ಸಿಟಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ವಿಮಾನ, ಹೆಲಿಕಾಪ್ಟರ್ ಗಳ ಮೂಲಕ ನೀರು ಸಿಂಪಡಿಸಿ ನಂದಿಸಲಾಗಿತ್ತು los Angeles fire

[ccc_my_favorite_select_button post_id="100721"]

ಕ್ರೀಡೆ

Champions Trophy; ಭಾರತದ ಮುಡಿಯೇರಿದ ಚಾಂಪಿಯನ್ಸ್ ಟ್ರೋಫಿ

Champions Trophy; ಭಾರತದ ಮುಡಿಯೇರಿದ ಚಾಂಪಿಯನ್ಸ್ ಟ್ರೋಫಿ

ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಸರಣಿಯ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸಿದ ಭಾರತ ಚಾಂಪಿಯನ್ಸ್ ಟ್ರೋಫಿಯನ್ನು (Champions Trophy) ತನ್ನದಾಗಿಸಿಕೊಂಡಿದೆ. ಟಾಸ್‌ ಗೆದ್ದು ಬ್ಯಾಟಿಂಗ್ ಮಾಡಿದ ಕೀವಿಸ್ ಪಡೆ 50 ಓವರ್‌ಗಳಲ್ಲಿ 7

[ccc_my_favorite_select_button post_id="103912"]
Doddaballapura: ನೇಣು ಬಿಗಿದುಕೊಂಡು ಅಪ್ರಾಪ್ತ ಬಾಲಕ ಆತ್ಮಹತ್ಯೆ..!

Doddaballapura: ನೇಣು ಬಿಗಿದುಕೊಂಡು ಅಪ್ರಾಪ್ತ ಬಾಲಕ ಆತ್ಮಹತ್ಯೆ..!

ದೊಡ್ಡಬಳ್ಳಾಪುರ: ಸುಮಾರು 15 ವರ್ಷದ ಅಪ್ರಾಪ್ತ ಬಾಲಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ತಾಲೂಕಿನ ಪಿಂಡಕೂರುತಿಮ್ಮನಹಳ್ಳಿ ಹೊರವಲಯದಲ್ಲಿ ಸಂಭವಿಸಿದೆ. ಮೃತನನು ಪಿಂಡಕೂರುತಿಮ್ಮನಹಳ್ಳಿ ನಿವಾಸಿಗಳಾದ ಮಂಜಮ್ಮ, ಸುಬ್ಬರಾಯಪ್ಪ ದಂಪತಿಗಳ ಪುತ್ರ 15 ವರ್ಷ ರವಿಕುಮಾರ ಎಂದು ಗುರುತಿಸಲಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದು

[ccc_my_favorite_select_button post_id="104085"]

ಅತ್ತೆ-ಸೊಸೆ ಜಗಳ: ತಾಯಿ, ಮಗ ಆತ್ಮಹತ್ಯೆ

[ccc_my_favorite_select_button post_id="104008"]

ರೌಡಿಶೀಟರ್ ಬರ್ಬರ ಹತ್ಯೆ; ಐವರ ಬಂಧನ

[ccc_my_favorite_select_button post_id="103919"]

Suicide: ಬಸ್ ನಲ್ಲೇ ನೇಣಿಗೆ ಶರಣಾದ ಸಾರಿಗೆ

[ccc_my_favorite_select_button post_id="103856"]

ಮದುವೆ ಹಿಂದಿನ ದಿನ ವರ ಪರಾರಿ: FIR

[ccc_my_favorite_select_button post_id="103742"]
Doddaballapura: ಅಪಘಾತ.. ಶಿಕ್ಷಕನಿಗೆ ಗಂಭೀರ ಪೆಟ್ಟು..!

Doddaballapura: ಅಪಘಾತ.. ಶಿಕ್ಷಕನಿಗೆ ಗಂಭೀರ ಪೆಟ್ಟು..!

ದೊಡ್ಡಬಳ್ಳಾಪುರ (Doddaballapura): ಕಾರಿನಲ್ಲಿದ್ದವರು ಏಕಾಏಕಿ ಬಾಗಿಲು ತೆರೆದ ಪರಿಣಾಮ ಆಟೋದಲ್ಲಿ ತೆರಳುತ್ತಿದ್ದ ಶಿಕ್ಷಕನಿಗೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಡಿಕ್ರಾಸ್ ರಸ್ತೆಯಲ್ಲಿ ಸಂಭವಿಸಿದೆ. ಗಾಯಗೊಂಡವರನ್ನು ತಾಲೂಕಿನ ಆರೂಢಿಯ ಶ್ರೀ ಅರವಿಂದ ಪ್ರೌಢಶಾಲೆಯ ಶಿಕ್ಷಕ ಸಿದ್ದಲಿಂಗಯ್ಯ ಎಂದು

[ccc_my_favorite_select_button post_id="104081"]

ಆರೋಗ್ಯ

ಸಿನಿಮಾ

ಸಿನಿಮಾದವರ ನೆಟ್ಟು, ಬೋಲ್ಟು ಟೈಟ್ ಮಾಡುವ ಕಾರ್ಯ ಆರಂಭ..?

ಸಿನಿಮಾದವರ ನೆಟ್ಟು, ಬೋಲ್ಟು ಟೈಟ್ ಮಾಡುವ ಕಾರ್ಯ ಆರಂಭ..?

ತುಮಕೂರು: ಬೆಂಗಳೂರು ನಡೆದ ಅಂತರರಾಷ್ಟ್ರೀಯ ಫಿಲಂ ಫೆಸ್ಟಿವಲ್ ಕಾರ್ಯಕ್ರಮಕ್ಕೆ ಗೈರಾದ ಖ್ಯಾತ ನಟ, ನಟಿಯರ ಕುರಿತು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ (DK Shivakumar) ಚಿತ್ರರಂಗದವರ ನಟ್ಟು ಬೋಲ್ಟು ಟೈಟು ಮಾಡುತ್ತೇನೆ ಎಂದು

[ccc_my_favorite_select_button post_id="103709"]
error: Content is protected !!