ಮಂಡ್ಯ, (ಡಿ.11); ಈಚೆಗೆ ರೈತರ ಮಕ್ಕಳಿಗೆ ಹೆಣ್ಣುಕೊಡುತ್ತಿಲ್ಲ, ಹೀಗಾಗಿ ಪಾದಯಾತ್ರೆ ಮೂಲಕ ದೇವರ ಮೊರೆ ಹೋಗಿದ್ದ ಮಂಡ್ಯದ ಯುವಕರು ಇದೀಗ ಒಂದು ಹೆಜ್ಜೆ ಮುಂದೆ ಹೋಗಿ ಬ್ರಹ್ಮಚಾರಿ ಸಂಘವನ್ನು ಕಟ್ಟಿಕೊಂಡಿದ್ದಾರೆ.
ದೇಶಾದ್ಯಂತ ಸಂಘವನ್ನು ವಿಸ್ತರಿಸಲು ಮುಂದಾಗಿರುವ ಯುವಕರು, ರಾಹುಲ್ ಗಾಂಧಿ ಅವರಿಗೆ ಅಖಿಲ ಭಾರತ ಬ್ರಹ್ಮಚಾರಿಗಳ ಸಂಘದ ಅಧ್ಯಕ್ಷರಾಗುವಂತೆ ಆಹ್ವಾನ ಕೊಟ್ಟಿದ್ದಾರೆ.
ಕೆ.ಎಂ.ದೊಡ್ಡಿಯಿಂದ ಆದಿಚುಂಚನಗಿರಿಗೆ ಕಿಮೀ ಪಾದಯಾತ್ರೆ ನಡೆಸಲು ತೀರ್ಮಾನಿಸಲಾಗಿದ್ದು, ರಾಹುಲ್ ಅವರನ್ನು ಕರೆಸಲು ಸಂಘ ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….