ನವದೆಹಲಿ, (ಡಿ.11); ಕ್ರಿಕೆಟ್ ನಲ್ಲಿ ‘ಸ್ಟಾಪ್ಪಿಂಗ್ ಕ್ಲಾಕ್’ ಎಂಬ ಹೊಸ ನಿಯಮ ಜಾರಿಗೆ ಬರಲಿದೆ. ನಾಳೆಯಿಂದ ಆರಂಭವಾಗಲಿರುವ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ಟಿ20 ಸರಣಿಯಲ್ಲಿ ಪ್ರಾಯೋಗಿಕವಾಗಿ ಇದನ್ನು ಪರಿಚಯಿಸಲಾಗುತ್ತಿದೆ.
ಈ ಹೊಸ ನಿಯಮದ ಪ್ರಕಾರ, ಬೌಲಿಂಗ್ ತಂಡವು ತಮ್ಮ ಮುಂದಿನ ಓವರ್‌ನ ಮೊದಲ ಎಸೆತವನ್ನು ಹಿಂದಿನ ಓವರ್‌ನ 60 ಸೆಕೆಂಡುಗಳಲ್ಲಿ ಬೌಲ್ ಮಾಡಲು ಸಿದ್ಧರಾಗಿರಬೇಕು. ಇಲ್ಲದಿದ್ದರೆ, ಬೌಲಿಂಗ್ ತಂಡಕ್ಕೆ 5 ರನ್ ಗಳ ದಂಡವನ್ನು ವಿಧಿಸಲಾಗುತ್ತದೆ.
ಆಟದ ವೇಗವನ್ನು ಹೆಚ್ಚಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಐಸಿಸಿ ಹೇಳಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….