ದೊಡ್ಡಬಳ್ಳಾಪುರ, (ಡಿ.11); ಕಾರ್ತಿಕ ಮಾಸದ ಕಡೆಯ ಸೋಮವಾರದ ಅಂಗವಾಗಿ, ನಗರದ ಕೊಂಗಾಡಿಯಪ್ಪ ಕಾಲೇಜು ರಸ್ತೆಯಲ್ಲಿನ ಶ್ರೀ ಬಯಲು ಬಸವಣ್ಣ ದೇವಾಲಯದ ಬಳಿ ಕಡಲೇಕಾಯಿ ಪರಿಷೆ ನಡೆಯಿತು.
ಶ್ರೀ ಮಂಜುನಾಥಸ್ವಾಮಿಗೆ, ಬಸವಣ್ಣ ಹಾಗೂ ಗಣಪತಿ ದೇವತಾ ಮೂರ್ತಿಗಳಿಗೆ ವಿಶೇಷ ಕಡಲೇ ಕಾಯಿ ಅಲಂಕಾರ ಮಾಡಲಾಗಿತ್ತು.
ದೇವಾಲಯಕ್ಕೆ ಆಗಮಿಸಿದ್ದ ಸಹಸ್ರಾರು ಭಕ್ತಾದಿಗಳಿಗೆ ಕಡಲೇಕಾಯಿ ಪ್ರಸಾದ ವಿತರಿಸಲಾಯಿತು.
ತಾಲೂಕಿನ ಶಿರವಾರ, ಅಂತರಹಳ್ಳಿ ಗ್ರಾಮದಲ್ಲಿನ ತೋಪಿನ ಬಸವೇಶ್ವರಸ್ವಾಮಿ ಗ್ರಾಮದಲ್ಲಿ ತೋಪಿನ ಬಸವೇಶ್ವರಸ್ವಾಮಿ ಕಡಲೇಕಾಯಿ ಜಾತ್ರಾ ಮಹೋತ್ಸವ, ಬಸವೇಶ್ವರ ಸ್ವಾಮಿ ಉತ್ಸವ ನಡೆಯಿತು.
ಕಾರ್ತಿಕ ಮಾಸದ ವಿಶೇಷ ವಿಶೇಷ ಅಲಂಕಾರಗಳು; ತಾಲೂಕಿನ ತೂಬಗೆರೆ ಹೋಬಳಿ ಕೊಂಡಸಂದ್ರದ ಕಾಶಿ ವಿಶ್ವನಾಥ ದೇವಾಲಯದಲ್ಲಿ ಲಕ್ಷ ದೀಪೋತ್ಸವ,ಸಹಸ್ರ ಬಿಲ್ವಾರ್ಚನೆ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ನಗರದ ಸ್ವಯಂಬುಕೇಶ್ವರ (ಸೋಮೇಶ್ವರ) ದೇವಾಲಯದಲ್ಲಿ ಸ್ವಾಮಿಗೆ ವಿಶೇಷ ಅಲಂಕಾರ ಹಾಗೂ ಸಂಜೆ ಲಕ್ಷ ದೀಪೋತ್ಸವ ನಡೆಯಿತು. ದೇವಾಲಯದ ಆವರಣದಲ್ಲಿ ಭಕ್ತಾದಿಗಳು ದೀಪದಾರತಿ ಮಾಡಿ ಪೂಜೆ ಸಲ್ಲಿಸಿದರು. ಬಸವೇಶ್ವರ ನಗರ, ಕುವೆಂಪುನಗರದ ಭಕ್ತಾದಿಗಳಿಂದ ಪ್ರಸಾದ ವಿನಿಯೋಗ ಹಮ್ಮಿಕೊಳ್ಳಲಾಗಿತ್ತು.
ತಾಲೂಕಿನ ಮಧುರೆ ಹೋಬಳಿ ಮಾರಸಂದ್ರ ಗ್ರಾಮದ ಶ್ರೀ ಕೊಂಡದಮ್ಮ (ಈರಮಾಸ್ತಮ್ಮ) ದೇವಾಲಯದಲ್ಲಿ 13ನೇ ವರ್ಷದ ಲಕ್ಷ ದೀಪೋತ್ಸವ ಹಾಗೂ ವಿಶೇಷ ಅಲಂಕಾರ ಪೂಜಾ ಕಾರ್ಯಕ್ರಮಗಳು ನಡೆದವು.
ನಗರದ ನಗರೇಶ್ವರ ಸ್ವಾಮಿ, ಸಪ್ತಮಾತೃಕ ಮಾರಿಯಮ್ಮ, ಕಾಶಿ ವಿಶ್ವೇಶ್ವರ, ಶ್ರೀ ರಾಮಲಿಂಗ ಚಂದ್ರ ಚೌಡೇಶ್ವರಿ ದೇವಾಲಯ, ಶ್ರೀನಗರದ ಶ್ರೀ ಮಲೈ ಮಾದೇಶ್ವರ ಸ್ವಾಮಿ, ಶ್ರೀಕಂಠೇಶ್ವರ ಸ್ವಾಮಿ ದೇವಾಲಯಗಳಲ್ಲಿ ಕಾರ್ತಿಕ ಕಡೆಯ ಸೋಮವಾರದ ಅಂಗವಾಗಿ ವಿಶೇಷ ಅಲಂಕಾರ ಹಾಗೂ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ತಾಲೂಕಿಗೆ ಸಮೀಪದ ಕಣಿವೆಪುರದ ಕಣಿವೆ ಬಸವಣ್ಣನಿಗೆ ಕಾರ್ತಿಕ ಕಡೆಯ ಸೋಮವಾರದ ಅಂಗವಾಗಿ ವಿಶೇಷ ಅಲಂಕಾರ ಹಾಗೂ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಬಾಶೆಟ್ಟಿಹಳ್ಳಿಯ ಬಸವಣ್ಣ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು.
ಆರೂಢಿಯ ಶ್ರೀ ಕೋಡಿ ಮಲ್ಲೇಶ್ವರದ ಸ್ವಾಮಿ ದೇವಾಲಯದಲ್ಲಿ ವಿಶೇಷ ಅಲಂಕಾರ, ಪೂಜಾ ಕಾರ್ಯಕ್ರಮ ನಡೆಯಿತು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….