01. ಈ ಕೆಳಗಿನವರುಗಳಲ್ಲಿ ಯಾರು ಕುತ್ಪುದ್ದೀನ್ ಐಬಕ್ ನನ್ನು ಗುಲಾಮನನ್ನಾಗಿ ಖರೀದಿಸಿದ್ದನು.?
- ಎ. ಅಲ್ಲಾವುದ್ದೀನ್ ಖಿಲ್ಜಿ
- ಬಿ. ಮಹಮ್ಮದ್ ಘೋರಿ
- ಸಿ. ಮಹಮ್ಮದ್ ಬಿನ್ ತುಘಲಕ್
- ಡಿ. ಮೇಲಿನ ಯಾರು ಅಲ್ಲ
ಉತ್ತರ: ಬಿ) ಮಹಮ್ಮದ್ ಘೋರಿ
02. ರಾಮಾನುಜಾಚಾರ್ಯರು ಪ್ರತಿಪಾದಿಸಿದ ತತ್ವ ಯಾವುದು.?
- ಎ. ಅದ್ವೈತ
- ಬಿ. ವಿಶಿಷ್ಟಾದ್ವೈತ
- ಸಿ. ದ್ವೈತ
- ಡಿ. ಶಕ್ತಿ ವಿಶಿಷ್ಟಾದ್ವೈತ
ಉತ್ತರ: ಬಿ) ವಿಶಿಷ್ಟಾದ್ವೈತ
03. “ಭಾರತದ ಗಿಳಿ” ಎಂದು ಈ ಕೆಳಗಿನವರುಗಳಲ್ಲಿ ಯಾರನ್ನು ಕರೆಯುತ್ತಾರೆ.?
- ಎ. ಅಮಿರ್ ಖುಸ್ರು
- ಬಿ. ಅಲ್ಬೋರೋನಿ
- ಸಿ. ಬಲ್ಬನ್
- ಡಿ. ಮೇಲಿನ ಯಾರು ಅಲ್ಲ
ಉತ್ತರ: ಎ) ಅಮಿರ್ ಖುಸ್ರು
04. ಈ ಕೆಳಗಿನವುಗಳಲ್ಲಿ ಪಿಸುಗುಟ್ಟವ ಗ್ಯಾಲರಿ ಇರುವ ಐತಿಹಾಸಿಕ ಸ್ಮಾರಕ ಯಾವುದು.?
- ಎ. ಚಾರ್ ಮಿನಾರ್
- ಬಿ. ತಾಜ್ ಮಹಲ್
- ಸಿ. ಗೋಲ್ ಗುಮ್ಮಟ
- ಡಿ. ಸಂಗೀತ ಮಹಲ್
ಉತ್ತರ: ಸಿ) ಗೋಲ್ ಗುಮ್ಮಟ
05. ಇತಿಹಾಸ ಪ್ರಸಿದ್ಧ ‘ ಚೆನ್ನಕೇಶವ ‘ ದೇವಾಲಯದ ಶಿಲ್ಪ ಶೈಲಿ ಯಾವುದು.?
- ಎ. ವೇಸರ ಶೈಲಿ
- ಬಿ. ನಾಗರ ಶೈಲಿ
- ಸಿ. ದ್ರಾವಿಡ ಶೈಲಿ
- ಡಿ. ಹೊಯ್ಸಳ ಶೈಲಿ
ಉತ್ತರ: ಡಿ) ಹೊಯ್ಸಳ ಶೈಲಿ
06. ಈ ಕೆಳಗಿನವುಗಳಲ್ಲಿ ಶಾರದಾ ಕಾಯ್ದೆಯು ಯಾವುದಕ್ಕೆ ಸಂಬಂಧಿಸಿದೆ.?
- ಎ. ವಿಧವಾ ಪುನರ್ ವಿವಾಹ
- ಬಿ. ಬಾಲ್ಯ ವಿವಾಹ
- ಸಿ. ಬಹುಪತ್ನಿತ್ವ
- ಡಿ. ಅಂತರ್ಜಾತಿ ವಿವಾಹ
ಉತ್ತರ: ಬಿ) ಬಾಲ್ಯ ವಿವಾಹ
07. “ಮಾನವ ಒಂದು ಸಾಮಾಜಿಕ ಪ್ರಾಣಿ” ಎಂದು ಹೇಳಿದವರು ಯಾರು.?
- ಎ. ಅರಿಸ್ಟಾಟಲ್
- ಬಿ. ಎಮೈಲ್ ಡರ್ಕಿಮ್
- ಸಿ. ಪ್ಲೇಟೋ
- ಡಿ. ಆಗಸ್ಟ್ ಕಾಂಮ್ಟೆ
ಉತ್ತರ: ಎ) ಅರಿಸ್ಟಾಟಲ್
08. ಖ್ಯಾತ ಕವಿ “ಹರಿವಂಶ ರಾಯ್ ಬಚ್ಚನ್” ಜನಿಸಿದ್ದು ಯಾವಾಗ.?
- ಎ. 1907
- ಬಿ. 1919
- ಸಿ. 1807
- ಡಿ.1818
ಉತ್ತರ: ಎ) 1907
09. 2022 ನೇ ಸಾಲಿನ ರಾಷ್ಟ್ರೀಯ ಬೀಜ ಕಾಂಗ್ರೆಸ್ ನಡೆದ ಸ್ಥಳ ಯಾವುದು.?
- ಎ. ಮಧುರೈ
- ಬಿ. ವಿಶಾಖಪಟ್ಟಣ
- ಸಿ. ತಮಿಳುನಾಡು
- ಡಿ. ಗ್ವಾಲಿಯರ್
ಉತ್ತರ: ಡಿ) ಗ್ವಾಲಿಯರ್
10. ಸಂಡೂರು ಭೂ ಪ್ರದೇಶವು ಈ ಕೆಳಗಿನ ಯಾವ ನಿಕ್ಷೇಪ ಹೊಂದಿದೆ.?
- ಎ. ಉಕ್ಕಿನ ಅದಿರು
- ಬಿ. ತಾಮ್ರದ ಅದಿರು
- ಸಿ. ಕಬ್ಬಿಣದ ಅದಿರು
- ಡಿ. ಚಿನ್ನದ ಅದಿರು
ಉತ್ತರ: ಸಿ) ಕಬ್ಬಿಣದ ಅದಿರು
ಸಂಗ್ರಹ ವರದಿ: ಮುರುಳಿ ಮೆಳೇಕೋಟೆ, ದೊಡ್ಡಬಳ್ಳಾಪುರ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….