ಹೈದರಾಬಾದ್, (ನ.27): ತೆಲಂಗಾಣವನ್ನು ಬಿಆರ್‌ಎಸ್ ಕಪಿಮುಷ್ಠಿಯಿಂದ ಬಿಜೆಪಿ ಹೊರತರಲಿದೆ. ಆಡಳಿತ ಪಕ್ಷದ ಭ್ರಷ್ಟ ನಾಯಕರನ್ನು ಜೈಲಿಗೆ ಕಳುಹಿಸುವುದು ನಮ್ಮ ಪಕ್ಷದ ಸಂಕಲ್ಪ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮೆಹಬೂಬಾಬಾದ್ ನಗರದಲ್ಲಿ ನಡೆದ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ತೆಲಂಗಾಣವನ್ನು ಬಿಆರ್‌ಎಸ್ ಕಪಿಮುಷ್ಠಿಯಿಂದ ಹೊರತರುವುದು ಕೇಸರಿ ಪಕ್ಷವು ತನ್ನ ಜವಾಬ್ದಾರಿ ಎಂದು ಪರಿಗಣಿಸುತ್ತದೆ, ಬಿಜೆಪಿ ಸರ್ಕಾರ ರಚಿಸಿದರೆ ಕೆಸಿಆರ್ (ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್) ಇಲ್ಲಿ ಏನೇ ಹಗರಣಗಳಲ್ಲಿ ಭಾಗಿಯಾಗಿದ್ದರೂ ತನಿಖೆ ನಡೆಸಲಾಗುವುದು.
ತೆಲಂಗಾಣದ ಬಡವರಿಗೆ ಮತ್ತು ಯುವಕರಿಗೆ ದ್ರೋಹ ಮಾಡಿದವರನ್ನು ಬಿಡುವುದಿಲ್ಲ ಎಂದು ಹೇಳಿದ ಅವರು, ಬಿಆರ್‌ಎಸ್‌ನ ಭ್ರಷ್ಟರನ್ನು ಜೈಲಿಗೆ ಕಳುಹಿಸುವುದು ನಮ್ಮಸಂಕಲ್ಪ. ತೆಲಂಗಾಣ ಜನರು ಈಗಾಗಲೇ ಕೆಸಿಆರ್ ಸರ್ಕಾರವನ್ನು ಕಿತ್ತೊಗೆಯಲು ನಿರ್ಧರಿಸಿದ್ದಾರೆ ಎಂದರು.
ಕಾಂಗ್ರೆಸ್ ಮತ್ತು ಬಿಆರ್ಎಸ್ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, ತೆಲಂಗಾಣವನ್ನು ನಾಶ ಮಾಡಿದಕ್ಕಾಗಿ ಎರಡೂ ಪಕ್ಷಗಳನ್ನು ಸಮಾನ ಹೊಣೆಗಾರರನ್ನಾಗಿ ಮಾಡಿದ್ದಾರೆ ಎಂದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….