ದೊಡ್ಡಬಳ್ಳಾಪುರ, (ಸೆ.15): ಸುಮಾರು 40-45 ವರ್ಷದ ನಡುವಿನ ಅಪರಿಚಿತ ಪುರುಷನೋರ್ವ ರೈಲಿಗೆ ಸಿಲುಕಿ ಸಾವನಪ್ಪಿರುವ ಘಟನೆ ದೊಡ್ಡಬಳ್ಳಾಪುರ ವಡ್ಡರಹಳ್ಳಿ ರೈಲು ನಿಲ್ದಾಣಗಳ ನಡುವಿನ ಡಿಕ್ರಾಸ್ ಸಮೀಪದ ಮೇಲ್ ಸೇತುವೆ ಕೆಳಗೆ ಸಂಭವಿಸಿದೆ.
ಮೃತರ ಚಹರೆ: ವಯಸ್ಸು ಸುಮಾರು 40-45 ವರ್ಷ,ಎತ್ತರ ಸುಮಾರು 5″5 ಅಡಿಗಳು, ಎಣ್ಣೆ ಗೆಂಪು ಮೈಬಣ್ಣ, ಕಪ್ಪು ತಲೆ ಕೂದಲು ಬಿಟ್ಟಿದ್ದು ಮೃತರು ಸಾದಾರಣ ಶರೀರ ಹೊಂದಿರುತ್ತಾರೆ.
ಬಟ್ಟೆಗಳು: ಸಿಮೆಂಟ್ ಬಣ್ಣದ ಶರ್ಟ್, ನೀಲಿ ಚೆಕ್ಸ್ ಬಣ್ಣದ ಲುಂಗಿ ಧರಿಸಿರುತ್ತಾರೆ ಮತ್ತು ಬಲ ಕೈನಲ್ಲಿ ಬಾಹುಬಲಿ, ಮಂಜುಳ ಎಂದು ಹಚ್ಚೆ ಗುರುತು ಇದೆ.
ಮೃತರ ವಾರಸುದಾರರು ಇದ್ದಲ್ಲಿ ಬೆಂಗಳೂರು ಗ್ರಾಮಾಂತರ ರೈಲ್ವೆ ಪೊಲೀಸ್ ಅಥವಾ ದೊಡ್ಡಬಳ್ಳಾಪುರ ರೈಲ್ವೆ ಪೊಲೀಸರನ್ನು ಮೊಬೈಲ್ ಸಂಖ್ಯೆ :9480802118, 9480802143 ಸಂಪರ್ಕಿಸುವಂತೆ ರೈಲ್ವೆ ಪೊಲೀಸರು ಮನವಿ ಮಾಡಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….