ದೊಡ್ಡಬಳ್ಳಾಪುರ, (ಸೆ.15): ಇಲ್ಲಿನ ಆರ್ ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇಂದು ಇಂಜಿನಿಯರ್ಸ್ ಡೇ ಆಚರಿಸಲಾಯಿತು.
ಕಾಲೇಜಿನ ಪ್ರಾಂಶುಪಾಲರಾದ ಡಾ.ಪಿ.ವಿಜಯ ಕಾರ್ತಿಕ್ ಮಾತನಾಡಿ, ಡಾ.ಸರ್.ಎಂ.ವಿಶ್ವೇಶ್ವರಯ್ಯ ಅವರು. ಆಧುನಿಕ ಮೈಸೂರಿನ ಪಿತಾಹಮ ಎಂದು ಕರೆಯಲ್ಪಡುವ ಒಬ್ಬ ಇಂಜಿನಿಯರ್ ಆಗಿ ರಾಷ್ಟ್ರ ನಿರ್ಮಾಣದ ಅಭಿವೃದ್ಧಿಯ ಕಾರ್ಯದಲ್ಲಿ ಮಹತ್ತರ ಕೊಡುಗೆಯನ್ನು ನೀಡಿದ್ದಾರೆ.
ಹೈದರಾಬಾದ್ನಲ್ಲಿ ಪ್ರವಾಹ ನಿಯಂತ್ರಣ ವ್ಯವಸ್ಥೆ, ಮೈಸೂರಿನಲ್ಲಿರುವ ಕೃಷ್ಣರಾಜ ಸಾಗರ ಅಣೆಕಟ್ಟು ಮುಂತಾದ ಸಾಮಾನ್ಯ ಜನರಿಗೆ ಉಪಯುಕ್ತವಾಗುವಂತಹ ಕಾರ್ಯಗಳಿಂದ ಹಿಡಿದು, ಮೈಸೂರು ಸೋಪ್ ಫ್ಯಾಕ್ಟರಿ, ಉಕ್ಕಿನ ಕಾರ್ಖಾನೆ, ಬೆಂಗಳೂರು ಕೃಷಿ ವಿಶ್ವ ವಿದ್ಯಾನಿಲಯ ಮತ್ತು ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳನ್ನು ಸ್ಥಾಪಿಸುವಲ್ಲಿ ಇವರು ಪ್ರಮುಖ ಪಾತ್ರವನ್ನು ವಹಿಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಆರ್ ಎಲ್ ಜಾಲಪ್ಪ ವಿದ್ಯಾ ಸಂಸ್ಥೆಯ ಆಡಳಿತಾಧಿಕಾರಿ ಹಾಗೂ ಇಂಜಿನಿಯರ್ ರಮೇಶ್ ಕುಮಾರ್ ಐ ಎಂ ಅವರನ್ನು ಸನ್ಮಾನಿಸಲಾಯಿತು.
ಈ ವೇಳೆ ಮಾತನಾಡಿದ ಅವರು, ಡಾ.ಸರ್.ಎಂ.ವಿಶ್ವೇಶ್ವರಯ್ಯ ಅವರು, ಕೇವಲ ಇಂಜಿನಿಯರ್ ಅಲ್ಲದೆ ಸಾಹಿತ್ಯ ಕ್ಷೇತ್ರಕ್ಕೆ ತಮ್ಮ ಅಪರಾಧ ಕೊಡುಗೆಯನ್ನು ನೀಡಿದ್ದಾರೆ. 1913ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತನ್ನು ಪ್ರಾರಂಭಿಸಿದರು. ವಿಶ್ವೇಶ್ವರಯ್ಯ ಅವರು ಕೇವಲ ಇಂಜಿನಿಯರ್ ಮಾತ್ರವಲ್ಲದೆ ಒಬ್ಬ ವಿಜ್ಞಾನಿಯೂ ಕೂಡ, ಭಾರತ ದೇಶದ ಅಣೆಕಟ್ಟುಗಳಿಗೆ ಸ್ವಯಂ ಚಾಲಿತ ಡ್ಯಾಮ್ ಬಾಗಿಲುಗಳನ್ನು ಕಂಡುಹಿಡಿದ ಪ್ರಪಂಚದ ಏಕೈಕ ವಿಜ್ಞಾನಿ ಎಂದರು.
ಕಾರ್ಯಕ್ರಮದಲ್ಲಿ ಮಾನವ ಸಂಪನ್ಮೂಲ ಅಧಿಕಾರಿ ಬಾಬುರೆಡ್ಡಿ ನಾಗಸಂದ್ರ, ಉಪ ಪ್ರಾಂಶುಪಾಲರಾದ ಡಾ.ಶಿವಪ್ರಸಾದ್, ಅಕಾಡೆಮಿ ಡೈರೆಕ್ಟರ್ ಡಾ.ಶ್ರೀನಿವಾಸ್ ರೆಡ್ಡಿ, ದೈಹಿಕ ಶಿಕ್ಷಣದ ಉಪನ್ಯಾಸಕರಾದ ದಾದಾಪೀರ್, ಪ್ರಭಾಕರ್, ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಡಾ.ಹನುಮಂತೇಗೌಡ, ಇಸಿ ಡಿಪಾರ್ಟ್ಮೆಂಟಿನ ಮುಖ್ಯಸ್ಥ ಡಾ.ಅನಿಲ್ ಮತ್ತಿತರರಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….