ಬೆಂಗಳೂರು, (ಸೆ.08): ನಮಸ್ಕಾರ ದೇವರು ಎನ್ನುತ್ತಲೇ ವಿಶ್ವಪರ್ಯಟನೆ ಮಾಡುತ್ತಿರುವ ಕನ್ನಡದ ಜಾಗತಿಕ ರಾಯಭಾರಿ ಡಾ.ಬ್ರೋ (ಗಗನ್ ಶ್ರೀನಿವಾಸ್) ಯೂ-ಟ್ಯೂಬ್ನಲ್ಲಿ ಅವರ ಸಬ್ಸ್ಕ್ರೈಬರ್ಸ್ ಸಂಖ್ಯೆ 2 ಮಿಲಿಯನ್ (20) ಲಕ್ಷ ಆಗಿದೆ. ಅಲ್ಲದೆ, ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಮ್ನಲ್ಲೂ ಅವರ ಫಾಲೋವರ್ಸ್ ಸಂಖ್ಯೆ ಈಗಾಗಲೇ ಮಿಲಿಯನ್ ದಾಟಿದೆ.
ಇತ್ತೀಚೆಗಷ್ಟೇ ಯೂಟ್ಯೂಬ್ನಲ್ಲಿ 2 ಮಿಲಿಯನ್ ಸಬ್ಸ್ಕ್ರೈಬರ್ಸ್ ಹೊಂದಿದ ಡಾ.ಬ್ರೋ, ಫೇಸ್ಬುಕ್ನಲ್ಲಿ 1.6 ಮಿಲಿಯನ್ ಹಾಗೂ ಇನ್ಸ್ಟಾಗ್ರಾಮ್ನಲ್ಲಿ 1.3 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಇನ್ನೊಂದೆಡೆ ಎಕ್ಸ್ನಲ್ಲೂ ಇತ್ತೀಚೆಗೆ ಸಕ್ರಿಯರಾಗಿರುವ ಅವರಿಗೆ ಅಲ್ಲಿಯೂ ಫಾಲೋವರ್ಸ್ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ವಿಜಯವಾಣಿ ವರದಿ ತಿಳಿಸಿದೆ.
ಕಳೆದ ಡಿಸೆಂಬರ್ನಲ್ಲಿ ಯೂಟ್ಯೂಬ್ನಲ್ಲಿ ಡಾ.ಬ್ರೋ ಸಬ್ಸ್ಕ್ರೈಬರ್ಸ್ ಸಂಖ್ಯೆ 1 ಮಿಲಿಯನ್ ದಾಟಿತ್ತು. ಅದಾಗಿ 9 ತಿಂಗಳು ಕಳೆಯುವಷ್ಟರಲ್ಲಿ ಇನ್ನೂ ಹತ್ತು ಲಕ್ಷ ಸಬ್ಸ್ಕ್ರೈಬರ್ಸ್ ಹೊಂದಿರುವ ಗಗನ್ ಶ್ರೀನಿವಾಸ್, ಯೂಟ್ಯೂಬ್ನಲ್ಲೀಗ 2 ಮಿಲಿಯನ್ ಸಬ್ಸ್ಕ್ರೈಬರ್ಗಳನ್ನು ಪಡೆದಿದ್ದಾರೆ. ಈ ಮೂಲಕ ಡಾ.ಬ್ರೋ ಕ್ರೇಝ್ ಹೆಚ್ಚಾಗಿರುವುದು ಕೂಡ ಕಂಡುಬಂದಿದೆ. (ಸಾಂದರ್ಭಿಕ ಚಿತ್ರ ಬಳಸಲಾಗಿದೆ)
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….