ದೊಡ್ಡಬಳ್ಳಾಪುರ, (ಆ.28): ಖಾಸಗಿ ಬಸ್ ಬ್ರೇಕ್ ಫೆಲ್ಯೂರ್ ಉಂಟಾಗಿ ರಸ್ತೆ ಬದಿಯಲ್ಲಿನ ಫುಟ್‌ಪಾತ್ ಮೇಲೇರಿ ನಿಂತಿರುವ ಘಟನೆ ಪ್ರವಾಸಿ ಮಂದಿರ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ನಡೆದಿದೆ.
ಹಿಂದೂಪುರದಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ ಇದಾಗಿದ್ದು, ಪ್ರವಾಸಿ ಮಂದಿರದ ಬಳಿ ಬ್ರೇಕ್ ಫೇಲ್ ಆದ ಕಾರಣ ಚಾಲಕನ ನಿಯಂತ್ರಣ ತಪ್ಪಿ ಫುಟ್‌ಪಾತ್ ಮೇಲೆ ಅತ್ತಿದೆ.
ಘಟನೆಯಲ್ಲಿ ಓರ್ವ ದ್ವಿಚಕ್ರ ವಾಹನ ಸವಾರನಿಗೆ ಕಾಲಿಗೆ ಪೆಟ್ಟಾಗಿದ್ದು, ಕಾರೊಂದಕ್ಕೆ ಡ್ಯಾಮೆಜ್ ಆಗಿದೆ ಎನ್ನಲಾಗುತ್ತಿದೆ.
ಚಾಲಕನ ಸಮಯ ಪ್ರಜ್ಞೆಯಿಂದ ಬಸ್ಸಿನಲ್ಲಿದ್ದ ಹಲವರ ಜೀವ ಉಳಿದಿದ್ದು, ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….