ದೊಡ್ಡಬಳ್ಳಾಪುರ, (ಆ.29): ಕಳವು ಮಾಡಲಾದ ದ್ವಿಚಕ್ರ ವಾಹನವನ್ನು ಮಾರಾಟ ಮಾಡುತ್ತಿದ್ದ ಆರೋಪಿಯನ್ನು ವಶಕ್ಕೆ ಪಡೆಯುವ ಮೂಲಕ ಗ್ರಾಮಾಂತರ ಠಾಣೆ ಪೊಲೀಸರು ಭರ್ಜರಿ ಬೇಟೆಯನ್ನೇ ಆಡಿದ್ದಾರೆ.
ಖಚಿತ ಮಾಹಿತಿ ಮೇರೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಬಾಂಬೆರೇಯಾನ್ ಕಾರ್ಖಾನೆ ಬಳಿ ನಂಬರ್ ಪ್ಲೆಟ್ ಇಲ್ಲದ ಡಿಯೋ ಬೈಕನ್ನು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಬೆಂಗಳೂರಿನ ಕೊಡಿಗೇಹಳ್ಳಿ ಸಮೀಪದ ಅಮೃತಹಳ್ಳಿ ನಿವಾಸಿ ಚೇತನ್ (19ವರ್ಷ) ವಶಕ್ಕೆ ಪಡೆದಿದ್ದು, ಈತನ ವಿಚಾರಣೆ ನಂತರ ಅಮೃತಹಳ್ಳಿ ಹೂಡಿ ಲೇ ಔಟ್ ನಿವಾಸಿ ಸಾಯಿ ಪವನ್ (18ವರ್ಷ) ಎಂಬುವವನ್ನು ಪತ್ತೆ ಮಾಡಿ ವಿಚಾರಣೆಗೆ ಒಳಪಡಿಸಿದ್ದಾರೆ.
ಈ ವೇಳೆ ಬಂಧಿತರು ಶರಣ್ ಎಂಬುವವನ ಜೊತೆಗೂಡಿ, ಬೆಂಗಳೂರು, ದೇವನಹಳ್ಳಿ, ಯಲಹಂಕ, ಕೊತನೂರು, ದೊಡ್ಡಬಳ್ಳಾಪುರ ನಗರ, ಕಾರಹಳ್ಳಿ, ಹೆಗ್ಗಡೇನಗರ ಮತ್ತಿತರ ಕಡೆ ಕಳ್ಳತನ ಮಾಡಿದ್ದ ಸುಮಾರು 12 ಲಕ್ಷ 50 ಸಾವಿರ ರೈ ಮೌಲ್ಯದ 13 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಇವುಗಳಲ್ಲಿ 03 ಬುಲೆಟ್, 01 ಪಲ್ಸರ್, 01 ಜುಪಿಟರ್, 01 RX100, 07 ಡಿಯೋ ಸೇರಿವೆ.
ಈ ಕಾರ್ಯಾಚರಣೆಯನ್ನು ಪೊಲೀಸ್ ಅಧೀಕ್ಷಕರಾದ ಮಲ್ಲಿಕಾರ್ಜುನ ಬಾಲದಂಡಿ, ಅಪರ ಪೊಲೀಸ್ ಅಧೀಕ್ಷಕ ಪುರುಷೋತ್ತಮ್, ಡಿವೈಎಸ್ಪಿ ರವಿ ಅವರ ಮಾರ್ಗದರ್ಶನಲ್ಲಿ ಗ್ರಾಮಾಂತರ ಠಾಣೆ ಇನ್ಸ್‌ಪೆಕ್ಟರ್ ಡಿ.ಹೆಚ್.ಮುನಿಕೃಷ್ಣ ನೇತೃತ್ವದಲ್ಲಿ ಪಿಎಸ್ಐ ಪಂಕಜ, ಸಿಬ್ಬಂದಿಗಳಾದ ವೆಂಕಟೇಶ್ ಕುಮಾರ್, ಅರ್ಜುನ್ ಲಮಾಣಿ, ಮಂಜುನಾಥ್, ಹನುಂತರ ರಾಜು,ಗಂಗಯ್ಯ, ಸಚಿನ ಉಪ್ಪಾರ ತಂಡ ಆರೋಪಿಗಳನ್ನು ಪತ್ತೆಹಚ್ಚಿ ದ್ವಿಚಕ್ರ ವಾಹನಹಳನ್ನು ವಶ ಪಡಿಸಿಕೊಂಡಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….