ಯಲಹಂಕ, (ಆ.28): ಹಳಿ ದಾಟುವ ವೇಳೆ ಗೂಡ್ಸ್ ರೈಲಿನ ಕೆಳಗೆ ಸಿಲುಕಿದ ಮಹಿಳೆಯೋರ್ವರು, ಹಳಿಯಲ್ಲಿ ಮಲಗಿ ಜೀವ ಉಳಿಸಿಕೊಂಡಿರುವ ಘಟನೆ ರಾಜಾನುಕುಂಟೆ ರೈಲ್ವೆ ನಿಲ್ದಾಣದ ಬಳಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಕಳೆದ ಮೂರ್ನಾಲ್ಕು ದಿನಗಳ ಹಿಂದಿನ ವಿಡಿಯೋ ಇದೆನ್ನಲಾಗುತ್ತಿದ್ದು, ಮಹಿಳೆಯೊಬ್ಬರು ರೈಲ್ವೆ ಹಳಿ ದಾಟುತ್ತಿದ್ದ ವೇಳೆ ಗೂಡ್ಸ್ ರೈಲು ಬಂದಿದ್ದು, ಈ ವೇಳೆ ಗಾಬರಿಯಾದ ಮಹಿಳೆ ತಕ್ಷಣ ಹಳಿ ಮೇಲೆ ಮಲಗಿದ್ದಾರೆ. ರೈಲು ಹೋದ ನಂತರ ಸುರಕ್ಷಿತವಾಗಿ ಹೊರ ಬಂದಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….