ಹಿರಿಯ ನಟ, ರಂಗಕರ್ವಿು, ರಾಜಕಾರಣಿ ಡಾ. ಮುಖ್ಯಮಂತ್ರಿ ಚಂದ್ರು (ಮೂಲ ಹೆಸರು ಚಂದ್ರಶೇಖರ). ಕರ್ನಾಟಕದ ‘ಖಾಯಂ ಮುಖ್ಯಮಂತ್ರಿ’ ಎಂದೇ ಜನಪ್ರಿಯರಾಗಿರುವ ಅವರು ಇತ್ತೀಚೆಗಷ್ಟೇ 70ಕ್ಕೆ ಕಾಲಿಟ್ಟಿದ್ದಾರೆ.
ರಂಗಭೂಮಿ ಮತ್ತು ಚಲನಚಿತ್ರಗಳಲ್ಲಿ ಪ್ರಸಿದ್ಧರಾಗಿದ್ದಾರೆ. ಇವರ ಮೂಲ ಹೆಸರು ಚಂದ್ರಶೇಖರ್. ರಾಜಕೀಯದಲ್ಲೂ ಗಣನೀಯ ಹೆಸರಾಗಿದ್ದಾರೆ.
ಚಂದ್ರು ಅವರು ಹುಟ್ಟಿದ್ದು ಆಗಸ್ಟ್ 28,1953 ರಂದು ನೆಲಮಂಗಲ ತಾಲೂಕಿನ ಹೊನ್ನಸಂದ್ರದಲ್ಲಿ. ತಂದೆ ಎನ್.ನರಸಿಂಹಯ್ಯ, ತಾಯಿ ತಿಮ್ಮಮ್ಮ.. ಚಂದ್ರು ಮೂಲ ಹೆಸರು ಚಂದ್ರಶೇಖರ್. ಮನೆಯಲ್ಲಿ ಬಡತನ ಜೊತೆಗೆ ಮಗ ತುಂಬಾ ತುಂಟ. ಹೀಗಾಗಿ ತಂದೆ ತಾಯಂದಿರು ಮಗನನ್ನು ಸಿದ್ಧಗಂಗಾ ಮಠಕ್ಕೆ ಸೇರಿಸಿದರು. ಮುಂದೆ ಅವರು ಬಿಎಸ್ಸಿ ಓದಿದರು.
ಚಂದ್ರು ಅವರ ವೃತ್ತಿಬದುಕಿಗೆ ತಿರುವು ನೀಡಿದ್ದು ‘ಮುಖ್ಯಮಂತ್ರಿ’ ನಾಟಕ. ಈ ನಾಟಕದಲ್ಲಿನ ಮುಖ್ಯಮಂತ್ರಿ ಪಾತ್ರ ಅವರಿಗೆ ಅದೆಷ್ಟು ಜನಪ್ರಿಯತೆ ತಂದುಕೊಟ್ಟಿತು ಎಂದರೆ ಜನ ಅವರನ್ನು ಸದಾ ‘ಮುಖ್ಯಮಂತ್ರಿ’ ಎಂದೇ ಗುರುತಿಸುತ್ತಾರೆ. ಈ ನಾಟಕದಲ್ಲಿ ಅವರು ನಟಿಸಿದ್ದೇ ಆಕಸ್ಮಿಕವಂತೆ. ‘ಮುಖ್ಯಮಂತ್ರಿ’ ನಾಟಕದ ಕುರಿತೇ ಆತ್ಮಚರಿತ್ರೆಯಲ್ಲಿ ಒಂದು ಅಧ್ಯಾಯವನ್ನು ಚಂದ್ರು ಬರೆದಿದ್ದಾರೆ. ಮುಂಚೆ ಮುಖ್ಯಮಂತ್ರಿ ಪಾತ್ರವನ್ನು ಟಿ.ಎಸ್. ಲೋಹಿತಾಶ್ವ ಮಾಡಬೇಕಿತ್ತಂತೆ.
ಚಂದ್ರು ನಿರ್ದೇಶಿಸಬೇಕಿತ್ತಂತೆ. ಆದರೆ, ಅನಾರೋಗ್ಯದಿಂದಾಗಿ ಲೋಹಿತಾಶ್ವ ಅವರಿಗೆ ನಟಿಸುವುದಕ್ಕೆ ಸಾಧ್ಯವಾಗದಿದ್ದರಿಂದ, ಅನಿವಾರ್ಯವಾಗಿ ಮುಖ್ಯಮಂತ್ರಿ ಪಾತ್ರವನ್ನು ಮಾಡುವುದಕ್ಕೆ ಚಂದ್ರು ಒಪ್ಪಬೇಕಾಯಿತಂತೆ.
ಮುಖ್ಯಮಂತ್ರಿ ಚಂದ್ರು ಕಳೆದ 44 ವರ್ಷಗಳಿಂದ ನೇಮಕಗೊಳ್ಳದ ಮುಖ್ಯಮಂತ್ರಿ ಆಗಿ ಮುಂದುವರಿಯುತ್ತಿದ್ದಾರೆ. ‘ಮುಖ್ಯಮಂತ್ರಿ’ ಹೆಸರಿನ ನಾಟಕದಲ್ಲಿ ಅವರು ಮುಖ್ಯಮಂತ್ರಿ ಪಾತ್ರವನ್ನು ನಿರ್ವಹಿಸಿದ್ದಾರೆ.
ಚಂದ್ರು ಅವರಿಗೆ ಆಕಸ್ಮಿಕವಾಗಿ ಬಂದ ಈ ಪಾತ್ರದ ಖ್ಯಾತಿ ಮತ್ತು ರಾಜಕೀಯ ಅದೃಷ್ಟವನ್ನು ತಂದುಕೊಟ್ಟಿದೆ. ಇದುವರೆಗೆ 800 ಕ್ಕೂ ಬಾರಿ ಪ್ರದರ್ಶನಗೊಂಡಿರುವ ಈ ನಾಟಕವನ್ನು ಆರ್ ಗುಂಡೂರಾವ್‌ನಿಂದ ಹಿಡಿದು ಸಿದ್ದರಾಮಯ್ಯವರೆಗೆ 14 ಮುಖ್ಯಮಂತ್ರಿಗಳು ನೋಡಿದ್ದಾರೆ.
ರಂಗಭೂಮಿಯ ಸ್ನೇಹಿತರಿಂದ ಉತ್ತೇಜಿತರಾಗಿ 1975ರಲ್ಲಿ ‘ತಾಯಿ’ ನಾಟಕದಲ್ಲಿ ಸಮುದಾಯದ ಪ್ರಸನ್ನರು ನೀಡಿದ ಪಾತ್ರದಿಂದ ಚಂದ್ರು ಅಪಾರ ಯಶಸ್ಸು ಪಡೆದರು. ಮುಖ್ಯಮಂತ್ರಿ ನಾಟಕದಲ್ಲಿ ಅಭಿನಯದಿಂದ ಬಂದ ಪ್ರಸಿದ್ಧಿ ಜೊತೆಗೆ ‘ಮುಖ್ಯಮಂತ್ರಿ ಚಂದ್ರು’ ಎಂಬ ಖಾಯಂ ಹೆಸರು ಬಂದದ್ದು ಈಗ ಇತಿಹಾಸ.
ಅವರು ಬಿ.ವಿ. ರಾಜಾರಾಂ ಜೊತೆ ಸೇರಿ ನಿರ್ದೇಶಿಸಿದ ನಾಟಕ ಅಚಲಾಯತನ. ನಂತರ ಹಲವಾರು ನಾಟಕಗಳ ನಿರ್ದೇಶನ ಮಾಡಿದ ಚಂದ್ರು ಅವರ ಮೋಡಗಳು, ಮೂಕಿ ಟಾಕಿ, ಎಲ್ಲಾರು ಮಾಡುವುದು. ಗರ್ಭಗುಡಿ, ಕತ್ತಲೆ ದಾರಿದೂರ, ಕಾಲಿಗುಲ, ಭರತಪ್ಪನ ಸೊಂಟಕ್ಕೆ ಗಂಟೆ, ಕೇಳು ಜನಮೇಜಯ, ಕಂಬಳಿಸೇವೆ, ಹೋಂ ರೂಲು ಮುಂತಾದುವು ಜನಪ್ರಿಯವೆನಿಸಿದವು.
ಮುಖ್ಯಮಂತ್ರಿ, ತಾಯಿ, ಕತ್ತಲೆ ದಾರಿದೂರ, ಘಾಸಿರಾಂ ಕೊತ್ವಾಲ್, ಕಾಲಿಗುಲ, ನಮ್ಮೊಳಗೊಬ್ಬ ನಾಜೂಕಯ್ಯ, ಆಸ್ಫೋಟ ಮುಂತಾದ ನಾಟಕಗಳ ಪ್ರಮುಖ ಪಾತ್ರಧಾರಿಯಾಗಿದ್ದ ಚಂದ್ರು ಅವರನ್ನು ಮುಂದೆ ಚಿತ್ರರಂಗ ತನ್ನವರನ್ನಾಗಿಸಿಕೊಂಡಿತು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….