ಬೆಂಗಳೂರು, (ಆ.21): ಮಾಲ್ಡೀವ್ಸ್ ನಿಂದ ಬೆಂಗಳೂರು ಬರುತಿದ್ದ ವಿಮಾನದಲ್ಲಿ ಗಗನ ಸಖಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ವಿದೇಶಿ ಪ್ರಜೆಯನ್ನು ಪೊಲೀಸರು ಬಂಧಿಸಿದ್ದಾರೆ.
ಅಕ್ರಂ ಅಹಮದ್ ಬಂಧಿತ ಅರೋಪಿಯಾಗಿದ್ದು, ಹಾರುತ್ತಿದ್ದ ವಿಮಾನದಲ್ಲಿ ಗಗನ ಸಖಿಗೆ ನೀನ್ನ ರೇಟ್ ಎಷ್ಟು..? ಎಷ್ಟಕ್ಕೆ ಬರ್ತಿಯಾ…? ಎಷ್ಟು ಡಾಲರ್ ಕೊಟ್ರೆ ಬರ್ತಿಯಾ..? ನೂರು ಡಾಲರ್ ಕೊಟ್ರೆ ಸಾಕ ಇನ್ನು ಬೇಕೆ ಎಂದೆಲ್ಲಾ ಅರೋಪಿ ಕೇಳಿರುವುದಾಗಿ ಆರೋಪಿಸಲಾಗಿದೆ.
ಬಿಜಿನೆಸ್ ವೀಸಾದಲ್ಲಿ ಭಾರತಕ್ಕೆ ಪ್ರಯಾಣ ಮಾಡ್ತಿದ್ದ ಅರೋಪಿ ಅಕ್ರಂ ಕುಳಿತಿದ್ದ ಸೀಟ್ ಬಳಿ ನಡೆದು ಹೋಗುವಾಗ ಗಗನ ಸಖಿಗೆ ಲೈಂಗಿಕ ಉದ್ದೇಶದಿಂದ ಮೈ ಮೇಲೆ ಆರೋಪಿ ಕೈ ಹಾಕಿದ್ದ ಎನ್ನಲಾಗಿದೆ.
ಘಟನೆ ಸಂಭಂದ ಪೊಲೀಸ್ ಠಾಣೆ ಗೆ ದೂರು ನೀಡಲಾಗಿದ್ದು, ದೂರಿನ ಅನ್ವಯ ದೇವನಹಳ್ಳಿ ಇಂಟರ್ನ್ಯಾಷನಲ್ ಏರ್ಪೋರ್ಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….