ಬೆಂಗಳೂರು, (ಆ.21): ತಮಿಳುನಾಡಿಗೆ ಕಾವೇರಿ ನೀರು ಹರಿಸುವ ಕುರಿತು ಡಿಸಿಎಂ ಡಿಕೆ ಶಿವಕುಮಾರ್ ಸುದ್ದಿಗೋಷ್ಠಿ ನಡೆಸಿ ಮಾಹಿತಿಯನ್ನು ನೀಡಿದ್ದಾರೆ. ತಮಿಳುನಾಡು ಕೇಳಿದಷ್ಟು ನೀರನ್ನು ನಾವು ಹರಿಸಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಆಗಸ್ಟ್ ತಿಂಗಳಲ್ಲಿ ನಾವು ತಮಿಳುನಾಡಿಗೆ 10,000 ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಬೇಕಿತ್ತು. ತಮಿಳುನಾಡಿಗೆ ನಾವು ಯಾವುದೇ ಹೆಚ್ಚುವರಿ ನೀರು ಬಿಡುಗಡೆ ಮಾಡಿಲ್ಲ ಎಂದು ಅವರು ತಿಳಿಸಿದ್ದಾರೆ.
ಅವರ ಕೇಳಿದ ಪ್ರಕಾರ ನೀರು ಬಿಟ್ಟಿಲ್ಲ ಸ್ವಲ್ಪ ಪ್ರಮಾಣದಲ್ಲಿ ಬಿಟ್ಟಿದ್ದೇವೆ. ವಿಪಕ್ಷಗಳಿಗೆ ಕಾನೂನು ಗೊತ್ತಿದ್ದರೂ ಅನವಶ್ಯಕ ಟೀಕೆ ಮಾಡುತ್ತಿದ್ದಾರೆ. ಅವರ ಕಾಲದಲ್ಲಿ ಯಾವ ರೀತಿ ಅವರು ನೀರು ಬಿಟ್ಟಿದ್ದಾರೆ ಅನ್ನುವುದು ನಾನು ಬಿಡಿಸಿ ಹೇಳಬೇಕಿಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
10,000 ಕ್ಯೂಸೆಕ್ ಬಿಡುಗಡೆ ಮಾಡೋಕೆ ಹೇಳಿದ್ದರು. 124 ಟಿಎಂಸಿ ನೀರು ನಮ್ಮ ರಾಜ್ಯಕ್ಕೆ ಬೇಕು. ನಮ್ಮ ರಾಜ್ಯದ ನೀರಿನ ಪರಿಸ್ಥಿತಿ ಹೇಗಿದೆಯೆಂದರೆ, ನಮ್ಮಲ್ಲಿ 55 ಟಿಎಂಸಿ ನೀರಿದೆ. ಬೆಂಗಳೂರಿಗೆ ಕುಡಿಯೋಕೆ 24 ಟಿಎಂಸಿ ನೀರು ಬೇಕು. ಮೈಸೂರು, ಮಂಡ್ಯ ರಾಮನಗರಕ್ಕೆ 20 ಟಿಎಂಸಿ ಬೇಕು, ಕೆಆಎಸ್‌ನಲ್ಲಿ 22 ಟಿಎಂಸಿ ಇದೆ, ಕಬಿನಿಯಲ್ಲಿ 6.5 ಟಿಎಂಸಿ, ಹಾರಂಗಿ 7 ಟಿಎಂಸಿ, ಹೇಮಾವತಿಯಲ್ಲಿ 20 ಟಿಎಂಸಿ ನೀರು ಇದೆ ಎಂದು ಅವರು ಹೇಳಿದ್ದಾರೆ.
ತಮಿಳುನಾಡು ಸರ್ಕಾರ ಕರ್ನಾಟಕ ಸರ್ಕಾರದ ವಿರುದ್ಧ ಹಿಂದೆ ಕೋರ್ಟಿಗೆ ಹೋಗಿರಲಿಲ್ಲ. ಕಾವೇರಿ ನೀರು ಹರಿಸಬೇಕೆಂದು ಸುಪ್ರೀಂ ಕೋರ್ಟ್ ಹೇಳಿದೆ. ಕೇಂದ್ರ ಒಂದು ಅಫಿಡವಿಟ್ ಸಲ್ಲಿಸಬಹುದಾಗಿತ್ತು ಅವರು ಸಲ್ಲಿಸಲಿಲ್ಲ ಇದೆಲ್ಲಾ ಬೊಮ್ಮಾಯಿ, ಹೆಚ್‌ಡಿಕೆಗೆ ಗೊತ್ತು ಎಂದು ಹೇಳಿದ್ದಾರೆ.
ತಮಿಳುನಾಡಲ್ಲೂ ನಮ್ಮಜನರಿದ್ದಾರೆ, ಇಲ್ಲೂ ತಮಿಳರಿದ್ದಾರೆ. ಜಗಳ ಬೇಡ, ಕೂತು ಮಾತಾಡೋಣ ಅಂತ ನಾವು ನೋಡ್ತಿದ್ದೇವೆ. 2021 ಜೂನ್ ರಲ್ಲಿ ಕುಮಾರಸ್ವಾಮಿ ಅವರು ಕರ್ನಾಟಕ-ತಮಿಳುನಾಡು ಅಣ್ಣ ತಮ್ಮಂದಿರಿದ್ದಂತೆ, ಕಾವೇರಿ ವಿವಾದ ಬಗೆ ಹರಿಸಬೇಕು ಎಂದು ಹೇಳಿಕೆ ನೀಡಿದ್ದರು. ಅದನ್ನು ಅವರು ನೆನಪಿಸಬೇಕು ಎಂದು ಅವರು ಹೇಳಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….