ಶ್ರೀರಾಮ ಪ್ರಭುವಿನ ಜನ್ಮವೂ ರಘುವಂಶದಲ್ಲಿಯೇ ಆಯಿತು. ಪ್ರಭು ಶ್ರೀರಾಮನ ಜನ್ಮದ ಮೊದಲು ರಘುವಂಶದಲ್ಲಿ ಸಾಮ್ರಾಟ್ ದಿಲೀಪನೆಂಬ ಒಬ್ಬ ಮಹಾನ್ ಚಕ್ರವರ್ತಿ ಇದ್ದರು. ಸಾಮ್ರಾಟ ದಿಲೀಪನು ಗೋವ್ರತ ಆಚರಣೆಯನ್ನು ಮಾಡುತ್ತಿದ್ದನು.
ಗೋವ್ರತದ ಅರ್ಥವೇನೆಂದರೆ, ಗೋವಿನ ಸೇವೆಯನ್ನು ಮಾಡುವುದು, ಅವುಗಳ ರಕ್ಷಣೆ ಮಾಡುವುದು. ತಮ್ಮ ಕುಲಗುರು ವಸಿಷ್ಠರ ಪೂಜ್ಯ ಗೋವು ನಂದಿನಿಯ ಸೇವೆಯನ್ನು ಮಾಡುತ್ತಿದ್ದನು. ಅವರು ನಂದಿನಿ ಹಸುವಿಗೆ ಎಳೆಯ ಹಸಿ ಹುಲ್ಲು ತಿನ್ನಿಸುತ್ತಿದ್ದನು, ಪ್ರೀತಿಯಿಂದ ಅದರ ಬೆನ್ನು ಮತ್ತು ಕುತ್ತಿಗೆಯನ್ನು ಸವರುತ್ತಿದ್ದನು, ಅದರ ಮೇಲೆ ಕುಳಿತುಕೊಳ್ಳುವ ಸೊಳ್ಳೆ- ನೊಣಗಳನ್ನು ಓಡಿಸುತ್ತಿದ್ದ.
ನಂದಿನಿಯೊಂದಿಗೆ ಯಾವಾಗಲೂ ನೆರಳಿನಂತೆ ಇರುತ್ತಿದ್ದ. ಅದು ಕುಳಿತರೆ ಕುಳಿತುಕೊಳ್ಳುತ್ತಿದ್ದ, ಮತ್ತು ನಡೆಯತೊಡಗಿದರೆ ನಡೆಯುತ್ತಿದ್ದ. ಒಂದು ದಿನ ಆ ನಂದಿನಿ ಹಸುವನ್ನು ಅರಣ್ಯದಲ್ಲಿ ಮೇಯಿಸಲು ಕರೆದುಕೊಂಡು ಹೋದನು. ಅರಣ್ಯದಲ್ಲಿ ಮೇಯಿಸುತ್ತಿರುವಾಗ, ಅಕಸ್ಮಿಕವಾಗಿ ಒಂದು ಬೃಹದಾಕಾರದ ಮಹಾಕ್ರೂರ ಸಿಂಹ ಸಾಮ್ರಾಟನ ಎದುರಿಗೆ ಬಂದು ನಿಂತಿತು. ಆ ಸಿಂಹವು ನಂದಿನಿ ಹಸುವನ್ನು ನೋಡಿತು ಮತ್ತು ಅದು ನಂದಿನಿಯನ್ನು ತಿನ್ನಲು ಅದರ ಮೇಲೆರೆಗುವುದರಲ್ಲಿತ್ತು.
ರಾಜನು ಸಿಂಹವನ್ನು ನೋಡಿ ಹೆದರಲಿಲ್ಲ, ತಕ್ಷಣ ರಾಜನು ಧನುಸ್ಸಿಗೆ ಹೆದೆಯೇರಿಸಿ ಸಿಂಹದ ಮೇಲೆ ಗುರಿಯಿಟ್ಟ. ಆ ಕ್ರೂರ ಸಿಂಹವನ್ನು ‘ನೀನು ಹೊರಟು ಹೋಗು! ನಾನು ನಂದಿನಿಯ ರಕ್ಷಕನಾಗಿದ್ದೇನೆ ಹಾಗೂ ನಿನಗೆ ನಂದಿನಿಯನ್ನು ತಿನ್ನಲು ಬಿಡುವುದಿಲ್ಲ’ ಎಂದು ಹೇಳಿದನು. ಆಗ ಸಿಂಹವು ರಾಜನಿಗೆ ‘ರಾಜನ್ ನಾನಂತೂ ಹಸಿದಿದ್ದೇನೆ ಮತ್ತು ಈ ಹಸು ನನ್ನ ಭೋಜನವಾಗಿದೆ. ಆದ್ದರಿಂದ ನಾನು ಇದನ್ನು ಖಂಡಿತವಾಗಿಯೂ ತಿನ್ನುತ್ತೇನೆ’ ಎಂದು ಹೇಳಿತು. ಆಗ ಸಾಮ್ರಾಟ ದಿಲೀಪನು ‘ವನರಾಜ, ಒಂದು ವೇಳೆ ನಾನು ನಿನಗೆ ಹಸುವನ್ನು ತಿನ್ನಲು ಕೊಟ್ಟರೆ, ರಘುವಂಶದ ಕೀರ್ತಿ ಕಳಂಕಿತಗೊಳ್ಳುತ್ತದೆ. ಗೋರಕ್ಷೆಯೇ ನನ್ನ ಜೀವನದ ಕಾರ್ಯವಾಗಿದೆ. ಇದೇ ನನ್ನ ಧರ್ಮವಾಗಿದೆ. ಅಪಕೀರ್ತಿ ಹೊಂದಿದ ಈ ದೇಹದೊಂದಿಗೆ ಹಿಂತಿರುಗುವುದಕ್ಕಿಂತ ನಾನು ನನ್ನ ದೇಹವನ್ನು ನಿನಗೆ ಸಮರ್ಪಿಸುತ್ತೇನೆ. ಇಂದು ನೀನು ನನ್ನನ್ನು ನಿನ್ನ ಭೋಜನವನ್ನಾಗಿ ಸ್ವೀಕರಿಸು. ನಾನು ನನ್ನ ಶರೀರವನ್ನು ನಿನ್ನ ಭೋಜನಕ್ಕೆ ಒಪ್ಪಿಸುತ್ತೇನೆ’ ಎಂದು ಹೇಳಿ ಸಾಮ್ರಾಟನು ಸಿಂಹದ ಎದುರಿಗೆ ಹೋಗಿ ನಿಂತುಕೊಂಡನು.
ಸಾಮ್ರಾಟನು ಮುಂದುವರಿದು ಆ ಸಿಂಹಕ್ಕೆ ‘ಸಿಂಹರಾಜಾ, ನನಗೆ ನಿನ್ನ ಮೇಲೆ ಕರುಣೆ ಬರುತ್ತಿದೆ, ಕ್ಷುದ್ರ ಗೋವಿಗಾಗಿ ಈ ಸಾಮ್ರಾಟನು ತನ್ನ ದೇಹವನ್ನು ನೀಡುತ್ತಿದ್ದಾನೆ. ಅವನು ಎಷ್ಟು ಮೂರ್ಖನಿದ್ದಾನೆ ಎಂದು. ನೀನು ವಿಚಾರ ಮಾಡುತ್ತಿರಬಹುದ ನನ್ನ ಶರೀರ ಹಾಗೂ ಜೀವನದ ಮೇಲೆ ನಿನಗೆ ದಯೆ ಬರುತ್ತಿರಬಹುದು. ಆದರೆ ಒಂದು ವೇಳೆ ನನ್ನ ಕಣ್ಣೆದುರಿಗೆ ನಂದಿನಿಯ ಹತ್ಯೆಯಾದರೆ, ನನ್ನ ರಘುವಂಶದ ಕೀರ್ತಿ ಕಳಂಕಿತಗೊಳ್ಳುವುದು. ನನ್ನ ಮೇಲೆ ದಯೆ ಮಾಡಲು ಇಚ್ಛಿಸಿದ್ದರೆ, ನನ್ನ ಶರೀರವನ್ನು ತಿಂದು ನಂದಿನಿಯನ್ನು ಮುಕ್ತಗೊಳಿಸು. ಇದರಿಂದ ನನ್ನ ಜಯಗಳಿಸಿದ ಶರೀರವು ಚಿರಂತನವಾಗುವುದು’ ಎಂದು ಹೇಳಿದನು.
ರಘುವಂಶದ ಶ್ರೇಷ್ಠ ಸಾಮ್ರಾಟ ದಿಲೀಪನು, ಹಸುವಿನ ರಕ್ಷಣೆಗಾಗಿ ಯೌವನದಿಂದ ತುಂಬಿದ್ದ ತನ್ನ ಶರೀರದ ಆಹುತಿಯನ್ನು ನೀಡಲು ಮುಂದಾಗಿದ್ದನು. ಸಿಂಹವು ಸಾಮ್ರಾಟನ ಈ ಮಾತುಗಳನ್ನು ಕೇಳಿ ಅರಣ್ಯಕ್ಕೆ ಮರಳಿ ಹೊರಟು ಹೋಯಿತು.
ಕೃಪೆ: ಹಿಂದೂ ಜಾಗೃತಿ ಸಮಿತಿ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….