ದೊಡ್ಡಬಳ್ಳಾಪುರ, (ಜೂ.09): ತೆರಿಗೆ ಪಾವತಿಸುವ ಮಕ್ಕಳಿರುವ ತಾಯಂದಿರನ್ನು ಗೃಹ ಲಕ್ಷ್ಮೀ ಯೋಜನೆಯ ವ್ಯಾಪ್ತಿಯಿಂದ ಹೊರಗಿಡುವ ಕುರಿತು ಮನಸ್ಸು ಮಾಡಿದ್ದ ಸರ್ಕಾರ, ತನ್ನ ಆ ನಿಲುವನ್ನು ಬದಲಿಸಿದೆ.
ಶುಕ್ರವಾರ ಹೊರಬಿದ್ದ ಮಾಹಿತಿಯಂತೆ, ತೆರಿಗೆದಾರ ಮಕ್ಕಳಿದ್ದರೂ ಆ ಗೃಹಿಣಿಯರಿಗೆ ಯೋಜನೆ ಅನ್ವಯವಾಗುತ್ತೆ. ಆದರೆ, ಗಂಡ ತೆರಿಗೆ ಪಾವತಿಸುತ್ತಿದ್ದರೆ ಮಾತ್ರ ಯೋಜನೆಗೆ ಅರ್ಹರಾಗುವುದಿಲ್ಲ ಎಂದು ಮಹಿಳಾ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಇದೇ ವೇಳೆ, ತಮ್ಮ ಇಲಾಖೆಯಿಂದ ಬಿಡುಗಡೆಗೊಳಿಸಲಾಗಿದ್ದ ಗೃಹ ಲಕ್ಷ್ಮೀ ಅರ್ಜಿಯ ನಮೂನೆಯಲ್ಲಿ ಅರ್ಜಿದಾರರ ಜಾತಿ ಕೇಳಲಾಗಿರುವ ಕಾಲಂ ಅನ್ನು ತಿದ್ದುಪಡಿ ಮಾಡಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ. ಅರ್ಜಿಯಲ್ಲಿರುವ ಕಾಲಂನ ಶೀರ್ಷಿಕೆಯನ್ನು ಬದಲಾಯಿಸಲಾಗುತ್ತದೆ. ಜಾತಿ ಬದಲು ಸಮುದಾಯವನ್ನು ಉಲ್ಲೇಖಿಸುವಂತೆ ಸೂಚಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….