ದೊಡ್ಡಬಳ್ಳಾಪುರ, (ಮೇ.28): ತಾಲೂಕಿನ ಕನ್ನಡ ಪಕ್ಷದ ತಾಲೂಕು ಕಾರ್ಯದರ್ಶಿ, ಕನ್ನಡಪರ ಹೋರಾಟಗಾರ ಡಿ.ಎಲ್.ಮಂಜುನಾಥ್ (ಸ್ವಾಮಿ) (44 ವರ್ಷ) ಅನಾರೋಗ್ಯದಿಂದ ಶನಿವಾರ ರಾತ್ರಿ ನಿಧನರಾಗಿದ್ದಾರೆ.
ಮೃತರು ತಾಯಿ, ಪತ್ನಿ, ಇಬ್ಬರು ಪುತ್ರಿಯರು ಹಾಗೂ ಒಬ್ಬ ಪುತ್ರನನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ನಗರದ ಹೊರವಲಯದ ಮುಕ್ತಿಧಾಮದಲ್ಲಿ ಭಾನುವಾರ ಮಧ್ಯಾಹ್ನ ನೆರವೇರಿತು.
ಡಿ.ಎಲ್.ಮಂಜುನಾಥ್ ಅವರು ಸುಮಾರು 20 ವರ್ಷಗಳಿಂದ ಕನ್ನಡ ಚಳವಳಿ ರೈತ ಚಳವಳಿ ಪ್ರಗತಿಪರವಾದ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….