Site icon ಹರಿತಲೇಖನಿ

ದ.ರಾ.ಬೇಂದ್ರೆಯವರ ಜೀವನವೇ ಕಾವ್ಯ ಮತ್ತು ಕಾವ್ಯವೇ ಜೀವನವಾಗಿತ್ತು: ಕನ್ನಡ ಶಿಕ್ಷಕ ಜಿ.ಎಸ್.ಚೌಧರಿ

Channel Gowda
Hukukudi trust

ದೊಡ್ಡಬಳ್ಳಾಪುರ: ದ.ರಾ.ಬೇಂದ್ರೆಯವರ ಜೀವನವೇ ಕಾವ್ಯ ಮತ್ತು ಕಾವ್ಯವೇ ಜೀವನವಾಗಿತ್ತು. ಬೇಂದ್ರೆ ತಮ್ಮ ಜೀವನದಲ್ಲಿ ದುಃಖ, ನೋವು ಅನುಭವಿಸುತ್ತಲೇ ಸಹೃಯದರಿಗೆ ಸಾಹಿತ್ಯದ ಸವಿಯುಣಿಸುತ್ತಿದ್ದರು ಎಂದು ಸಕ್ಕರೆಗೊಲ್ಲಹಳ್ಳಿ ಸರ್ಕಾರಿ ಪ್ರೌಢಶಾಲೆಯ ಕನ್ನಡ ಶಿಕ್ಷಕ ಜಿ.ಎಸ್.ಚೌಧರಿ ತಿಳಿಸಿದರು. 

Aravind, BLN Swamy, Lingapura

ಅವರು ನಗರದ ಅರಳುಮಲ್ಲಿಗೆ ಬಾಗಿಲು ಸರ್ಕಾರಿ ಪ್ರೌಢಶಾಲೆಯಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನಡೆದ  ವರಕವಿ ದ.ರಾ.ಬೇಂದ್ರೆಯವರ 126ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ  ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು. ಎನ್ನ ಪಾಡೆನಗಿರಲಿ, ಅದರ ಹಾಡನ್ನಷ್ಟೇ ನೀಡುವೆನು ರಸಿಕ , ಕಲ್ಲು ಸಕ್ಕರೆಯಂತಹ ನಿನ್ನೆದೆಯು ಕರಗಿದರೆ ಅದರ ಸವಿಯುಣಿಸು ನನಗೆ ಎಂಬುದನ್ನು ವರಕವಿ ತಮ್ಮ ಕವನದಲ್ಲೆ ಹೇಳಿದ್ದಾರೆ ಎಂದರು.

ದೇಸಿ ಸೊಗಡಿನಲ್ಲಿ ಕಾವ್ಯ ಮಾಡಿರುವ ಬೇಂದ್ರೆಯವರು ಸಾಹಿತ್ಯದಲ್ಲಿ ದಾರ್ಶನಿಕತೆ ಇದೆ. ದಾರ್ಶನಿಕ ಕೃತಿಗಳು ಮೌಲ್ಯ ಶಿಕ್ಷಣ ನೀಡುತ್ತವೆ. ವಿದ್ಯಾರ್ಥಿಗಳು ಇಂತಹ ದಾರ್ಶನಿಕ ಕೃತಿಗಳನ್ನು ಓದುವ ಮೂಲಕ ಬದುಕಿನಲ್ಲಿ ಉತ್ತಮ ಮೌಲ್ಯಗಳನ್ನು ಕಲಿಯಬಹುದಾಗಿದೆ. ಪ್ರಕೃತಿಯ ವರ್ಣನೆಗಳಿಂದ ಹಿಡಿದು ಸಾಮಾಜಿಕ ಪ್ರಜ್ಞೆಯ ಕವಿತೆಗಳು  ಓದುಗರ ಮನಗೆದ್ದಿವೆ. ಶಬ್ದಗಾರುಡಿಗಾರ ಬೇಂದ್ರೆ ತಮ್ಮ ಕವಿತೆಗಳ ಮೂಲಕ ಹೊಸಗನ್ನಡ ಕಾವ್ಯಕ್ಕೆ  ಹೊಸತನ ನೀಡಿದರು.

Aravind, BLN Swamy, Lingapura

ನರಬಲಿ ಕವನ ಬರೆದು ಜೈಲುವಾಸ ಅನುಭವಿಸಿದ ಬೇಂದ್ರೆಯವರು  ಗೆಳೆಯರ ಗುಂಪು ಕಟ್ಟಿ ಸಾಹಿತ್ಯ ಚಟುವಟಿಕಗಳನ್ನು ವಿಸ್ತರಿಸಿದರು. ಗರಿ, ಗಂಗಾವತರಣ, ನಾದಲೀಲೆ, ಸಖೀಗೀತ, ಉಯ್ಯಾಲೆ, ನಾಕುತಂತಿ, ಮೇಘದೂತ ಮುಂತಾದ ಹಲವಾರು ಕೃತಿಗಳು ಇಂದಿಗೂ ಕನ್ನಡ ಸಾಹಿತ್ಯ ಓದುಗರ ಮನಗೆದ್ದಿವೆ. ಜಾನಪದ ಶೈಲಿಯ ಕವನಗಳು, ಭಾವಗೀತೆಗಳನ್ನು ಗಾಯಕರು ಸುಶ್ರಾವ್ಯವಾಗಿ ಹಾಡುತ್ತಿದಾರೆ ಎಂದರು.

ಕಾಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕ ಎಚ್.ಎನ್.ಪ್ರಕಾಶ್ ಮಾತನಾಡಿ, ವಿದ್ಯಾರ್ಥಿಗಳು ದ.ರಾ.ಬೇಂದ್ರೆಯವರ ಜೀವನ ಮತ್ತು ಅವರ ಸಾಹಿತ್ಯವನ್ನು ಅಧ್ಯಯನ  ಮಾಡಬೇಕಾಗಿದೆ. ಸಾಹಿತ್ಯಾಭಿರುಚಿಯು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿ ಅಗಲಿದೆ. ಪಠ್ಯವಿಷಯಗಳಿಗೆ ನೀಡುವ ಮಹತ್ವವನ್ನು ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಿಗೂ ನೀಡಬೇಕಾಗಿದೆ ಎಂದರು. 

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ಜೈಕುಮಾರ್, ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪಿ.ಗೋವಿಂದರಾಜು, ನಿಕಟ ಪೂರ್ವ ಅಧ್ಯಕ್ಷೆ ಪ್ರಮೀಳಾ ಮಹಾದೇವ್, ಗೌರವ ಕಾರ್ಯದರ್ಶಿ ಎ.ಜಯರಾಂ, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಆರ್.ಗೋವಿಂದರಾಜು,  ಮಾಳವ ನಾರಾಯಣಸ್ವಾಮಿ, ಜಾನಪದ ಕಲಾವಿದ ಹಾಡೋನಹಳ್ಳಿ ಗೋವಿಂದರಾಜು, ಯುವಕವಿ ಅಂಜನಗೌಡ, ಶಾಲೆಯ ಕನ್ನಡ ಶಿಕ್ಷಕಿ ಜಯಶ್ರೀ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….

Exit mobile version