ದೊಡ್ಡಬಳ್ಳಾಪುರ: 6ನೇ ರಾಷ್ಟ್ರೀಯ ಯೋಗ ಚಾಂಪಿಯನ್ಶಿಪ್ ಜ.16 ಅಂಡಮಾನ್ ನಲ್ಲಿ ನಡೆಯಬೇಕಿದ್ದ ಯೋಗಾ ಸ್ಪರ್ಧೆ ಕೋವಿಡ್ ಕಾರಣದಿಂದ ಆನ್ಲೈನ್ ಮೂಲಕ ಆಯೋಜಿಸಲಾಗಿತ್ತು.
ಈ ಸ್ಪರ್ಧೆಯಲ್ಲಿ ಕರ್ನಾಟಕ, ಆಂಧ್ರ, ತಮಿಳುನಾಡು, ಕೇರಳ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳ ನೂರಾರು ಸ್ಪರ್ಧಿಗಳು ಭಾಗವಹಿಸಿದ್ದು, ಕರ್ನಾಟಕದಿಂದ ದೊಡ್ಡಬಳ್ಳಾಪುರದ ಚಿಣ್ಣರಕೂಟ ಮತ್ತು ಶ್ರೀ ವಿನಾಯಕ ಯೋಗ ಕೇಂದ್ರದ ವಿದ್ಯಾರ್ಥಿಗಳು ಭಾಗವಹಿಸಿ ಬಹುಮಾನ ಪಡೆದಿದ್ದಾರೆ.
ಈ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭ ಜ.27 ರಂದು ಶಿವಮೊಗ್ಗದಲ್ಲಿ ನಡೆದಿದ್ದು, 7 ವರ್ಷದೊಳಗಿನ ವಿಭಾಗದಲ್ಲಿ ತೃತೀಯ ಸ್ಥಾನವನ್ನು ದೊಡ್ಡಬಳ್ಳಾಪುರದ ಗೋಕುಲ್ ಸಮೃಧ್.P.V., 8-11 ವರ್ಷ ವಯೋಮಿತಿ ವಿಭಾಗದಲ್ಲಿ ದ್ವಿತೀಯ ಸ್ಥಾನ ಎಂ.ಆಯೂಷಿ ಹಾಗೂ 12-15ವರ್ಷ ವಯೋಮಿತಿ ವಿಭಾಗದಲ್ಲಿ ತನಿಷಾ ಜಿ.ಬಿ. ದ್ವಿತೀಯ ಸ್ಥಾನ ಪಡೆದಿದ್ದಾರೆ.
ಈ ಸಂದರ್ಭದಲ್ಲಿ ವರ್ಷಿಣಿ ಚಾರಿಟಬಲ್ ಟ್ರಸ್ಟ್ ನ ಸಂಸ್ಥಾಪಕ ವೆಂಕಟೇಶ್ ಆಚಾರ್ಯ, ಕಾರ್ಕಳದ ನರೇಂದ್ರ ಕಾಮತ್, ಮಂಗಳೂರಿನ ಜ್ಯೋತಿ ಹಿರೇಮಠ್ ಹಾಗೂ ಯೋಗ ಶಿಕ್ಷಕರು ತೀರ್ಪುಗಾರರಾಗಿ ಎಸ್.ವಿನೋದ್ ಕುಮಾರ್ ಮತ್ತಿತರರು ಹಾಜರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….