ದೊಡ್ಡಬಳ್ಳಾಪುರ: ಚೇತನ್ ಕುಮಾರ್ ನಿರ್ದೇಶನದ, ನಟ ದಿವಂಗತ ಪುನೀತ್ ರಾಜ್‌ಕುಮಾರ್ ನಟನೆಯ ಕೊನೆಯ ಚಿತ್ರ ‘ಜೇಮ್ಸ್’ ಚಿತ್ರೀಕರಣ ಪೂರ್ಣಗೊಂಡಿದ್ದು, ಇಂದು ಸಿನಿಮಾದ ವಿಶೇಷ ಪೋಸ್ಟರ್ ಅನಾವರಣಗೊಂಡಿದೆ.
ಪುನೀತ್ ರಾಜ್ಕುಮಾರ್ ಅವರು ಕೊನೆಯದಾಗಿ ಅಭಿನಯಿಸಿರುವ ಚಿತ್ರ ಇದಾಗಿದ್ದು, ಈ ಚಿತ್ರದ ಪೋಸ್ಟರ್ ಅನ್ನು ಗಣರಾಜ್ಯೋತ್ಸವದಂದು ಬಿಡುಗಡೆಗೊಳಿಸುವುದಾಗಿ ಚಿತ್ರತಂಡ ಘೋಷಣೆ ಮಾಡಿತ್ತು. ಅದರಂತೆ ಇಂದು ಜೇಮ್ಸ್ ಸಿನಿಮಾದ ಪೋಸ್ಟರ್‌ನ್ನು ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಪೊಸ್ಟರ್ ಬಿಡುಗಡೆ ಮಾಡಿದ್ದಾರೆ.
ಈ ಹಿನ್ನೆಲೆ ದೊಡ್ಡಬಳ್ಳಾಪುರದ ಕರ್ನಾಟಕ ರಾಜರತ್ನ ಪುನೀತ್ ರಾಜಕುಮಾರ್ ಸೇವಾ ಟ್ರಸ್ಟ್ ಸದಸ್ಯರು ನಗರದ ಬಸವ ಭವನ ವೃತ್ತದಲ್ಲಿ ಚಿತ್ರದ ಪೋಸ್ಟರ್ ಗೆ ಪುಷ್ಪನಮನ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಟ್ರಸ್ಟ್ ಮುಖಂಡರು ಬಸವ ಭವನ ವೃತ್ತದಲ್ಲಿ ಪುನೀತ್ ರಾಜಕುಮಾರ್ ಅವರ ಪುತ್ಥಳಿಯನ್ನು ಸ್ಥಾಪಿಸಲು ಅವಕಾಶ ನೀಡುವಂತೆ ಮನವಿ ಮಾಡಿದರು.
ದಿವಂಗತ ಪುನೀತ್ ರಾಜ್‍ಕುಮಾರ್ ಅವರ ತತ್ವ, ಆದರ್ಶ, ಸೇವಾ ಮನೋಭಾವವನ್ನು ಎಲ್ಲಾ ಪೀಳಿಗೆಯ ಯುವಕರಿಗೆ ಸ್ಪೂರ್ತಿಯಾಗಿದೆ. ಆ ಕಾರಣ ಅವರ ಕಾರ್ಯ ಇತರರಿಗೆ ಮಾದರಿಯಾಗುವಂತೆ ಟ್ರಸ್ಟ್ ವತಿಯಿಂದ ಪುತ್ಥಳಿಯನ್ನು ನಿರ್ಮಿಸುವುದರ ಮೂಲಕ ಸಮರ್ಪಣೆ ಮಾಡುವ ಉದ್ದೇಶ ಹೊಂದಲಾಗಿದೆ ಎಂದರು.
ಈ ವೇಳೆ ಕರ್ನಾಟಕ ರಾಜರತ್ನ ಪುನೀತ್ ರಾಜಕುಮಾರ್ ಸೇವಾ ಟ್ರಸ್ಟ್ ಗೌರವಾಧ್ಯಕ್ಷ ಅಜಯ್ ಕುಮಾರ್ ಎಸ್.ಆರ್., ಅಧ್ಯಕ್ಷ ಅಭಿಲಾಷ್ ಗೌಡ.ಜಿ.,ಉಪಾಧ್ಯಕ್ಷರಾದ . ವಸಂತ್ ಕುಮಾರ್ ಕೆ., ಉಲ್ಲಾಸ್.ಡಿ.ಎ., ಪ್ರಧಾನ ಕಾರ್ಯದರ್ಶಿ ಆರ್.ಮಧುಸೂದನ್, ಕಾರ್ಯದರ್ಶಿ ಅರ್ಜುನ್.ವೈ.ಎನ್., ಖಜಾಂಚಿ ಪವನ್ ಕುಮಾರ್.ಕೆ., ಸದಸ್ಯ ಕಾರ್ಯದರ್ಶಿ ಸುಮನ್.ಕೆ.ಎನ್, ನಿರ್ದೇಶಕರಾದ ತೇಜಸ್ ಕುಮಾರ್, ಸಾಗರ್ ಬಾಸ್ ವಡ್ಡರಹಳ್ಳಿ, ನಿರಂಜನ್ ಗೌಡ, ಪವನ್ ಕುಮಾರ್.ಕೆ.ಆರ್., ದೀಪಕ್ ಕುಮಾರ್, ಪ್ರವೀಣ್ ಕುಮಾರ್.ಎಂ., ಶರತ್ ಕುಮಾರ್.ಎಸ್., ಶ್ರೀನಿವಾಸ್.ಡಿ.ಎನ್., ಕೌಶಿಕ್, ಪುನೀತ್.ಪಿ.ಬಿ., ರಕ್ಷಿತ್ ಜಿ.ನಾಯಕ್, ಧಿರಜ್ ಜಿ.ನಾಯಕ್, ಯಶವಂತ್ ಕುಮಾರ್, ಮನೋಹರ್, ಪ್ರಶಾಂತ್, ಅನಂತ್, ಗಿರೀಶ್, ಲಿಖಿತ್ ಕುಮಾರ್, ರಾಕೇಶ್ ಎನ್ ಮತ್ತಿತರರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….