![Channel Gowda](https://www.harithalekhani.com/wp-content/uploads/2025/02/IMG-20250204-WA0002.jpg)
ದೊಡ್ಡಬಳ್ಳಾಪುರ: ಜನವರಿ 21ಕ್ಕೆ ತುಮಕೂರಿನ ಸಿದ್ಧಗಂಗೆಯ ಹಿರಿಯ ಯತಿ, ತ್ರಿವಿಧ ದಾಸೋಹಿ ಮಠಾಧೀಶ ಡಾ ಶಿವಕುಮಾರ ಸ್ವಾಮೀಜಿಗಳು ಲಿಂಗೈಕ್ಯರಾಗಿ ಮೂರು ವರ್ಷಗಳು.ರಾಜ್ಯ ಸರ್ಕಾರವು ಇಂದು ಸ್ವಾಮೀಜಿಗಳ ಪುಣ್ಯಸ್ಮರಣೆ ಅಂಗವಾಗಿ ದಾಸೋಹ ದಿನ ಆಚರಿಸಿದೆ. ಅನ್ನ, ಅಕ್ಷರ, ಆಶ್ರಯ ಎಂಬ ತ್ರಿವಿಧ ದಾಸೋಹ ಮೂಲಕ ಸಮಾಜವನ್ನು ಪೊರೆದವರು ಶ್ರೀಗಳು. ಬಸವಣ್ಣನ ಈ ವಚನದಂತೆ ಗುರುಗಳು ತ್ರಿವಿಧ ದಾಸೋಹದಲ್ಲಿ ತಾವು ಆರಾಧಿಸಿದರು.
ಈ ಹಿನ್ನೆಲೆಯಲ್ಲಿ ತಾಲೂಕಿನ ವಿವಿಧೆಡೆಗಳಲ್ಲಿ ಡಾ.ಶ್ರೀ ಶಿವಕುಮಾರ ಸ್ವಾಮಿಜಿ ರವರ ಪುಣ್ಯಸ್ಮರಣೆ ಪ್ರಯುಕ್ತ ರಾಜ್ಯ ಸರಕಾರ ಜಾರಿ ಮಾಡಿರುವ ದಾಸೋಹ ದಿನವನ್ನಾಗಿ ಆಚರಣೆ ಮಾಡಲಾಯಿತು.
ದಾಸೋಹ ದಿನ: ನಗರದ ಬಸವಭವನದಲ್ಲಿ ದೊಡ್ಡಬಳ್ಳಾಪುರ ವೀರಶೈವಲಿಂಗಾಯತ ಮುಖಂಡರು ದಾಸೋಹ ದಿನವನ್ನು ಆಚರಿಸಿದರು. ಈ ವೇಳೆ ಗ್ರಾಮಾಂತರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಸತೀಶ್, ಮುಖಂಡರಾದ ಸಿದ್ದರಾಮಣ್ಣ, ಮುನಿರಾಜು, ಪುಟ್ಟಬಸವರಾಜು, ವಿರುಪಾಕ್ಷಯ್ಯ, ಮಂಜುನಾಥ್, ಬಸವರಾಜು ಬಸವಭವನ ಕಾರ್ಯದರ್ಶಿ, ಸುಜಯ್, ಬಸವರಾಜಯ್ಯ, ಮಲ್ಲಪ್ಪ, ಮಂಜುನಾಥ್, ಲೀಲಾಮಹೇಶ್, ಜ್ಯೋತಿ ಬಸವರಾಜು, ದ್ರಾಕ್ಷಾಯಿಣಿ, ಮಂಜುಳ, ಲತಾ ಮತ್ತಿತರರಿದ್ದರು.
ಅನ್ನ ದಾಸೋಹ: ನಗರದ ಇಸ್ಲಾಂಪುರ ವೃತ್ತದಲ್ಲಿ ಶ್ರೀ ಜಗಜ್ಯೋತಿ ಬಸವೇಶ್ವರ ಕನ್ನಡ ಸಂಘದ ವತಿಯಿಂದ ಪುಣ್ಯಸ್ಮರಣೆ ಕಾರ್ಯಕ್ರಮ ಮಾಡಲಾಯಿತು ಹಾಗೂ ಅನ್ನ ದಾಸೋಹ ಮಾಡಲಾಯಿತು.
ಈ ವೇಳೆ ಸಂಘದ ಗೌರವ ಅಧ್ಯಕ್ಷ ಮಹಾಂತೇಶ್, ಅಧ್ಯಕ್ಷ ಮೋಹನ್, ಉಪಾಧ್ಯಕ್ಷ ಮಂಜುನಾಥ.ಎಸ್., ಕಾರ್ಯದರ್ಶಿ ಶ್ರೀನಿವಾಸ್, ಖಜಾಂಚಿ ಶಿವಣ್ಣ ಹಾಗೂ ಮುಖಂಡರಾದ ಮಹಾಲಿಂಗ.ಜಿ., ನಾಗೇಶ್, ನಾಗರಾಜು, ಮಂಜುನಾಥ್.ಡಿ.ಎನ್., ನರೇಶ್ ರೆಡ್ಡಿ, ಜಯಣ್ಣ, ಸಂತೋಷ್, ರವಿ, ಮನು ಜಿ.ಸಿ ಮತ್ತಿತರರಿದ್ದರು.
ಮಾಲಾರ್ಪಣೆ: ತಾಲೂಕಿನ ಶಿವಪುರ (ವಡ್ಡನಹಳ್ಳಿ)ದ ವೀರಶೈವ ಗೆಳೆಯರ ಬಳಗದಿಂದ ಡಾ.ಶ್ರೀ ಶಿವಕುಮಾರ ಸ್ವಾಮಿಜಿ ರವರ ಪುಣ್ಯಸ್ಮರಣೆ ಪ್ರಯುಕ್ತ ಶಿವಕುಮಾರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಆಚರಿಸಲಾಯಿತು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….