ದೊಡ್ಡಬಳ್ಳಾಪುರ: ಭಾರತ್ ಗ್ಯಾಸ್ ಅಡುಗೆ ಅನಿಲದ ಹೊಸ ಸಂಪರ್ಕ ಹಾಗೂ ಈಗಾಗಲೇ ಅನಿಲ ಸಂಪರ್ಕ ಹೊಂದಿರುವ ಗ್ರಾಹಕರು, 2ನೇ ಸಿಲೆಂಡರ್ ಸಂಪರ್ಕ ಪಡೆದರೆ ಬಂಪರ್ ಬಹುಮಾನಗಳನ್ನು ಗೆಲ್ಲುವ ಅವಕಾಶ ಇದೆ ಎಂದು ನಗರದ ಭಾರತ್ ಗ್ಯಾಸ್ ಮಂಜುನಾಥ ಏಜೆನ್ಸಿ ಮಾಲೀಕ ಡಿ.ನಂದಕುಮಾರ್ ತಿಳಿಸಿದ್ದಾರೆ.
ಈ ಕುರಿತು ಹರಿತಲೇಖನಿಗೆ ಮಾಹಿತಿ ನೀಡಿರುವ ಅವರು, ಅನಿಲ ಸಂಪರ್ಕ ಹೊಂದಿರುವ ಗ್ರಾಹಕರಿಗೆ ಕೂಪನ್‍ಗಳನ್ನು ವಿತರಿಸಿ ಈ ಬಗ್ಗೆ ಮಾಹಿತಿ ನೀಡಿದ ಅವರು ಈಗ ಅಡಿಗೆ ಅನಿಲ ಸಂಪರ್ಕ ಪಡೆಯುವುದು ಸುಲಭ ವಿಧಾನವಾಗಿದ್ದು, ಜೊತೆಗೆ ಬಹುಮಾನಗಳ ಯೋಜನೆಗಳಿವೆ.
ಸ್ಕೂಟರ್, ಎಲ್.ಇ.ಡಿ ಟಿ.ವಿ ಸೇರಿದಂತೆ ಹತ್ತು ಲಕ್ಷಕ್ಕೂ ಅಕ ಮೌಲ್ಯದ ಒಟ್ಟು 500 ಬಹುಮಾನಗಳು ಗ್ರಾಹಕರಿಗೆ ಲಭಿಸಲಿವೆ. ಈ ಅವಕಾಶ ಜನವರಿ 1ರಿಂದ ಏಪ್ರಿಲ್ 10ರವರೆಗೆ ಸಂಪರ್ಕ ಪಡೆಯುವ ಗ್ರಾಹಕರಿಗೆ ಮಾತ್ರ ಅನ್ವಯ ಲಕ್ಕಿ ಡ್ರಾ ಮೂಲಕ ಆಯ್ಕೆಯಾಗುವ ಗ್ರಾಹಕರಿಗೆ ಏ.24ರಂದು ಬಹುಮಾನಗಳ ವಿತರಣೆ ನಡೆಯಲಿದೆ.ಈ ಯೋಜನೆ ಎಲ್ಲಾ ಭಾರತ್ ಗ್ಯಾಸ್ ಏಜೆನ್ಸಿಯ ಗ್ರಾಹಕರು ಬೆಂಗಳೂರು ನಗರ,ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಚಿತ್ರದುರ್ಗ, ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಗ್ರಾಹಕರಿಗೆ ಅವಕಾಶವಿದೆ ಎಂದರು.
ಕರೊನಾ ವೈರಸ್ ಹರಡುತ್ತಿರುವ ಸಮಯದಲ್ಲಿ ಗ್ರಾಹಕರು ಆನ್‍ಲೈನ್ ಮೂಲಕ ಡಿಜಿಟಲ್ ಪೇಮೆಂಟ್ ಮಾಡಲು ಸಹಕಾರಿಯಾಗುವಂತೆ ಕಂಪನಿಯು ವ್ಯವಸ್ಥೆ ಕಲ್ಪಿಸಿದ್ದು, ನಗದು ವ್ಯವಹಾರವನ್ನು ಕಡಿತಗೊಳಿಸಲು ಗ್ರಾಹಕರು ಹಾಗೂ ಸರಬರಾಜುದಾರರು ಈ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕು ಎಂದು ಬಿಪಿಸಿಎಲ್ ಗ್ರಾಹಕರಲ್ಲಿ ಮನವಿ ಮಾಡಿದೆ.
ಭಾರತ್ ಗ್ಯಾಸ್ ರೀಫಿಲ್ ಸಿಲಿಂಡರ್ ಬುಕಿಂಗ್‍ಗಾಗಿ ಬಿಪಿಸಿಎಲ್‍ನ ಸ್ಮಾರ್ಟ್‍ಲೈನ್ ವಾಟ್ಸಾಪ್ ಸಂಖ್ಯೆ 1800-22-4344 ಇದನ್ನು ಸೇವ್ ಮಾಡಿಕೊಂಡು ಇದೇ ಸಂಖ್ಯೆಗೆ ಎಚ್‍ಐ ಎಂದು ಟೈಪ್ ಮಾಡಿ ಕಳುಹಿಸಿ , ನಂತರ ಫೋನ್ ಗೆ ಬರುವ ಸಂದೇಶದಲ್ಲಿಯೇ ರೀಫಿಲ್ ಬುಕ್ ಮಾಡಿ ಹಾಗೂ ಆನ್ಲೈನ್ ಮೂಲಕ ಹಣಸಂದಾಯ ಮಾಡುವ ಈ ವಿಧಾನಗಳ ಮೂಲಕ ನೀವು ಸುಲಭವಾಗಿ ಹಣ ಪಾವತಿಸಬಹುದು ಫೋನ್ ಪೇ, ಪೇಟಿಎಮ್, ಗೂಗಲ್ ಪೇ, ಅಮೇಜಾನ್ ಪೇ ಹಾಗೂ ಎಲ್ಲಾ ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ ಮೂಲಕ ಹಣ ಪಾವತಿ ಮಾಡಬಹುದು ಎಂದರು.
ಎರಡು ಗಂಟೆಗಳಲ್ಲಿಯೇ ಹೊಸ ಗ್ಯಾಸ್ ಸಂಪರ್ಕ ಪಡೆಯಲು 9611100111 ಸಂಖ್ಯೆಗೆ ನಿಮ್ಮ ವಿವರಗಳನ್ನು ಹಾಗೂ ವಿಳಾಸವನ್ನು ವ್ಯಾಟ್ಸ್ ಆ್ಯಪ್ ಮಾಡಬಹುದಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಭಾರತ್ ಗ್ಯಾಸ್ ಮಂಜುನಾಥ ಏಜೆನ್ಸಿ ಮುಖ್ಯಸ್ಥರಾದ ಆರ್.ದಯಾನಂದ್, ವ್ಯವಸ್ಥಾಪಕ ರವಿಚಂದ್ರ ಮತ್ತಿತರರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….