Site icon ಹರಿತಲೇಖನಿ

ಶೋಷಿತ ಸಮುದಾಯಗಳ ಬಗ್ಗೆ ಕಾಳಜಿ ವಹಿಸುವ ಬಿ.ಎಸ್.ಪಿ: ರಾಜ್ಯ ಕಾರ್ಯದರ್ಶಿ ಪುರುಷೋತ್ತಮ್

Channel Gowda
Hukukudi trust

ದೊಡ್ಡಬಳ್ಳಾಪುರ: ಚುನಾವಣಾ ಸಂದರ್ಭದಲ್ಲಿ ಮತದಾರರನ್ನು ಓಲೈಸಲು ರಾಜಕೀಯ ಪಕ್ಷಗಳು ಕಿಟ್‍ಗಳ ವಿತರಣೆ, ಮೊದಲಾದ ಆಮಿಷಗಳನ್ನು ತೋರಿಸುತ್ತಿವೆ. ಆದರೆ ಬಿಎಸ್‍ಪಿ ಶೋಷಿತ ಸಮುದಾಯಗಳ ಬಗ್ಗೆ ಸದಾಕಾಲ ಕಾಳಜಿ ವಹಿಸುತ್ತಿದ್ದು, ಬಿ.ಎಸ್.ಪಿ ಅನಾಯಕಿ ಮಾಯಾವತಿ ಶೋಷಿತ ಸಮುದಾಯದ ಆಶಾಕಿರಣವಾಗಿದ್ದಾರೆ ಎಂದು ಬಿಎಸ್‍ಪಿ ರಾಜ್ಯ ಕಾರ್ಯದರ್ಶಿ ಪುರುಷೋತ್ತಮ ಹೇಳಿದ್ದಾರೆ.

Aravind, BLN Swamy, Lingapura

ತಾಲೂಕು ಕಚೇರಿ ಸಮೀಪದ ಬಿಎಸ್‍ಪಿ ಪಕ್ಷದ ಕಚೇರಿಯಲ್ಲಿ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಅವರ  66ನೇ ಜನ್ಮದಿನಾಚರಣೆ ಅಂಗವಾಗಿ ಬಹುಜನ ಸಮಾಜ ಪಾರ್ಟಿ ವತಿಯಿಂದ  ತಾಲೂಕಿನ ಎಲ್ಲಾ ಹೋಬಳಿಗಳ ಆಯ್ದ ಬಡ ಕುಟುಂಬಗಳಿಗೆ 250 ದಿನಸಿ ಕಿಟ್‍ಗಳನ್ನು ವಿತರಣೆ ಮಾಡಿ ಮಾತನಾಡಿದರು.

ಬಿಎಸ್‍ಪಿ ಬಹು ವರ್ಗದ ಜನಗಳ ಆಶಯಗಳಿಗೆ ಸ್ಪಂದಿಸುತ್ತಾ ಬಂದಿದ್ದು. ದೇಶ ಕಂಡ ಉತ್ತಮ ನಾಯಕಿ ಮಾಯಾವತಿಯವರ ಜನ್ಮದಿನಕ್ಕೆ ದೀನದಲಿತರಿಗೆ ದಿನಸಿ ಕಿಟ್‍ಗಳನ್ನು ನೀಡುವ ಮೂಲಕ ಆವರ ಆಶಯಗಳನ್ನು ಜನಕ್ಕೆ ಮುಟ್ಟಿಸುವ ಕಾರ್ಯವನ್ನು ನಾವು ಮಾಡುತ್ತಿದ್ದೇವೆ. ವಿಚಾರ, ಪ್ರಣಾಳಿಕೆಗಳ ಆಧಾರದ ಮೇಲೆ ಅಕಾರಕ್ಕೆ ಬರುವ ಪಕ್ಷ ಬಿಎಸ್‍ಪಿ ಆಗಿದ್ದು, ಅಂಬೇಡ್ಕರ್ ಅವರ ಸಂವಿಧಾನದ ಆಶಯವನ್ನು ಉಳಿಸಲು ಕಟಿ ಬದ್ದರಾಗಿದ್ದೇವೆ. ಮಾಯಾವತಿ ಅವರು ಮುಖ್ಯಮಂತ್ರಿಯಾಗಿದ್ದಾಗ ಕೈಗೊಂಡಿದ್ದ ದಿಟ್ಟ ನಿರ್ಧಾರಗಳು ಹಾಗೂ ಬಡವರ ಹಾಗೂ ದೀನ ದಲಿತರ ಏಳಿಗೆಗಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮಗಳನ್ನು ನಾವು ಸ್ಮರಿಸಬೇಕಿದೆ ಎಂದರು.

Aravind, BLN Swamy, Lingapura

ಕಾರ್ಯಕ್ರಮದಲ್ಲಿ ಬಿಎಸ್‍ಪಿ ತಾಲೂಕು ಉಸ್ತುವಾರಿ ಕೆ.ವಿ.ಮುನಿಯಪ್ಪ, ತಾಲೂಕು ಅಧ್ಯಕ್ಷ ಹರೀಶ್‍ಜಗನ್ನಾಥ್,  ಉಪಾಧ್ಯಕ್ಷ ಪೂಜಪ್ಪ, ಪ್ರಧಾನ ಕಾರ್ಯದರ್ಶಿ ಎಂ.ಕೆ.ನರೇಂದ್ರಮೂರ್ತಿ, ಸಂಘಟನಾ ಕಾರ್ಯದರ್ಶಿ ಸುರೇಶ್, ದೊಡ್ಡಬಳ್ಳಾಪುರ ನಗರ ಅಧ್ಯಕ್ಷ ಶೋಯಬ್‍ಖಾನ್, ತಾಲೂಕು ಮಹಿಳಾ ಘಟಕದ ಅಧ್ಯಕ್ಷರಾದ ಕಮಲಮ್ಮ, ತಾಲೂಕು ಮಹಿಳಾ ಘಟಕದ ಉಪಾಧ್ಯಕ್ಷೆ ಫಾತಿಮಾ, ದೊಡ್ಡಬೆಳವಂಗಲ ಹೊಬಳಿ ಅಧ್ಯಕ್ಷ ಆನಂದ್, ಸಾಸಲು ಹೋಬಳಿ ಅಧ್ಯಕ್ಷ ನರಸಿಂಹರಾಜು, ಮಧುರೆ ಹೊಬಳಿ ಅಧ್ಯಕ್ಷ ನರಸಿಂಹಮೂರ್ತಿ, ನಗರ ಮತ್ತು ತಾಲೂಕು ಮಟ್ಟದ ಎಲ್ಲಾ ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….

Exit mobile version