ಮಧ್ಯಪ್ರದೇಶ: 29 ಮರಿಗಳಿಗೆ ಜನ್ಮ ನೀಡಿದ್ದ ಕಾಲರ್ ವಾಲಿ ಮಾರತರಂ ಎಂದೂ ಪ್ರಸಿದ್ಧಿಯಾಗಿದ್ದ ಹುಲಿ ವೃದ್ಧಾಪ್ಯದ ಕಾರಣ ಮೃತಪಟ್ಟಿದೆ. 16 ವರ್ಷಕ್ಕು ಹೆಚ್ಚು ವಯಸ್ಸಾಗಿದ್ದ ಹೆಣ್ಣುಹುಲಿ ಮಧ್ಯಪ್ರದೇಶದ ಪೆಂಚ್ ಹುಲಿ ಸಂರಕ್ಷಿತ ಪ್ರದೇಶದಲ್ಲಿ ವಾಸವಿತ್ತು.
ಅರಣ್ಯ ಇಲಾಖೆ ಈ ಸೂಪರ್ ಅಮ್ಮನಿಗೆ ಟಿ-15 ಎಂದು ಅಧಿಕೃತವಾದ ಹೆಸರು ನೀಡಿತ್ತು. ಆದರೂ ಸ್ಥಳೀಯರು ಅವಳನ್ನು ಪ್ರೀತಿಯಿಂದ ಕಾಲರ್ ವಾಲಿ ಎಂದು ಕರೆಯುತ್ತಿದ್ದರು.
ಮಧ್ಯಪ್ರದೇಶದ ಸಚಿವ ಡಾ.ನರೋತ್ತಮ್ ಮಿಶ್ರಾ ಸೂಪರ್ ಮಾಮ್ ನಿಧನಕ್ಕೆ ಟ್ವಿಟ್ಟರ್‌ನಲ್ಲಿ ಸಂತಾಪ ವ್ಯಕ್ತಪಡಿಸಿದ್ದಾರೆ. ಸೂಪರ್ ಮಾಮ್‌ಗೆ ಕೊನೆಯ ನಮಸ್ಕಾರ. 29 ಮರಿಗಳಿಗೆ ಜನ್ಮ ನೀಡಿದ ಪೆಂಚ್ ಟೈಗರ್ ರಿಸರ್ವ್ನ ಕಾಲರ್ ವಾಲಿ ಹುಲಿ ಸಾವಿನ ಸುದ್ದಿ ದುಃಖಕರವಾಗಿದೆ. ಈ ಸೂಪರ್ ಅಮ್ಮನ ಕೊಡುಗೆಯಿಂದಾಗಿ ಇಂದು ಮಧ್ಯಪ್ರದೇಶ ಹುಲಿಗಳ ರಾಜ್ಯ ಎಂದು ಗುರುತಿಸಿಕೊಂಡಿದೆ ಎಂದು ತಿಳಿಸಿದ್ದಾರೆ.
ಇನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಕಾಲರ್ ವಾಲಿ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….