Site icon ಹರಿತಲೇಖನಿ

ಬೆಂ.ಗ್ರಾ.ಜಿಲ್ಲೆ ಕೋವಿಡ್ -19 ಬುಲೆಟಿನ್: ಜಿಲ್ಲೆಯಲ್ಲಿಂದು 143 ಮಂದಿಗೆ ಸೋಂಕು

Channel Gowda
Hukukudi trust

ಬೆಂ.ಗ್ರಾ.ಜಿಲ್ಲೆ: ಕೋವಿಡ್ ಮೂರನೇ ಅಲೆ ಆತಂಕ ಜಿಲ್ಲೆಯಲ್ಲಿ ದಿನದಿಂದ‌ ದಿನಕ್ಕೆ ತೀವ್ರವಾಗುತ್ತಿದ್ದು, ಇಂದು 143 ಮಂದಿಗೆ ಸೋಂಕು ದೃಢಪಟ್ಟಿದೆ.

Aravind, BLN Swamy, Lingapura

ಜಿಲ್ಲಾಡಳಿತ ಬಿಡುಗಡೆ ಮಾಡಿರುವ ಜ.10ರ ಬುಲೆಟಿನ್ ಅನ್ವಯ ಇಂದು ಹೊಸದಾಗಿ 143 ಕರೊನಾ ಪ್ರಕರಣಗಳು ವರದಿಯಾಗಿದೆ. ಅಲ್ಲದೆ ಕೋವಿಡ್ ಸೋಂಕಿನಿಂದ 16 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ವರದಿಯನ್ವಯ ಹೊಸಕೋಟೆ ತಾಲೂಕಿನ 22 ಪುರುಷರು, 08 ಮಹಿಳೆಯರು ಸೇರಿ 30. 

Aravind, BLN Swamy, Lingapura

ದೇವನಹಳ್ಳಿ ತಾಲೂಕಿನ 25 ಪುರುಷರು, 08 ಮಹಿಳೆಯರು ಸೇರಿ 33.

ದೊಡ್ಡಬಳ್ಳಾಪುರ ತಾಲೂಕಿನ 21 ಪುರುಷರು, 17 ಮಹಿಳೆಯರು ಸೇರಿ 38. ಹಾಗೂ ನೆಲಮಂಗಲ ತಾಲೂಕಿನ 27 ಪುರುಷರು, 15 ಮಹಿಳೆಯರು ಸೇರಿ 42 ಮತ್ತು ಒಟ್ಟು 143 ಜನರಿಗೆ ಸೋಂಕು ದೃಢಪಟ್ಟಿದೆ ಎನ್ನಲಾಗಿದೆ.

ಪ್ರಸ್ತುತ ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 494ಕ್ಕೆ ಏರಿಕೆಯಾಗಿದೆ. ಅಲ್ಲದೆ 692 ಮಂದಿಯನ್ನು ಕಡ್ಡಾಯ ಗೃಹ ಬಂಧನದಲ್ಲಿ ಇಡಲಾಗಿದೆ.

ಇಂದಿನ ವರದಿಯ ಪ್ರಕಾರ 3018 ಮಂದಿಯ ಫಲಿತಾಂಶ ಬಾಕಿ ಉಳಿದಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….

Exit mobile version