ಬೆಂ.ಗ್ರಾ.ಜಿಲ್ಲೆ: ಹೊರ ರಾಜ್ಯದಲ್ಲಿರುವ ಶಬರಿಮಲೆ ಮತ್ತು ಓಂ ಶಕ್ತಿ ದೇವಸ್ಥಾನಗಳಿಗೆ ಭೇಟಿ ನೀಡಿದ ಹಾಗೂ ಭೇಟಿ ನೀಡಲಿರುವ ಜಿಲ್ಲೆಯ ಭಕ್ತರಿಗೆ ಜಿಲ್ಲಾಡಳಿತ ಶಾಕ್ ನೀಡಿದೆ.
ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರ ಆದೇಶದ ಅನ್ವಯ ಕೋವಿಡ್ ಹೊಸ ರೂಪಾಂತರಿ ತಳಿ ಒಮಿಕ್ರಾನ್ ತಡೆಗಟ್ಟುವ ಸಲುವಾಗಿ ಜಿಲ್ಲೆಯಿಂದ ಓಂಶಕ್ತಿ. ಶಬರಿಮಲೆ ಹಾಗೂ ಧಾರ್ಮಿಕ ದೇವಸ್ಥಾನಗಳಲ್ಲಿ ಭಾಗವಹಿಸಲು ಬೇರೆ ರಾಜ್ಯಕ್ಕೆ ಪ್ರಯಾಣ ಮಾಡುವ ಮುನ್ನ ಆರ್ಟಿಪಿಸಿಆರ್ ಟೆಸ್ಟ್ಗೆ ಒಳಪಡಿಸುವುದು ಮತ್ತು ಕೋವಿಡ್ -19 ನೆಗೆಟಿವ್ ಪ್ರಮಾಣ ಪತ್ರ ನೀಡಬೇಕಿದೆ.
ಓಂಶಕ್ತಿ. ಶಬರಿಮಲೆ ಹಾಗೂ ಧಾರ್ಮಿಕ ದೇವಸ್ಥಾನಗಳಲ್ಲಿ ಭಾಗವಹಿಸಿ ಮರಳಿ ಜಿಲ್ಲೆಗೆ ಬಂದವರು 7 ದಿನ ಹೋಂ ಕ್ವಾರಂಟೈನ್ ಇದ್ದು, 8ನೇ ದಿನ ಕೋವಿಡ್-19 ನೆಗೆಟಿವ್ ವರದಿ ನೀಡಬೇಕಿದೆ.
ಅಲ್ಲದೆ ಅಂತಿಮವಾಗಿ ಕೆಎಸ್ ಆರ್ಟಿಸಿ ಸಂಸ್ಥೆಗಳು ಓಂಶಕ್ತಿ. ಶಬರಿಮಲೆ ಹಾಗೂ ಧಾರ್ಮಿಕ ದೇವಸ್ಥಾನಗಳಲ್ಲಿ ಭಾಗವಹಿಸಿ ವಾಪಾಸಾಗುವ ವೇಳೆ ಸ್ಥಳೀಯ ಆಸ್ಪತ್ರೆ ಬಳಿ ನಿಲುಗಡೆ ಮಾಡಿ ಪ್ರಯಾಣಿಕರನ್ನು ಆರ್ಟಿಪಿಸಿಆರ್ ತಪಾಸಣೆಗೆ ಒಳಪಡಿಸುವುದು ಕಡ್ಡಾಯವಾಗಿದೆ.
ಪ್ರಯಾಣಿಕರು ಆಗಮಿಸಿದ ತಕ್ಷಣ ಕೆಎಸ್‌ಆರ್‌ಟಿಸಿ ಸಂಸ್ಥೆಯಿಂದ ಮಾಹಿತಿಯನ್ನು ಪಡೆದು ಕೋವಿಡ್ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ ಎಂದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….