ದೊಡ್ಡಬಳ್ಳಾಪುರ: ಕೊವಿಡ್-19 ರೂಪಾಂತರಿ ಓಮಿಕ್ರಾನ್ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಜಾರಿಗೊಳಿಸಿರುವ ವಾರಾಂತ್ಯದ ಕಫ್ರ್ಯೂ ಹಿನ್ನಲೆಯಲ್ಲಿ ತಾಲೂಕಿನಲ್ಲಿ ಜನತಾ ಕಪ್ರ್ಯೂ ಜಾರಿಗೊಳಿಸಿದ್ದ ಹಿನ್ನಲೆಯಲ್ಲಿ ಬಹುತೇಕ ವಾಣಿಜ್ಯ ಚಟುವಟಿಕೆಗಳು ಸ್ಥಬ್ದವಾಗಿದ್ದವು. ದಿನಸಿ, ತರಕಾರಿ ಹಣ್ಣು ಔಷಗಳು, ಹಾಲು ಮೊದಲಾಗಿ ಅಗತ್ಯ ವಸ್ತುಗಳ ಸೇವೆ ಎಂದಿನಂತಿತ್ತು. ಜನಸಂಚಾರ ವಿರಳವಾಗಿತ್ತು.
ಭಾನುವಾರವಾದ್ದರಿಂದ ಸರ್ಕಾರಿ ಕಚೇರಿಗಳು, ಶಾಲಾ ಕಾಲೇಜುಗಳು, ಹಾಗೂ ಬ್ಯಾಂಕ್ಗಳು ಕಾರ್ಯ ನಿರ್ವಹಿಸಲಿಲ್ಲ. ಚಿತ್ರಮಂದಿರಗಳಲ್ಲಿ ಪ್ರದರ್ಶನಗಳು ಸ್ಥಗಿತಗೊಂಡಿದ್ದೃ ಮಾರುಕಟ್ಟೆ ಪ್ರದೇಶದಲ್ಲಿ ಜನಸಂದಣಿ ಇತ್ತು.
ನಗರದಲ್ಲಿ ನೇಕಾರಿಕೆ ಹಾಗೂ ಕೈಗಾರಿಕಾ ಪ್ರದೇಶದಲ್ಲಿನ ಕಾರ್ಖಾನೆಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು. ಈ ನಡುವೆ ಹಲವು ವಾಣಿಜ್ಯ ಮಳಿಗೆಗಳು ಅರೆಬರೆ ಬಾಗಿಲು ತೆಗೆದುಕೊಂಡು ಕಾರ್ಯ ನಿರ್ವಹಿಸುತ್ತಿದ್ದ ದೃಶ್ಯಕಂಡು ಬಂದಿತು. ಹೋಟೆಲ್ಗಳಲ್ಲಿ ಪಾರ್ಸಲ್ಗಳಿಗೆ ಮಾತ್ರ ಅವಕಾಶವಿತ್ತು. ಮದ್ಯದಂಗಡಿಗಳು ಬಂದ್ ಆಗಿದ್ದವು.
ತಾಲೂಕಿನ ಘಾಟಿ ಹಾಗೂ ಕನಸವಾಡಿ ಕ್ಷೇತ್ರಕ್ಕೆ ಭಕ್ತರ ಪ್ರವೇಶಕ್ಕೆ ನಿರ್ಬಂಧಿಸಲಾಗಿ, ದೇವಾಲಯದ ಬಾಗಿಲು ಹಾಕಿತ್ತು.
ಕೆಲವು ನಿಗದಿತ ಮಾರ್ಗಗಳು ಹಾಗೂ ದೂರದ ಮಾರ್ಗಗಳನ್ನು ಹೊರತುಪಡಿಸಿ, ಗ್ರಾಮೀಣ ಭಾಗದಲ್ಲಿ ರಾಜ್ಯ ಸಾರಿಗೆ ಬಸ್ ಸಂಚಾರವಿರಲಿಲ್ಲ. ಬಿಎಂಟಿಸಿ ಬಸ್ ಸಂಚಾರ ತುರ್ತು ಸೇವೆಗಳಿಗೆ ಮೀಸಲಿರಿಸಲಾಗಿತ್ತು. ಇದರಿಂದಾಗಿ ಬಸ್ ನಿಲ್ದಾಣದಲ್ಲಿ ಬಸ್ಗಳ ಸಂಚಾರ ವಿರಳಗೊಂಡಿತ್ತು.
ಪೊಲೀಸ್ ಇಲಾಖೆ ಅನಗತ್ಯವಾಗಿ ಸಂಚರಿಸುವ ವಾಹನಗಳ ಮೇಲೆ ನಿಗಾ ವಹಿಸಲಾಗಿತ್ತು. ಘಾಟಿ ದೇವಾಲಯಕ್ಕೆ ಭಕ್ತರ ಪ್ರವೇಶ ನಿರ್ಬಂಧುಸಿದ್ದ ಹಿನ್ನಲೆಯಲ್ಲಿ ತಾಲೂಕಿನ ಕಂಟನಕುಂಟೆ, ಮಾಕಳಿ ರಸ್ತೆಯ ಮಾರ್ಗಗಳಲ್ಲಿ ಬ್ಯಾರಿಕೇಡ್ ಹಾಕಿ ಸೂಚನಾ ಫಲಕ ಹಾಕಲಾಗಿತ್ತು. ಹೊರಭಾಗದಿಂದ ಬರುವ ಯಾವುದೇ ವಾಹನಗಳು ಸಂಚರಿಸದಂತೆ ಪೊಲೀಸ್ ಕಾವಲು ಹಾಕಲಾಗಿತ್ತು.
ಸೋಮವಾರ ಬೆಳಗಿನ ಜಾವ 5 ಗಂಟೆವರೆಗೆ ವಾರಾಂತ್ಯ ಕಪ್ರ್ಯೂ ಹಾಗೂ ವಾರದ ದಿನಗಳಲ್ಲಿ ರಾತ್ರಿ ಕಪ್ರ್ಯೂ ವಿಧಿಸಿರುವ ಹಿನ್ನಲೆಯಲ್ಲಿ ಪೊಲೀಸರು ವಾಹನಗಳನ್ನು ತಪಾಸಣೆ ನಡೆಸಿ, ವಿವಿಧೆಡೆ ಗಸ್ತು ತಿರುಗುತ್ತಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….