ದೊಡ್ಡಬಳ್ಳಾಪುರ: ಶನಿವಾರ ತಾಲೂಕುಪಂಚಾತಿಯಿತಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ತಾಲೂಕಿನಲ್ಲಿ ಶೇ.100ರಷ್ಟು ಕೋವಿಡ್-19 ಲಸಿಕೆ ಪ್ರಗತಿ ಸಾಧಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರ ಸೂಚಸಿದ್ದಾರೆ.
ಈ ಹಿನ್ನೆಲೆಯಲ್ಲಿ ತಹಶೀಲ್ದಾರ್ ಮೋಹನಕುಮಾರಿ ಅವರು ತಾಲೂಕಿನ 19 ಆರೋಗ್ಯ ಕೇಂದ್ರಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಿಸಿ ಲಸಿಕಾಕರಣ ಕಾರ್ಯಕ್ರಮದ ಮೇಲ್ವಿಚಾರಣೆಗೆ ಸೂಚಿಸಿದ್ದಾರೆ.
ಇದರನ್ವಯ ನೋಡಲ್ ಅಧಿಕಾರಿಗಳು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ಗ್ರಾಮಪಂಚಾಯಿತಿ ಪಿಡಿಒ ಅವರೊಂದಿಗೆ ಟಾಸ್ಕ್ ಫೋರ್ಸ್ ಸಭೆ ಕರೆಯುವುದು, ಚುನಾಯಿತ ಪ್ರತಿನಿಧಿಗಳ ಸಭೆ ಕರೆದು ಶೇ. 100ರಷ್ಟು ಕೋವಿಡ್ ಲಸಿಕೆ ಪ್ರಗತಿ ಸಾಧಿಸಲು ಕಾರ್ಯನಿರ್ವಹಿಸಲು ಸೂಚಿಸಲಾಗಿದೆ.
ನೋಡಲ್ ಅಧಿಕಾರಿಗಳು
ದೊಡ್ಡಬಳ್ಳಾಪುರ ನಗರ/ ಪ್ರಾ.ಆ.ಕೇಂದ್ರ: ಪೌರಾಯುಕ್ತ ರಮೇಶ್ ಎಸ್.ಸುಣಗಾರ್.
ಬಾಶೆಟ್ಟಹಳ್ಳಿ: ಮುಖ್ಯ ಅಧಿಕಾರಿ ಮುನಿರಾಜ್ ಮತ್ತು ಕಾರ್ಮಿಕ ನಿರೀಕ್ಷಕ ಪ್ರದೀಪ್.
ದೊಡ್ಡತುಮಕೂರು: ಮೀನುಗಾರಕೆ ಇಲಾಖೆ ಸಹಾಯಕ ನಿರ್ದೇಶಕ ಡಾ.ಸುನೀಲ್.
ಕೊನಘಟ್ಟ: ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಸುಶೀಲಮ್ಮ.
ತೂಬಗೆರೆ: ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸೋಮಶೇಖರ್.
ಮೆಳೇಕೋಟೆ: ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ದೀಪಾ.
ಎಸ್.ಎಸ್.ಘಾಟಿ: ಶಿಕ್ಷಣ ಇಲಾಖರ ಬಿಇಒ ಶುಭಮಂಗಳ.
ಜಿ.ಹೊಸಹಳ್ಳಿ: (ಹೆಸರು ಉಲ್ಲೇಖವಾಗಿಲ್ಲ) ಸಹಾಯಕನಿರ್ದೇಶಕರು, ಸಿರಿ ಇಲಾಖೆ.
ಆರೂಢಿ, ಸಾಸಲು, ಹಾಲೇನಹಳ್ಳಿ, ಕಾಡನೂರು: ಸಿಡಿಪಿಒ ಅನಿತಾಲಕ್ಷ್ಮೀ.
ಮರಳೇನಹಳ್ಳಿ: ಕ್ಷೇತ್ರಸಂಲನ್ಮೂಲ ವ್ಯಕ್ತಿ ಹನುಮಂತಪ್ಪ ಹೆಚ್.ಹಿಂದಿನಮನೆ.
ಕನಸವಾಡಿ: ಪಿಡ್ಲೂಡಿ ಎಇಇ ಪಟ್ಟಹನುಮಂತರಾಯಪ್ಪ
ಕಮ್ಮಸಂದ್ರ ಮತ್ತು ಕನಸವಾಡಿ: ಕೈಗಾರಿಕಾ ವಿಸ್ತರಣಾಧಿಕಾರಿ ನಾರಾಯಾಣಪ್ಪ.
ಕೋನೇನಹಳ್ಳಿ: ಹಿಂದುಳಿದ ವರ್ಗಗಳ ಇಲಾಖೆ ಸಹಾಯಕ ನಿರ್ದೇಶಕಿ ಅನಿತಾ ದೇವಿ ಎನ್ ನಾಯಕ್.
ಹುಲಿಕುಂಟೆ: ಅಕ್ಷರ ದಾಸೋಹ ಹೆಚ್.ಎಸ್.ದ್ರಾಕ್ಷಾಯಿಣಿ.
ದೊಡ್ಡಹೆಜ್ಜಾಜಿ: ಸಹಕಾರ ಸಂಘಗಳ ನಿಂಬಂಧಕರ ಕಚೇರಿ ಆರೀಫ್ ಉಲ್ಲಾ ಷರೀಫ್ ಅವರುಗಳನ್ನು ನೇಮಿಸಲಾಗಿದೆ.
ಈ ಆದೇಶದ ಹಿನ್ನೆಲೆಯಲ್ಲಿ ತಹಶೀಲ್ದಾರ್ ಮೋಹನಕುಮಾರಿ ಆದಿಯಾಗಿ ವಿವಿಧ ಇಲಾಖೆ ಅಧಿಕಾರಿಗಳು ಭಾನುವಾರ ತಾಲೂಕಿನ ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಕೋವಿಡ್ -19 ಲಸಿಕಾ ಕಾರ್ಯದ ಪರಿಶೀಲನೆ ನಡೆಸಿದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….