Site icon ಹರಿತಲೇಖನಿ

ಕೋವಿಡ್ ಲಸಿಕೆ ವಿತರಣೆ ಕಾಣದ ಪ್ರಗತಿ: ದೊಡ್ಡಬಳ್ಳಾಪುರದಲ್ಲಿ ಅಧಿಕಾರಿಗಳ ಮೇಲಿನ ಕೋಪ ಮಾಧ್ಯಮದವರ ಮೇಲೆ ತೋರಿದ ಡಿಸಿ…! / ಜಿಲ್ಲಾಧಿಕಾರಿ ವರ್ತನೆಗೆ ಪತ್ರಕರ್ತರ ಆಕ್ರೋಶ

Channel Gowda
Hukukudi trust

ದೊಡ್ಡಬಳ್ಳಾಪುರ: ಉತ್ತರ ಕರ್ನಾಟಕದ ಜಿಲ್ಲೆಗಳಿಗಿಂತಲು ರಾಜಧಾನಿಗೆ ಕೂಗಳತೆ ದೂರದಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ಹಾಕುವಲ್ಲಿ ಹಿಂದುಳಿದಿರುವುದಕ್ಕೆ ತಾಲ್ಲೂಕು ಆರೋಗ್ಯ ಅಧಿಕಾರಿ ವಿರುದ್ಧ ಕೆಂಡಾಮಂಡಲವಾದ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಸದಾ ಸಭೆಯಲ್ಲಿ ಸಬೂಬು ಹೇಳುತ್ತಲೇ ಕಾಲಕಳೆಯುತ್ತಿದ್ದರೆ ಕರೊನಾ ಸೋಂಕು ತಡೆಯುವುದಾದರು ಹೇಗೆ ಎಂದು ತೀವ್ರ ಅಸಮಧಾನ ವ್ಯಕ್ತಪಡಿಸಿದರು.

Aravind, BLN Swamy, Lingapura

ತಾಲ್ಲೂಕು ಪಂಚಾಯಿತಿ ಸಭಾಗಂಗಣದಲ್ಲಿ ಶನಿವಾರ ವಿವಿಧ ಇಲಾಖೆಗಳ ಅಧಿಕಾರಿಗಳ ತುರ್ತು ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು ನಾಲ್ಕು ಗೋಡೆಗಳ ನಡುವೆ ಕಳಿತುಕೊಂಡರೆ ಯಾರೂ ಸಹ ನಿಮ್ಮ ಬಳಿಗೆ ಬಂದು ಲಸಿಕೆ ಹಾಕಿಸಿಕೊಳ್ಳುವುದಿಲ್ಲ. ಲಸಿಕೆ ಹಾಕಿಸಿಕೊಳ್ಳಲು ಜನರಲ್ಲಿ ಅರಿವು ಮೂಡಿಸಬೇಕು. ಜನರು ಇರುವಲ್ಲಿಗೇ ಹೋಗಿ ಲಸಿಕೆ ಹಾಕೂವ ಮೂಲಕ ಶೇ 100ರಷ್ಟು ಪ್ರಗತಿ ಸಾಧಿಸಬೇಕಿತ್ತು. ಲಸಿಕೆ ಅಭಿಯಾನ ಆರೋಗ್ಯ ಇಲಾಖೆಯ ಅಧಿಕಾರಗಳಷ್ಟೇ ಜವಾಬ್ದಾರಿ ಕಂದಾಯ, ಗ್ರಾಮ ಪಂಚಾಯಿತಿ, ನಗರಸಭೆ ಸೇರಿದಂತೆ ಇತರೆ ಅಧಿಕಾರಿಗಳ ಜವಾಬ್ದಾರಿಯು ಇದೆ ಎಂದರು.

ಕೋವಿಡ್ 3ನೇ ಅಲೆ ಆರಂಭವಾಗಿದೆ. ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಳ್ಳುವ ಮೂಲಕ ಕೋವಿಡ್ ತೀವ್ರತೆ ಹೆಚ್ಚಾಗುವುದನ್ನು ತಡೆಯಲು ಪ್ರಯತ್ನಿಸುತ್ತಿದೆ. ಆದರೆ ಸರ್ಕಾದ ಸೂಚನೆಗಳನ್ನು ಸೂಕ್ತ ರೀತಿಯಲ್ಲಿ ಪಾಲಿಸದೇ ಇರುವುದೇ ಲಸಿಕೆ ನೀಡುವಿಕೆಯಲ್ಲಿ ಸಾಧನೆ ವಿಳಂಬವಾಗಿದೆ. ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾದರೆ ಆರೋಗ್ಯ ಇಲಾಖೆ ಕೈಗೊಂಡಿರುವ ಕ್ರಮಗಳು ಏನು ಎಂದು ಪ್ರಶ್ನಿಸಿದ ಜಿಲ್ಲಾಧಿಕಾರಿಗಳ ಪ್ರಶ್ನೆಗೆ ಸೂಕ್ತ ಉತ್ತರ ನೀಡಲು ಆರೋಗ್ಯ ಇಲಾಖೆ ಅಧಿಕಾರಿಗಳು ತಡವರಿಸಿದರು.

Aravind, BLN Swamy, Lingapura

ಮಾಧ್ಯಮದವರ ಮೇಲೆ ಹರಿಹಾಯ್ದ ಜಿಲ್ಲಾಧಿಕಾರಿ: ಕೋವಿಡ್ ಲಸಿಕೆ ಪ್ರಗತಿ ಪರಿಶೀಲನ ಸಭೆಯ ವರದಿ ಮಾಡಲು ತೆರಳಿದ್ದ ಮಾಧ್ಯಮದವರು ಪೋಟೋ ತೆಗೆಯಲು ಮುಂದಾಗುತ್ತಿದ್ದಂತೆ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ‘ಅಧಿಕಾರಿಗಳ ಸಭೆಯಲ್ಲಿ ಮಾಧ್ಯಮದವರಿಗೆ ಪ್ರವೇಶ ಇಲ್ಲ. ಸಭಾಂಗಣದ ಒಳಗೆ ಮಾಧ್ಯಮದವರನ್ನು ಯಾರು ಬರಲು ಅವಕಾಶ ನೀಡಿದ್ದು’ ಎಂದು ಸಿಟ್ಟಿಗೆದ್ದು ಮಾಧ್ಯಮದವರನ್ನು ಹೊರ ಹೋಗುವಂತೆ ಹರಿಹಾಯ್ದರು. ಜಿಲ್ಲಾಧಿಕಾರಿಗಳ ವರ್ತನಗೆ ಬೇಸರಗೊಂಡ ಮಾಧ್ಯಮದವರು ಸಭೆಯಿಂದ ಹೊರನಡೆದರು.

ಕೋವಿಡ್ ಮೂರನೇ ಅಲೆಯು ತೀವ್ರಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಲಸಿಕೆ ಅಭಿಯಾನ ಕುರಿತು ನಡೆಯುವ ಸಭೆಯ ವರದಿ ಮಾಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಹಾಗೂ ಲಸಿಕೆ ಹಾಕುವಲ್ಲಿ ನಿರ್ಲಕ್ಷ್ಯ ತೋರಿಸುವ ಅಧಿಕಾರಿ ನಡೆಯನ್ನು ಜನರಿಗೆ ತಿಳಿಸುವ ಗುರುತರವಾದ ಜವಾಬ್ದಾರಿ ಮಾಧ್ಯಮದವರ ಮೇಲಿದೆ. ಅಧಿಕಾರಿಗಳು ಸೂಕ್ತ ಸಮಯದಲ್ಲಿ ಕೋವಿಡ್ ಲಸಿಕೆ ಅಭಿಯಾನ ಕುರಿತು ಸೂಚನೆಗಳನ್ನು ನೀಡಿ ಪ್ರಗತಿ ಸಾಧಿಸದೇ ಮೂರನೇ ಅಲೆ ಪ್ರಾರಂಭವಾದ ನಂತರವೂ ಲಸಿಕೆ ಪ್ರಗತಿಗೆ ಮುಂದಾಗಿರುವುದೇ ಅವೈಜ್ಞಾನಿಕವಾಗಿದೆ.

ಸೂಕ್ತ ಕಳಜಿವಹಿದೆ ಯುದ್ದಕಾಲೇ ಶಸ್ತ್ರಭ್ಯಾಸ ಎಂಬಂತೆ ಕರೊನಾ ಮಾರಿ ಹೆಚ್ಚುತ್ತಿರುವಾಗ ಸಭೆ ನಡೆಸಿದ್ದಲ್ಲದೆ ವರದಿಗೆ ತೆರಳಿದ ಸಭೆಯಿಂದ ಮಾಧ್ಯಮದವರನ್ನು ಹೊರಹೋಗುವಂತೆ ಸೂಚನೆ ನೀಡಿರುವುದು ಖಡನೀಯ ಎಂದು ಪತ್ರಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಸಭೆಗೆ ಬರಬೇಡಿ: ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಆರಂಭವಾದ ಕೋವಿಡ್ ಲಸಿಕೆ ಪ್ರಗತಿ ಪರಿಶೀಲನ ಸಭೆಗೆ ತಡವಾಾಗಿ ಬಂದ ನಗರಸಭೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಸಭೆಯಲ್ಲಿ ಭಾಗವಹಿಸಬೇಡಿ ಎಂದು ಹೊರಗೆ ಕಳುಹಿಸಿದರು.

ಕೋವಿಡ್ ಲಸಿಕೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಉಪವಿಭಾಗಾಧಿಕಾರಿ ಅರುಳ್ ಕುಮಾರ್, ತಹಶೀಲ್ದಾರ್ ಮೋಹನಕುಮಾರಿ, ಜಿಲ್ಲಾ ಆರೋಗ್ಯಧಿಕಾರಿ ತಿಪ್ಪೇಸ್ವಾಮಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….

Exit mobile version