Site icon ಹರಿತಲೇಖನಿ

ದೊಡ್ಡಬಳ್ಳಾಪುರ: ಮಾರುಕಟ್ಟೆಯಲ್ಲಿ ಅವರೆಕಾಯಿ ಸೊಗಡು ಆರಂಭ / ರಾಗಿ, ಜೋಳದ ಬೆಳೆ ಮಧ್ಯೆ ಬೆಳೆಯುವ ಅವರೆಕಾಯಿ ಘಮಲು / ರಸ್ತೆ ಬದಿಯಲ್ಲಿ ರಾಶಿ ಹಾಕಿಕೊಂಡು ಮಾರಾಟ

Channel Gowda
Hukukudi trust

ದೊಡ್ಡಬಳ್ಳಾಪುರ: ಡಿಸೆಂಬರ್‌, ಜನವರಿ ಬಂದರೆ ಪ್ರತಿ ಮನೆಯಲ್ಲಿಯೂ ಅವರೆಕಾಯಿ ಘಮಲು ಇದ್ದೇ ಇರುತ್ತದೆ. ಚಳಿಗಾಲದಲ್ಲಿ ಅವರೆಕಾಳಿನ ಉಪ್ಪೆಸರು, ಇತಕು ಬೇಳೆ, ಮುದ್ದೆ ಹೆಸರು ಕೇಳಿದರೆ ಎಂತಹವರ ಬಾಯಲ್ಲೂನೀರು ಬರುತ್ತದೆ. ಅದರಲ್ಲೂ ಸೊಗಡು ಅವರೆಕಾಳಿನಸಾರು, ಮುದ್ದೆ ರುಚಿಯ ಮುಂದೆ ಬೇರೆ ಊಟವಿಲ್ಲ. ತಾಲೂಕಿನ ರೈತರು ರಾಗಿ, ಜೋಳದ ಬೆಳೆ ಮಧ್ಯೆ ಬೆಳೆಯುವ ಅವರೆಕಾಯಿ ಘಮಲು ಈಗ ತಾಲೂಕಿನಲ್ಲಿ ಹರಡಿಕೊಂಡಿದ್ದು, ರಸ್ತೆ ಬದಿಯಲ್ಲಿ ರಾಶಿ ಹಾಕಿಕೊಂಡು ಮಾರಾಟ ಮಾಡಲಾಗುತ್ತಿದೆ.

Aravind, BLN Swamy, Lingapura

ತಾಲೂಕಿನ 5 ಹೋಬಳಿಯಲ್ಲಿ ರಾಗಿ, ಮೆಕ್ಕೆ ಜೋಳ ಹೆಚ್ಚಾಗಿ ಬೆಳೆದಿದ್ದು, ಅದರ ಮಧ್ಯದಲ್ಲಿ ಕೆಲ ರೈತರು ಅವರೆ ಬೆಳೆಯನ್ನು ಹಾಕಿದ್ದಾರೆ. ಈ ಬಾರಿ ಮಳೆ ಹೆಚ್ಚಳ, ನಂತರ ಮಾಗಿಯ ಚಳಿ ಹೆಚ್ಚಿದ್ದು, ಬೆಳಗ್ಗೆ 9 ಗಂಟೆಯಾದರು ಮಂಜು ಬೀಳುತ್ತಲೇ ಇರುತ್ತದೆ. ಇದು ಅವರೆ ಬೆಳೆಗೆ ಹೇಳಿ ಮಾಡಿದಂತಹ ವಾತಾವರಣವಾಗಿದೆ.

ಇಳುವರಿ ಹೆಚ್ಚಳ: ಅವರೆ ಬಳ್ಳಿ ಹಾಗೂ ಅದರ ಕಾಯಿಯ ಮೇಲೆ ಬಿದ್ದಿರುವ ಮಂಜಿನ ಹನಿ ನೋಡುವುದೇ ಒಂದು ಸೊಬಗು, ಅವರೆಕಾಯಿ ಮುಟ್ಟಿದರೆ ಅದರ ಸೊಗಡು ಕೈಗೆ ಅಂಟುತ್ತಿದೆ. ಅಷ್ಟರಮಟ್ಟಿಗೆ ಈ ಬಾರಿ ಅವರೆಕಾಯಿ ಬೆಳೆದಿದ್ದು, ಇಳುವರಿಯೂ ಉತ್ತಮವಾಗಿದೆ.

Aravind, BLN Swamy, Lingapura

ಬೇಡಿಕೆ ಹೆಚ್ಚು: ತಾಲೂಕಿನಲ್ಲಿ ಯಂತ್ರಗಳನ್ನು ಬಳಸಿ ಬೆಳೆ ಕಟಾವು ಮಾಡುವ ಪ್ರಕ್ರಿಯೆ ಹೆಚ್ಚಾಗಿರುವುದರಿಂದ ಅವರೆ ಬೆಳೆ ಬೆಳೆಯುವರ ಸಂಖ್ಯೆ ಕಳೆದ ವರ್ಷಕ್ಕಿಂತ ಕಡಿಮೆಯಾಗಿದೆ. ಸ್ಥಳೀಯವಾಗಿ ಅಲ್ಲದೆ ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ  ಹಾಗೂ ಆಂಧ್ರ ಪ್ರದೇಶದಿಂದ ಸೊಗಡು ಅವರೆಕಾಯಿ ತಾಲೂಕಿನ ಮಾರುಕಟ್ಟೆಗೆ ಬರುತ್ತದೆ. 

ಮಾರುಕಟ್ಟೆಯಲ್ಲಿ ಗ್ರಾಹಕರ ಕೈಗೆಟಕುವ ಬೆಲೆಯಲ್ಲಿಅವರೆಕಾಯಿ ದೊರೆಯುತ್ತಿಲ್ಲ. ಒಂದು ಕೆಜಿ ಅವರ ಈಗ 40 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಕಡಿಮೆ ಇಲ್ವಾ ಎಂದು ಗ್ರಾಹಕರು ಕೇಳಿದ್ರೆ 100 ರೂ. ಕೊಡಿ ಎರಡುವರೆ ಕೆಜಿ ತೆಗೆದುಕೊಳ್ಳಿ ಎನ್ನುತ್ತಿದ್ದಾರೆ ವರ್ತಕರು.

ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….

Exit mobile version