Site icon ಹರಿತಲೇಖನಿ

ದಿನ ಭವಿಷ್ಯ: ಶುಕ್ರವಾರ, ಜನವರಿ 7, 2022, ದೈನಂದಿನ ರಾಶಿ ಭವಿಷ್ಯ / ಈ ರಾಶಿಯವರಿಗೆ ಮನೆ, ನಿವೇಶನ, ಆಸ್ತಿ ಖರೀದಿ ಯೋಗವಿದೆ

Channel Gowda
Hukukudi trust

ಮೇಷ: ಪೂರ್ಣವಿಶ್ವಾಸ ಇಲ್ಲದ ಅಥವಾ ತಿಳಿಯದ ಕೆಲಸದಲ್ಲಿ ಹಣವ್ಯಯ ಮಾಡಬೇಡಿ. ಹಣಕಾಸಿನ ವ್ಯವಹಾರದಲ್ಲಿ ಸ್ವಲ್ಪ ಎಚ್ಚರಿಕೆ ಇರಲಿ. ದಿನದ ಕೆಲಸ ಬೇಸರ ಉಂಟುಮಾಡುವ ಸಾಧ್ಯತೆ ಇದೆ.

Aravind, BLN Swamy, Lingapura

ವೃಷಭ: ಮಾತು ಹಿಡಿತದಲ್ಲಿರಲಿ. ಅನವಶ್ಯಕ ವಾಗ್ವಾದ ಉಂಟಾಗುವ ಸಂಭವವಿದೆ. ಆರ್ಥಿಕ ಸ್ಥಿತಿ ಸುಧಾರಿಸುವ ಉಪಾಯ ಕಂಡುಬರುವುದು. ಹಿತೈಷಿಗಳ ಸಲಹೆಯಂತೆ ಮುಂದುವರೆಯಿರಿ.  

ಮಿಥುನ: ಶಾಂತಚಿತ್ತರಾಗಿ ಕೆಲಸ ನಿರ್ವಹಿಸಿರಿ. ಹೊಸ ವ್ಯಾಪಾರ, ಉದ್ಯೋಗದ ಅವಕಾಶಗಳು ಕೂಡಿ ಬರುವವು. ಹಳೆಯ ಸಮಸ್ಯೆಗಳು ಪರಿಹಾರವಾಗುವುದು. ಶುಭಕಾರ್ಯದಲ್ಲಿ ಪಾಲ್ಗೊಳ್ಳುವಿರಿ.

Aravind, BLN Swamy, Lingapura

ಕಟಕ: ಅತಿಯಾದ ಮಾತು ಅಪಾಯಕ್ಕೆ ಕಾರಣ. ಆಲಸ್ಯದಿಂದ ಕಾರ್ಯ ಹಾನಿಯಾಗುವ ಸಾಧ್ಯತೆ ಇದೆ. ಆಸ್ತಿ ವ್ಯವಹಾರಗಳಲ್ಲಿ ತಜ್ಞರ ಸಹಾಯ ಪಡೆಯಿರಿ. ನೌಕರರಿಗೆ ಅಪೇಕ್ಷಿತ ಸ್ಥಾನಕ್ಕೆ ವರ್ಗಾವಣೆಯಾಗುವ ಯೋಗವಿದೆ.

ಸಿಂಹ: ಕೆಲಸದಲ್ಲಿ ತಾಳ್ಮೆ ಇರಲಿ. ಅನಿರ್ದಿಷ್ಟ ಉದ್ಯೋಗ, ಕೆಲಸದ ವಿಷಯದಲ್ಲಿ ಗೊಂದಲ ಮೂಡುವ ಸಾಧ್ಯತೆ ಇದೆ. ಕೌಟುಂಬಿಕ ಕಾರ್ಯಗಳನ್ನು ನಿರ್ಲಕ್ಷಿಸ ಬೇಡಿ. ವ್ಯಾಪಾರಿಗಳಿಗೆ ಆರ್ಥಿಕ ತೊಂದರೆ ಆಗುವ ಯೋಗವಿದೆ.

ಕನ್ಯಾ: ಉನ್ನತ ಹುದ್ದೆ ದೊರೆಯುವ ಸಾಧ್ಯತೆ ಇದೆ. ಸಾಧನೆಗೆ ಸೂಕ್ತ ಅವಕಾಶ ದೊರೆಯುವುದು. ಹಣಕಾಸಿನ ತೊಂದರೆಗಳು ಪರಿಹಾರವಾಗುವುದು. ವ್ಯವಹಾರಗಳಲ್ಲಿ ಗೌಪ್ಯತೆ ಇರಲಿ. ಹಿತಶತ್ರುಗಳಿಂದ ತೊಂದರೆಯಾಗುವ ಸಾಧ್ಯತೆ ಇದೆ.

ತುಲಾ: ಒಂದೇ ಮನಸಿನ ಕ್ರೀಯಾಶೀಲವಾದ ಬದುಕು ಸಾಧನೆಗೆ ಕಾರಣವಾಗುವುದು. ಅಡೆತಡೆಗಳ ನಿವಾರಣೆ ಯಾಗುವುದು. ನಿಶ್ಚಿತ ಅವಧಿಯ ಪರೀಕ್ಷೆಗಳು ಎದುರಾದರೂ ಬಲಗುಂದುವುದಿಲ್ಲ. ಹಿರಿಯರ ಸಲಹೆ ದೊರೆಯುವುದು.

ವೃಶ್ಚಿಕ: ಧನ ಮೂಲಗಳು ಹೆಚ್ಚಾಗುವುದು. ಆರ್ಥಿಕ ಸ್ಥಿತಿ ಸುಧಾರಿಸುವ ಉಪಾಯ ಕಂಡುಬರುವುದು. ಜನರೊಂದಿಗೆ ಉತ್ತಮ ಬಾಂಧವ್ಯ ವೃದ್ಧಿಯಾಗುವುದು. ಯುಕ್ತಿಯಿಂದ ಕಾರ್ಯಸಾಧಿಸುವಿರಿ. ನೆಮ್ಮದಿಯ ವಾತಾವರಣ ಇರುವುದು.

ಧನಸ್ಸು: ಉದ್ಯೋಗದ ಬಗ್ಗೆ ಆತ್ಮಸಂತೃಪ್ತಿ ಇರುವುದು. ಮನೋಚಿಂತಿತ ಕಾರ್ಯ ಕೈಗೂಡುವುದು. ಸ್ವಪ್ರಯತ್ನದಿಂದಲೇ ಎಲ್ಲವೂ ಸಾಧ್ಯವಾಗುವುದು. ಪರರ ಸಹಾಯದ ಅನಿವಾರ್ಯತೆ ಇರಲಾರದು. ಆರೋಗ್ಯದ ಕಾಳಜಿ ಇರಲಿ.

ಮಕರ: ಸಹೋದ್ಯೋಗಿ ಗಳೊಂದಿಗೆ ಮನಸ್ತಾಪವಾಗುವ ಯೋಗವಿದೆ. ಅಪೂರ್ಣ ನಿರ್ಣಯಗಳು ಅಪಾಯ ತರಬಹುದು. ಅತೀ ವಿಶ್ವಾಸಿಗರೇ ಮೋಸ ಮಾಡುವ ಸಂಭವವಿದೆ. ದೂರ ಪ್ರಯಾಣ ಅಥವಾ ಪರಸ್ಥಳವಾಸ ಸಂಭವ.

ಕುಂಭ: ಮಹತ್ವದ ಕಾರ್ಯ ಸಾಧನೆಯಾಗುವ ಲಕ್ಷಣಗಳಿವೆ. ಮನೆಯಲ್ಲಿ ಕೌಟುಂಬಿಕ ಭಿನ್ನಾಭಿಪ್ರಾಯ ಇದ್ದರೂ ನೆಮ್ಮದಿಗೆ ಕೊರತೆ ಇಲ್ಲ. ವ್ಯವಹಾರ ಚತುರತೆಯಿಂದ ದೊಡ್ಡ ಕೆಲಸವನ್ನೂ ಸಹಜವಾಗಿ ಮಾಡುವಿರಿ.

ಮೀನ: ಮನಸ್ಸು ಚಂಚಲವಾಗಿ ಮಾಡುವ ಕಾರ್ಯ ಅರ್ಧಕ್ಕೆ ನಿಲ್ಲುವ ಸಂಭವವಿದೆ. ಕಷ್ಟಕಾಲದಲ್ಲಿಯೂ ಪರೋಪಕಾರದ ಬುದ್ಧಿ ತೋರುವಿರಿ. ಸಹಕಾರಿ ವಲಯದಲ್ಲಿ ಅಪೇಕ್ಷಿತ ಲಾಭ ದೊರೆಯುವುದು. ವಿದೇಶ ಪ್ರಯಾಣದ ಯೋಗವಿದೆ.

ಮಾಸ: ಪುಷ್ಯ ಮಾಸ 

ಪಕ್ಷ: ಶುಕ್ಲ ಪಕ್ಷ 

ತಿಥಿ: ಪಂಚಮಿ 

ನಕ್ಷತ್ರ: ಶತಭಿಷ 

ರಾಹುಕಾಲ: 11:03 ರಿಂದ 12:29

ಗುಳಿಕಕಾಲ: 08:11 ರಿಂದ 09:37

ಯಮಗಂಡಕಾಲ: 03:21 ರಿಂದ 04:47

ಹೆಚ್ಚಿನ ಮಾಹಿತಿಗೆ: ವಿದ್ವಾನ್ ಎಸ್. ನವೀನ್ M.A., ಅಧ್ಯಕ್ಷರು, ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್ (ರಿ ), ದೊಡ್ಡಬಳ್ಳಾಪುರ ತಾಲ್ಲೂಕು. ಮತ್ತು ಸುವರ್ಣ ಕನ್ನಡಿಗ ರಾಜ್ಯ ಪ್ರಶಸ್ತಿ ಪುರಸ್ಕೃತರು. ಮೊ:9620445122

ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….

Exit mobile version