Site icon ಹರಿತಲೇಖನಿ

ದಿನ ಭವಿಷ್ಯ: ಮಂಗಳವಾರ, ಜನವರಿ 4, 2022, ದೈನಂದಿನ ರಾಶಿ ಭವಿಷ್ಯ / ಈ ರಾಶಿಯವರು ನವಗ್ರಹ ಸ್ತೋತ್ರ ಪಠಿಸಿ

Channel Gowda
Hukukudi trust

ಮೇಷ: ನಿಧಾನಗತಿಯ ವ್ಯವಹಾರ. ಆರೋಗ್ಯದಲ್ಲಿ ವ್ಯತ್ಯಾಸ, ಕೆಲಸದಲ್ಲಿ ಮಾನಸಿಕ ಹಿಂಸೆ, ಹಿರಿಯರ ಸಲಹೆ ಪಡೆಯಿರಿ, ಸುಬ್ರಹ್ಮಣ್ಯ ಕವಚ ಪಠಿಸಿ.

Aravind, BLN Swamy, Lingapura

ವೃಷಭ: ದಾಂಪತ್ಯದಲ್ಲಿ ವ್ಯತ್ಯಾಸ, ವ್ಯಾಪಾರಿಗಳಿಗೆ ತೊಂದರೆ, ಅಸಮಾಧಾನದ ದಿನ, ಶನಿ-ಚಂದ್ರರ ಪ್ರಾರ್ಥನೆ ಮಾಡಿ.  

ಮಿಥುನ: ಆರೋಗ್ಯದ ಕಡೆ ಗಮನವಿರಲಿ. ಸಾಲ ಮಾಡಬೇಡಿ, ಶತ್ರುಗಳ ಬಾಧೆ ಕೊಂಚ ಕಾಡಲಿದೆ. ಶಿವ-ಶಕ್ತಿಯರ ಪ್ರಾರ್ಥನೆ ಮಾಡಿ.  

Aravind, BLN Swamy, Lingapura

ಕಟಕ: ಮನಸ್ಸಿಗೆ ಬೇಸರ, ವ್ಯಾಪಾರಿಗಳಿಗೆ ಕೊಂಚ ತೊಡಕು, ಅಜೀರ್ಣ ಸಮಸ್ಯೆ, ಹಣ ಕೂಡಿಡುವುದರಲ್ಲಿ ಈ ರಾಶಿಯವರು ನಿಪುಣರು.

ಸಿಂಹ: ಆಕಸ್ಮಿಕ ಅದೃಷ್ಟ, ಧನಲಾಭ, ಕಾರ್ಯಸಿದ್ದಿ, ಹಳೆಬಾಕಿ ವಸೂಲಿ. ಆರೋಗ್ಯದಲ್ಲಿ ಉತ್ತಮ.

ಕನ್ಯಾ: ಆತಂಕ ಬೇಡ, ಅಂಜಿಕೆ ಇರಲಿದೆ, ಭಯದ ವಾತಾವರಣ ಮೂಡಲಿದೆ, ಮಿಶ್ರಫಲ, ನವಗ್ರಹ ಸ್ತೋತ್ರ ಪಠಿಸಿ.

ತುಲಾ: ಹಣದ ವಿಚಾರವಾಗಿ ಜಾಗ್ರತೆ ಬೇಕು, ಅನುಕೂಲವೂ ಇದೆ. ಮಿಶ್ರಫಲ, ಪಿತೃ ದೇವತೆಗಳ ಪ್ರಾರ್ಥನೆ ಮಾಡಿ.  

ವೃಶ್ಚಿಕ: ಗುರುಗ್ರಹ ಅನುಗ್ರಹದಿಂದ ಕಾರ್ಯ ಸಿದ್ಧಿ, ಭಾಗ್ಯೋದಯವಾಗಲಿದೆ. ಈಶ್ವರನಿಗೆ ಬಿಲ್ವಪತ್ರೆ ಸಮರ್ಪಿಸಿ.

ಧನಸ್ಸು: ಸ್ತ್ರೀಯರು ಸಂಕೋಚ ಘಟನೆಗಳಿಗೆ ಸಾಕ್ಷಿಯಾಗುತ್ತೀರಿ, ಪ್ರಯಾಣದಲ್ಲಿ ಎಚ್ಚರಿಕೆ ಬೇಕು, ಕಡಿಮೆ ಅವಧಿಯಲ್ಲಿ ಹೆಚ್ಚು ಕೆಲಸ ಮಾಡುವ ಕೌಶಲ್ಯ ಬೆಳೆಸಿಕೊಳ್ಳಿ.  

ಮಕರ: ದೇವಾಲಯಗಳ ಯಾತ್ರೆ ಹೆಚ್ಚಾಗಲಿದೆ. ಅಂದುಕೊಂಡ ಕೆಲಸಗಳು ನಿಗದಿತ ಸಮಯದಲ್ಲಿ ಮುಕ್ತಾಯವಾಗಲಿವೆ.  

ಕುಂಭ: ಪಕ್ಕದ ಮನೆಯವರ ಕಷ್ಟಕ್ಕೆ ನೆರವಾಗುವಿರಿ. ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಿರಿ. ಕೃಷಿಕರಿಗೆ ತೊಡಕು, ಪ್ರಯಾಣದಲ್ಲಿ ತೊಡಕು, ಸಂಗಾತಿಯಿಂದ ಸಹಕಾರ, ದುಂ ದುರ್ಗಾಯೈ ನಮ: ಪಠಿಸಿ.  

ಮೀನ: ವೃತ್ತಿಯಲ್ಲಿ ಆಮೆಗತಿಯ ವೇಗ ಬೇಡ. ಗುರಿ ನಿಗದಿ ಮಾಡಿಕೊಂಡು ಮುಂದೆ ಸಾಗಿ. ಸ್ತ್ರೀಯರಿಗೆ ಶುಭಫಲ, ಪ್ರಶಾಂತತೆ ಇರಲಿದೆ. ಸಹೋದರರಿಂದ ಸಹಕಾರ, ಮಕ್ಕಳಿಂದ ಕಿರಿಕಿರಿ, ಮಹಾಲಕ್ಷ್ಮೀ ಅಮ್ಮನವರಿಗೆ ಕ್ಷೀರಾಭಿಷೇಕ ಮಾಡಿಸಿ.

ತಿಥಿ: ದ್ವಿತೀಯ 

ನಕ್ಷತ್ರ: ಉತ್ತರಾಷಾಡ 

ರಾಹುಕಾಲ: 03:20 ರಿಂದ 04:46

ಗುಳಿಕಕಾಲ: 12:28 ರಿಂದ 01:54

ಯಮಗಂಡಕಾಲ: 09:36 ರಿಂದ 11:02

ಹೆಚ್ಚಿನ ಮಾಹಿತಿಗೆ: ವಿದ್ವಾನ್ ಎಸ್. ನವೀನ್ M.A., ಅಧ್ಯಕ್ಷರು, ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್ (ರಿ ), ದೊಡ್ಡಬಳ್ಳಾಪುರ ತಾಲ್ಲೂಕು. ಮತ್ತು ಸುವರ್ಣ ಕನ್ನಡಿಗ ರಾಜ್ಯ ಪ್ರಶಸ್ತಿ ಪುರಸ್ಕೃತರು. ಮೊ:9620445122

ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….

Exit mobile version