Site icon ಹರಿತಲೇಖನಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮ್ಮುಖದಲ್ಲೇ ಸಚಿವ, ಸಂಸದರ ರಾದ್ಧಾಂತ: ವಿಡಿಯೋ ‌ನೋಡಿ

Channel Gowda
Hukukudi trust

ಬೆಂಗಳೂರು: ರಾಮನಗರದಲ್ಲಿ ನಾನಾ ಅಭಿವೃದ್ಧಿ ಕಾರ್ಯಕ್ರಮಗಳ ಅನಷ್ಠಾನಕ್ಕಾಗಿ ಸೋಮವಾರ ಆಯೋಜಿಸಿದ್ದ ಸರಕಾರಿ ಕಾರ್ಯಕ್ರಮದಲ್ಲಿ ಸಚಿವ ಡಾ.ಅಶ್ವತ್ಥನಾರಾಯಣ ಹಾಗೂ ಸಂಸದ ಡಿ.ಕೆ.ಸುರೇಶ್ ಮಧ್ಯೆ ನಡೆದ ವಾಗ್ವಾದ ಕೈ ಕೈ ಮಿಲಾಯಿಸುವ ಹಂತ ತಲುಪಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮ್ಮುಖದಲ್ಲೇ ರಾದ್ಧಾಂತ ಸೃಷ್ಟಿಯಾದ ಘಟನೆ ನಡೆದಿದೆ.

Aravind, BLN Swamy, Lingapura

ಮೇಕೆದಾಟು ವಿಚಾರವಾಗಿ ಬಿಜೆಪಿ – ಕಾಂಗ್ರೆಸ್ ಮಧ್ಯೆ ನಡೆಯುತ್ತಿದ್ದ ಆರೋಪ ಈಗ ವೇದಿಕೆಯಲ್ಲೇ ಹೊಡೆದಾಟ ಸೃಷ್ಟಿಸುವ ಸ್ಥಿತಿ ನಿರ್ಮಿಸಿದೆ.

ಕಾರ್ಯಕ್ರಮದಲ್ಲಿ ಸ್ಥಳೀಯ ಸಂಸದರಿಗೆ ಸೂಕ್ತ ಗೌರವ ನೀಡಿಲ್ಲ ಎಂದು ಆರೋಪಿಸಿ ವೇದಿಕೆಯಲ್ಲಿ ಪ್ರತಿಭಟಿಸಿದ ಸಂಸದ ಡಿ ಕೆ ಸುರೇಶ್ , ಕಾರ್ಯಕ್ರಮದ ಬಗ್ಗೆ ನಮ್ಮ ಜೊತೆ ಸಭೆ ನಡೆಸಬೇಕಿತ್ತು ವಿಜೃಂಭಣೆಯಿಂದ ನಿಮ್ಮನ್ನು ಸ್ವಾಗತ ಮಾಡುತ್ತಿದ್ದೆವು. ನಮಗೆ ಹೇಳದೆಯೇ ಬಿಜೆಪಿಯಿಂದ ಕಾರ್ಯಕ್ರಮ ನಡೆಸಿದೆ. ನಿಮಗೆ ಈ ಸಂಸ್ಕೃತಿ ಆರೆಸ್ಸೆಸ್ ಹೇಳಿಕೊಡ್ತಾ? ಎಂದು ಪ್ರಶ್ನಿಸಿದರು.

Aravind, BLN Swamy, Lingapura

ನಂತರ ಅಶ್ವತ್ ನಾರಾಯಣ್ ಮಾತನಾಡುವಾಗ ಕಾಂಗ್ರೆಸ್ ಕಾರ್ಯಕರ್ತರು ಡಿಕೆ ಡಿಕೆ ಎಂದು ಘೋಷಣೆ ಹಾಕಿದಾಗ ಯಾರಪ್ಪಾ ಅಲ್ಲಿ ಗಂಡು ಕೆಲಸದಲ್ಲಿ ತೋರಿಸಿ” ಎಂದು ಅಶ್ವತ್ ನಾರಾಯಣ್ ಹೇಳಿಕೆಗೆ ಡಿ.ಕೆ.ಸುರೇಶ್ ಆಕ್ರೋಶ ವ್ಯಕ್ತಪಡಿಸಿದರು. ಭಾಷಣ ಮಾಡುತ್ತಿದ್ದ ಅಶ್ವತ್ಥನಾರಾಯಣ ಬಳಿಗೆ‌ ನುಗ್ಗಿ ಬಂದಾಗ ಇಬ್ಬರ ಮಧ್ಯೆ ಕೈ ಕೈ ಮಿಲಾಯಿಸುವ ಸ್ಥಿತಿ ನಿರ್ಮಾಣವಾಯಿತು. ಅಶ್ವತ್ಥ್ ನಾರಾಯಣ ಮೈಕ್ ಕಿತ್ತೆಸೆದ ಎಂಎಲ್ ಸಿ ರವಿ ಭಾಷಣಕ್ಕೆ ಅಡ್ಡಿಪಡಿಸಿದರು.

ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….

Exit mobile version