ಬೆಂಗಳೂರು: ನಂದಿನಿ ಹಾಲಿನ ಪ್ಯಾಕೆಟ್ ಮೇಲೆ ಪುನೀತ್ ರಾಜ್‍ಕುಮಾರ್ ಭಾವಚಿತ್ರ ಮುದ್ರಿಸುವ ಮೂಲಕ ಕೆಎಂಎಫ್ ವಿಶೇಷ ಗೌರವ ಸಲ್ಲಿಸಿದೆ.
ನಂದಿನಿ ಉತ್ಪನ್ನಗಳ ರಾಯಭಾರಿಯಾಗಿದ್ದ ನಟ ಪುನೀತ್ ರಾಜ್‍ಕುಮಾರ್, ಅದಕ್ಕೆ ಹಣ ಪಡೆದಿರಲಿಲ್ಲ. ಉಚಿತವಾಗಿ ಜಾಹಿರಾತಿನಲ್ಲಿ ಭಾಗಿಯಾಗಿ ಕೆಎಂಎಫ್ ಹಾಗೂ ರೈತರ ರೈತಪರ ಕಾಳಜಿ ತೋರಿದ್ದರು.
ಇದೀಗ ಕೆಎಂಎಫ್ ನಂದಿನಿ ಹಾಲಿನ ಪಾಕೇಟ್ ಮೇಲೆ ಪುನೀತ್ ರಾಜ್‍ಕುಮಾರ್ ಅವರ ಭಾವಚಿತ್ರ ಮುದ್ರಿಸಿ ವಿಶೇಷ ಗೌರವ ಸಲ್ಲಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಕೆಎಂಎಫ್ ಕಾರ್ಯ ವ್ಯಾಪಕ ಪ್ರಶಂಸೆಗೆ ಕಾರಣವಾಗಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….