Site icon Harithalekhani

ಕನ್ನಡಪರ ಸಂಘಟನೆಗಳ ಒಕ್ಕೂಟದಿಂದ ಡಿ.ಕ್ರಾಸ್ ವೃತ್ತದ ಬಳಿ ರಸ್ತೆ ತಡೆ

ದೊಡ್ಡಬಳ್ಳಾಪುರ: ಕನ್ನಡ ಬಾವುಟ ಸುಟ್ಟ, ಐತಿಹಾಸಿಕ ವ್ಯಕ್ತಿಗಳಿಗೆ ಅವಮನಿಸಿದ ಎಂಇಎಸ್ ಸಂಘಟನೆಯನ್ನು ನಿಷೇಧಿಸುವಂತೆ ಒತ್ತಾಯಿಸಿ ನಗರದ ಡಿ.ಕ್ರಾಸ್ ವೃತ್ತದ ಬಳಿ ಕನ್ನಪರ ಸಂಘಟನೆಗಳ ಒಕ್ಕೂಟದಿಂದ ರಸ್ತೆ ತಡೆ ನಡೆಸಲಾಯಿತು.

ಈ ವೇಳೆ ಮಾತನಾಡಿದ ಒಕ್ಮೂಟದ ಮುಖಂಡರು, ನಾಡದ್ರೋಹಿ ಎಂಇಎಸ್ . ಕನ್ನಡಿಗರ ಸ್ವಾಭಿಮಾನದ ಸಂಕೇತವಾದ ಕನ್ನಡ ಬಾವುಟ ಸುಟ್ಟು, ಕ್ರಾಂತಿ ವೀರ ಸಂಗೋಳ್ಳಿ ರಾಯಣ್ಣನ ಪ್ರತಿಮೆಎ ಭಗ್ನಗೊಳಿಸಿ, ಜಗಜ್ಯೋತಿ ಬಸವೇಶ್ವರರ ಪ್ರತಿಮೆಗೆ ಕಪ್ಪು ಮಸಿ ಎರಚಿ ಆರೂವರೆ ಕೋಟಿ ಕನ್ನಡಿಗೆ, ಕರ್ನಾಟಕಕ್ಕೆ ಅವಮಾನಿಸಿದರೂ ಸುಮ್ಮನಿರುವ ನಾಡಿನ ಸಂಸತ್ ಸದಸ್ಯರ ನಿಲುವು ಖಂಡನೀಯ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕಾನೂನು ಕ್ರಮದ ಭರವಸೆ ಮೇರೆಗೆ ಇಂದು ನಡೆಯಬೇಕಿದ್ದ ಬಂದ್ ಹಿಂಪಡೆಯಲಾಗಿದೆಯಾದರೂ. ಎಂಇಎಸ್ ನಿಷೇಧವಾಗದೇ ಇದ್ದಲ್ಲಿ ತೀವ್ರತರವಾದ ಹೋರಾಟ ನಡೆಸಬೇಕಾಗುವುದೆಂದರು.

ಈ ವೇಳೆ ಕನ್ನಡಪರ ಸಂಘಟನೆಗಳ ಒಕ್ಕೂಟದ ಮುಖಂಡರು ಹಾಜರಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….

Exit mobile version