ದೊಡ್ಡಬಳ್ಳಾಪುರ: ಮನುಷ್ಯತ್ವದ ಭಾವ ಮತ್ತು ಅರಿವು ಪೂರ್ಣವಾಗಿ ನಮ್ಮೊಳಗೆ ಮೂಡಲು ಕುವೆಂಪು ಅವರ ಸಾಹಿತ್ಯ ಮತ್ತು ವೈಚಾರಿಕ ಚಿಂತನೆಯನ್ನು ತಿಳಿದುಕೊಳ್ಳುವ ಅಗತ್ಯ ಇಂದಿನ ತಲೆಮಾರಿಗೆ ಇದೆ ಎಂದು ಲೇಖಕ ಹಾಗೂ ಇತಿಹಾಸದ ಪ್ರಾಧ್ಯಾಪಕ ಪ್ರೊ.ವಿ.ರಾಮಕೃಷ್ಣಪ್ಪ ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಥಿಯೇಟರ್ ತಂಡದ ವತಿಯಿಂದ ಬುಧವಾರ ನಡೆದ ಕುವೆಂಪು ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮೌಢ್ಯ ಮೀರಿ ನಿಜ ಮನುಷ್ಯರಾಗಿ ಬದುಕಲು ಕುವೆಂಪು ಅವರ ಸಾಹಿತ್ಯ ಮತ್ತು ವೈಚಾರಿಕತೆ ಸದಾ ಪ್ರೇರಣೆಯಾಗುತ್ತದೆ. ಕುವೆಂಪು ಅವರ ಸಾಹಿತ್ಯದ ಮರು ಓದು ಸದಾ ನಡೆಯಬೇಕಿದೆ. ಮಲೆಗಳಲ್ಲಿ ಮದುಮಗಳು ಕಾಬಂದರಿ ಪ್ರತಿ ಬಾರಿ ಓದಿದಾಗಲು ಹೊಸ ಹೊಳವುಗಳನ್ನು ನೀಡುತ್ತದೆ ಎಂದರು.
ಕನ್ನಡ ಉಪನ್ಯಾಸಕ ಡಾ.ಪ್ರಕಾಶ್ಮಂಟೇದ ಮಾತಾಡಿ, ಶೈಕ್ಷಣಿಕವಾಗಿ ಪ್ರಾದೇಶಿಕ ಅಸ್ಮಿತೆಯ ಮೂಲಕವೇ ವಿಶ್ವಮಾನವತೆ ಹಾಗೂ ಸಮಾನತೆಯನ್ನು ಒತ್ತಿ ಹೇಳಿದ ನಿಜವಾದ ರಾಷ್ಟ್ರೀಯತೆಯನ್ನು ಸಾಹಿತ್ಯ ಹಾಗೂ ವೈಚಾರಿಕತೆ ಪ್ರತಿಪಾದಿಸಿದವರು ಕುವೆಂಪು ಅವರು. ಮತೀಯತೆಯು ರಾಷ್ಟ್ರೀಯತೆಯನ್ನು ಸಂಕುಚಿತಗೊಳಿಸಿದರೆ ಕುವೆಂಪು ಅವರ ಮತಿಯಪ್ರಜ್ಞೆ ರಾಷ್ಟ್ರೀಯತೆಯನ್ನು ಸರ್ವಮತ, ಧರ್ಮದವರನ್ನು ಒಳಗೊಂಡ ಸರ್ವೋದಯದ ತತ್ವವನ್ನಾಗಿಸಿದೆ ಎಂದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಪ್ರತಿನಿಧಿ ಚೇತನ್ ಮಾತಾಡಿ ಕುವೆಂಪು ಅವರನ್ನು ಯಾವುದೇ ಒಂದು ಜಾತಿ, ಧರ್ಮಕ್ಕೆ ಮಾತ್ರ ಸೀಮಿತಗೊಳಿಸಿಕೊಳ್ಳುವುದು ಸಂಕುಚಿತ ಭಾವನೆಯಾಗಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ.ಸದಾಶಿವರಾಮಚಂದ್ರಗೌಡ ಮಾತಾನಾಡಿ,ಕುವೆಂಪು ಅವರನ್ನು ನಮ್ಮ ರಾಜಕೀಯ ಪೂರ್ವಗ್ರಹಳ ಆಚೆಗೆ ಆಳವಾಗಿ ಅಧ್ಯಯನ ಮಾಡುವ ಅಗತ್ಯವಿದೆ.
ಎಡಪಂಥ,ಬಲಪಂಥ ಎನ್ನದೇ ಪ್ರಾಮಾಣಿಕವಾಗಿ ಕುವೆಂಪು ಬರಹಗಳನ್ನು ಓದುವ ಅಗತ್ಯ ಇಂದು ಪ್ರಸ್ತುವಾಗಿದೆ ಎಂದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….