Site icon ಹರಿತಲೇಖನಿ

ಪಾಪಿಗಳು ದೇವಿ ಲಕ್ಷ್ಮಿಯನ್ನು ಗೋಡೆಯಲ್ಲಿ ಬಂಧಿಸಿದ್ದಾರೆ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ವಾಗ್ದಾಳಿ

Channel Gowda
Hukukudi trust

ಲಕ್ನೋ: ನೋಟು ಅಮಾನೀಕರಣಕ್ಕೆ 2016 ರಲ್ಲಿ ಎಸ್‌ಪಿ ಹಾಗೂ ಬಿಎಸ್‌ಪಿ ನಾಯಕರು ಯಾಕೆ ವಿರೋಧ ಮಾಡಿದ್ದರು ಎಂಬುವುದು ತೆರಿಗೆ ಇಲಾಖೆಗಳು ಎಸ್‌ಪಿ, ಬಿಎಸ್‌ಪಿ ನಾಯಕರುಗಳ ಮನೆ, ಸಂಸ್ಥೆಯ ಮೇಲೆ ದಾಳಿ ನಡೆಸಿ ಭಾರೀ ಹಣ ಲಭಿಸಿದಾಗ ತಿಳಿದು ಬಂದಿದೆ, ಎಂದು ಹೇಳಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ಈ ಪಾಪಿಗಳು ದೇವಿ ಲಕ್ಷ್ಮಿಯನ್ನು ಗೋಡೆಯಲ್ಲಿ ಬಂಧಿಸಿರಿಸಿದ್ದರು ಎಂದು ವಾಗ್ದಾಳಿ ನಡೆಸಿದ್ದಾರೆ.

Aravind, BLN Swamy, Lingapura

ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆಯು ನಡೆಯಲಿದೆ. ಈ ನಿಟ್ಟಿನಲ್ಲಿ ಎಲ್ಲಾ ಪಕ್ಷಗಳು ಚುನಾವಣಾ ಪ್ರಚಾರ ಕಾರ್ಯವನ್ನು ಆರಂಭ ಮಾಡಿದೆ. ಈ ನಡುವೆ ಬಿಜೆಪಿ ಹಲವಾರು ಯೋಜನೆಗಳನ್ನು ಜಾರಿ ಮಾಡುವ ಮೂಲಕ ಚುನಾವಣಾ ಕಾರ್ಯತಂತ್ರವನ್ನು ರೂಪಿಸಿದೆ. ಹಾಗೆಯೇ ಉತ್ತರ ಪ್ರದೇಶದಲ್ಲಿ ವಿರೋಧ ಪಕ್ಷಗಳು ಹಾಗೂ ಆಡಳಿತರೂಢ ಪಕ್ಷಗಳ ನಾಯಕರುಗಳು ಪರಸ್ಪರ ವಾಕ್ಸಮರದಲ್ಲಿ ತೊಡಗಿದ್ದಾರೆ. ಸೀತಾಪುರದಲ್ಲಿ ರ್‍ಯಾಲಿಯಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ್‌, ಕಾನ್ಪುರದ ಉದ್ಯಮಿ ಪಿಯೂಷ್‌ ಜೈನ್‌ ಮನೆಯಲ್ಲಿ ಭಾರೀ ಹಣ ಲಭ್ಯವಾದ ಬಗ್ಗೆ ಉಲ್ಲೇಖ ಮಾಡಿದ್ದಾರೆ. ಕಾನ್ಪುರದ ಉದ್ಯಮಿ ಪಿಯೂಷ್‌ ಜೈನ್‌ ಸಮಾಜವಾದಿ ಪಕ್ಷದ ನಾಯಕರುಗಳಿಗೆ ಆಪ್ತರು ಎಂದು ಬಿಜೆಪಿಯ ಹೇಳಿಕೊಂಡಿದೆ.

ನಾವೆಲ್ಲರೂ ದೀಪಾವಳಿ ಸಂದರ್ಭದಲ್ಲಿ ದೇವಿ ಲಕ್ಷ್ಮಿ ನಮ್ಮ ಮನೆಗೆ ಆಗಮಿಸುತ್ತಾಳೆ ಎಂದು ನಂಬಿಕೆ ಇಟ್ಟುಕೊಂಡಿದ್ದೇವೆ. ಆದರೆ ಈ ಪಾಪಿಗಳು ದೇವಿ ಲಕ್ಷ್ಮಿಯನ್ನು ಗೋಡೆಯಲ್ಲಿ ಬಂಧಿಸಿದ್ದಾರೆ. ಸಮಾಜವಾದಿ ನಾಯಕರುಗಳ ಮನೆಯ ಗೋಡೆಯಲ್ಲಿ ದೇವಿ ಲಕ್ಷ್ಮಿ ಹೊರಬರುತ್ತಿರುವುದನ್ನು ನೀವು ನೋಡಿಲ್ಲವೇ,? ಎಂದು ಯೋಗಿ ಆದಿತ್ಯನಾಥ್‌ ಪ್ರಶ್ನಿಸಿದ್ದಾರೆ.

Aravind, BLN Swamy, Lingapura

ಬಂಡಲ್‌ಗಟ್ಟಲೆ ನೋಟುಗಳು, ಲೆಕ್ಕ ಮಾಡಲು ಸಾಧ್ಯವಾಗದಷ್ಟು ಬಂಡಲುಗಟ್ಟಲೆ ನೋಟುಗಳು, ಮೂರನೇ ದಿನ ಕೂಡಾ ಲೆಕ್ಕ ಮಾಡಲಾಗುತ್ತಿದೆ. ಇನ್ನೂ ಕೂಡಾ ಲೆಕ್ಕ ಪೂರ್ತಿಯಾಗಿಲ್ಲ, ಎಂದು ಕಾನ್ಪುರ ದಾಳಿಯ ಬಗ್ಗೆ ಉಲ್ಲೇಖಿಸಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹೇಳಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….

Exit mobile version