Site icon ಹರಿತಲೇಖನಿ

ಎಂಟಿಬಿ ನಾಗರಾಜ್ ಅವರಿಗೆ ಬಿಬಿಎಂಪಿ ತ್ಯಾಜ್ಯದ ಮೇಲೆ ಅಷ್ಟೊಂದು ಪ್ರೀತಿ ಇದ್ದರೆ ಹೊಸಕೋಟೆ ತಾಲ್ಲೂಕಿನಲ್ಲಿ ಹಾಕಿಸಿಕೊಳ್ಳಲಿ

Channel Gowda
Hukukudi trust

ದೊಡ್ಡಬಳ್ಳಾಪುರ: ತಾಲ್ಲೂಕಿನ ಚಿಗರೇನಹಳ್ಳಿಯಲ್ಲಿನ ಎಂಎಸ್ಜಿಪಿ ಕಸ ವಿಲೇವಾರಿ ಘಟಕದಲ್ಲಿನ ಕಸ ಕಂಕಟದ ಸಮಸ್ಯೆ ಬೆಳಗಾವಿಯ ಸುವರ್ಣ ಸೌಧದಲ್ಲಿ ಎರಡು ಬಾರಿ ಚರ್ಚೆಯಾಗಿ ಸಮಸ್ಯೆ ಪರಹಾರ ಆಗುವುದಕ್ಕೆ ಬದಲಾಗಿದೆ ಹಿಂದಿಗಿಂತಲು ಹೆಚ್ಚಿನ ಸಂಖ್ಯೆಯಲ್ಲಿ ಕಸ ತುಂಬಿದ ಲಾರಿಗಳು ಬಿಬಿಎಂಪಿ ವ್ಯಾಪ್ತಿಯಿಂದ ಬರುವಂತಾಗಿದ್ದೆ ಚರ್ಚೆಯ ಹಾಗೂ ಕಸದ ವಿರುದ್ಧ ಸ್ಥಳೀಯರು ನಡೆಸಿದ ಧರಣಿಯ ಫಲಶೃತಿಯಾಗಿದೆ. 

Aravind, BLN Swamy, Lingapura

13 ದಿನಗಳ ಕಾಲ ಬಿಬಿಎಂಪಿ ವ್ಯಾಪ್ತಿಯಿಂದ ಕಸ ತುಂಬಿದ ಯಾವುದೇ ಲಾರಿಗಳು ಬರದಂತೆ ಸ್ಥಳೀಯರು ಧರಣಿ ನಡೆಸಿದ್ದರು. ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಎಂ.ಟಿ.ಬಿ.ನಾಗರಾಜ್ ಅವರು ವಿಧಾನ ಪರಿಷತ್ ಚುನಾವಣ ನೀತಿ ಸಂಹಿತೆ ಮುಕ್ತಾಯವಾದ ನಂತರ ಕ್ಷೇತ್ರದ ಶಾಸಕರು ಹಾಗೂ ಸ್ಥಳೀಯ ಮುಖಂಡರನ್ನು ಒಳಗೊಂಡಂತೆ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದರು. ಕ್ಷೇತ್ರದ ಶಾಸಕ ಟಿ.ವೆಂಕಟರಮಣಯ್ಯ ಅವರು ಅಧಿವೇಶನದಲ್ಲಿ ಚರ್ಚಿಸಿದರು. 

ಎರಡು ದಿನಗಳಿಂದ ಬಿಬಿಎಂಪಿ ವ್ಯಾಪ್ತಿಯಿಂದ ಕಸ ತುಂಬಿದ ಲಾರಿಗಳು ಎಂಎಸ್ಜಿಪಿ ಘಟಕಕ್ಕೆ ಬರುತ್ತಿವೆ. ಸ್ಥಳೀಯರು ಪ್ರತಿಭಟನೆ ನಡೆಸುವ ಭೀತಿಯಲ್ಲಿರುವ ಜಿಲ್ಲಾಡಳಿತ ದಾಬಸ್ಪೇಟೆಯಿಂದ ಕಸ ವಿಲೇವಾರಿ ಘಟಕದ ದಾರಿಯುದ್ದಕ್ಕು ಪೊಲೀಸ್ ಬಂದೋಬಸ್ ಏರ್ಪಡಿಸಿದೆ. ಅಗ್ನಿಶಾಮಕ ವಾಹನ, ಪ್ರತಿಭಟನೆಗೆ ಬರುವ ಸ್ಥಳೀಯರನ್ನು ಬಂಧಿಸಲು ಅಗತ್ಯ ಇರುವ ಕೆಎಸ್ಆರ್ಟಿಸಿ ಬಸ್ಗಳು, ಮೀಸಲು ಪಡೆ ಪೊಲೀಸರನ್ನು ನಿಯೋಜಿಸಲಾಗಿದೆ. ಬೆಂಗಳೂರಿನಿಂದ ಕಸ ತುಂಬಿಕೊಂಡು ಬರುವ ಪ್ರತಿ ಲಾರಿಯು ಪೊಲೀಸ್ ಬೆಂಗಾವಲು ವಾಹನದೊಂದಿಗೆ ಬರುತ್ತಿವೆ.

Aravind, BLN Swamy, Lingapura

ಚಿಗರೇನಹಳ್ಳಿಯ ಎಂಎಸ್ಜಿಪಿ ಕಸ ವಿಲೇವಾರಿ ಘಟಕಕ್ಕೆ ಮತ್ತೆ ಕಸದ ಲಾರಿಗಳು ಬರುವುದನ್ನು ವಿರೋಧಿಸಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ  ಧರಣಿಯ ನೇತೃತ್ವ ವಹಿಸಿದ್ದ ನವ ಬೆಂಗಳೂರು ಹೋರಾಟ ಸಮಿತಿ ಗೌರವ ಅಧ್ಯಕ್ಷ ಕೆ.ವಿ.ಸತ್ಯಪ್ರಕಾಶ್, ಭಕ್ತರಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿದ್ದಲಿಂಗಪ್ಪ, ಸರ್ಕಾರ ಹೋರಾಟಗಾರರಿಗೆ ನೀಡಿದ್ದ ಮಾತಿಗೆ ತಪ್ಪಿ ನಡೆಯುತ್ತಿದೆ. ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸುವ ಭರವಸೆ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವರು ತಾಲ್ಲೂಕಿನ ಜನರಿಗೆ ಮೋಸ ಮಾಡಿದ್ದಾರೆ. ಬಿಬಿಎಂಪಿ ಕಸ ಹಾಗೂ ಬೆಂಗಳೂರಿನ ಜನರ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್ ಅವರಿಗೆ ಅಷ್ಟೊಂದು ಪ್ರೀತಿ ಇದ್ದರೆ ಕಸವನ್ನು ಹೊಸಕೋಟೆ ತಾಲ್ಲೂಕಿನಲ್ಲಿ ಹಾಕಿಸಿಕೊಳ್ಳಲಿ. ತಮ್ಮ ಕ್ಷೇತ್ರದ ಜನರಿಗೆ ಮಾತ್ರ ಯಾವುದೇ ತೊಂದರೆಯಾಗಬಾರದು ಎಂದು ಬಯಸುವ ಸಚಿವರು ತಾಲ್ಲೂಕಿನ ಜನರು ಮಾತ್ರ ರೋಗಗಳಿಂದ ಬಳಲಿ ಎನ್ನುವ ಧೋರಣೆ ಖಂಡನಿಯ. ಇನ್ನು ಎರಡು ದಿನಗಳಲ್ಲಿ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿ ನಮ್ಮ ತಾಲ್ಲೂಕಿಗೆ ಕಸ ಬರುವುದನ್ನು ನಿಲ್ಲಿಸುವ ಕುರಿತಂತೆ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ನಮ್ಮ ಹೋರಾಟವನ್ನು ತೀವ್ರಗೊಳಿಸಲಾಗುವುದು. ಕಸದ ವಿರುದ್ಧದ ಹೋರಾಟವನ್ನು ಯಾವುದೇ ಒತ್ತಡಕ್ಕೆ ಮಣಿಯದೆ ಮುನ್ನಡೆಸಲಾಗುವುದು. ಬಲ ಪ್ರಯೋಗ ಹಾಗೂ ಪೊಲೀಸ್ ಕಾವಲಿನಲ್ಲಿ ಯಾರೂ ಸಹ ಆಡಳಿತ ನಡೆಸಲು ಸಾಧ್ಯವಿಲ್ಲ ಎಂದರು. 

ಕಸದ ವಿರುದ್ಧದ ಹೋರಾಟಕ್ಕೆ ರೈತ ಸಂಘಟನೆ, ಕನ್ನಡ ಹಾಗೂ ದಲಿತಪರ ಸಂಘಟನಗಳ ಮುಖಂಡರು ಬೆಂಬಲ ನೀಡುವಂತೆ ಮನವಿ ಮಾಡಲಾಗಿದೆ. ಸಾಕಷ್ಟು ಜನ ಮುಖಂಡರು ಪ್ರತಿಭಟನೆಗೆ ಬೆಂಬಲ ನೀಡಲು ಸಕಾರಾತ್ಮಕವಾಗಿ ಸ್ಪಂಧಿಸಿದ್ದಾರೆ ಎಂದರು.  

ಸುದ್ದಿಗೋಷ್ಠಿಯಲ್ಲಿ ನವ ಬೆಂಗಳೂರು ಹೋರಾಟ ಸಮಿತಿ ಅಧ್ಯಕ್ಷ ಜಿ.ಎನ್.ಪ್ರದೀಪ್, ಕಾಡತಿಪ್ಪೂರು ಗ್ರಾಮ ಪಂಚಾಯಿತಿ ಸದಸ್ಯ ಗಂಗಹನುಮಯ್ಯ, ಶ್ರೀಧರ್, ರಾಮಕೃಷ್ಣ, ಪುಟ್ಟನಾಯಕ್, ರವಿಕುಮಾರ್.ರಾಜಣ್ಣ, ಸಿದ್ದಪ್ಪ ಇದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….

Exit mobile version