ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ಅವಧಿ ಮುಗಿದಿರುವ ಅರುಳುಮಲ್ಲಿಗೆ ಗ್ರಾಮ ಪಂಚಾಯಿತಿಯ 18 ಸದಸ್ಯ ಸ್ಥಾನಗಳು, ದರ್ಗಾಜೋಗಿಹಳ್ಳಿಯ 24 ಸದಸ್ಯ ಸ್ಥಾನಗಳು ಹಾಗೂ ತೆರವಾಗಿರುವ ತಿಪ್ಪೂರು ಪಂಚಾಯ್ತಿಯ 1ಸ್ಥಾನಕ್ಕೆ ಇಂದು ಮತದಾನ ಪ್ರಕ್ರಿಯೆ ಆರಂಭವಾಗಿದೆ.
ಭಾನುವಾರ ಮತಪೆಟ್ಟಿಗೆಗಳೊಂದಿಗೆ ಅಧಿಕಾರಿಗಳು ಮತಗಟ್ಟೆಗಳಿಗೆ ಬಂದಿದ್ದು. ಮೂರು ಗ್ರಾಮ ಪಂಚಾಯಿತಿಗಳಿಂದ 19 ಮತಗಟ್ಟೆ ಸ್ಥಾಪಿಸಲಾಗಿದೆ.
22 ರಿಟರ್ನಿಂಗ್ ಅಧಿಕಾರಿಗಳು, 22 ಸಹಾಯಕ ರಿಟರ್ನಿಂಗ್ ಅಧಿಕಾರಿಗಳು, 44 ಮತಗಟ್ಟೆ ಅಧಿಕಾರಿಗಳು ಸೇರಿದಂತೆ 88 ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ. ಅಗತ್ಯ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಅಂತಿಮ ಮತದಾರರ ಪಟ್ಟಿ ಅನ್ವಯ ಅರಳುಮಲ್ಲಿಗೆ ಪಂಚಾಯ್ತಿಯಲ್ಲಿ 7,326, ದರ್ಗಾಜೋಗಿಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ 7,418 ಹಾಗೂ ತಿಪ್ಪೂರು ಗ್ರಾಮ ಪಂಚಾಯ್ತಿಯ ಒಂದು ಕ್ಷೇತ್ರದಲ್ಲಿ 792 ಮತದಾರರು ಸೇರಿದಂತೆ ಒಟ್ಟು 15,536 ಮತದಾರರು ಮತ ಚಲಾಯಿಸಲಿದ್ದಾರೆ ಎಂದು ತಾಲೂಕು ಚುನಾವಣಾಧಿಕಾರಿಯಾಗಿರುವ ತಹಶೀಲ್ದಾರ್ ಟಿ.ಎಸ್ ಶಿವರಾಜ್ ತಿಳಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….