ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ಅವಧಿ ಮುಗಿದಿರುವ ಅರುಳುಮಲ್ಲಿಗೆ ಗ್ರಾಮ ಪಂಚಾಯಿತಿಯ18 ಸದಸ್ಯ ಸ್ಥಾನಗಳು, ದರ್ಗಾಜೋಗಿಹಳ್ಳಿಯ 24 ಸದಸ್ಯ ಸ್ಥಾನಗಳು ಹಾಗೂ ತೆರವಾಗಿರುವ ತಿಪ್ಪೂರು ಪಂಚಾಯ್ತಿಯ 1ಸ್ಥಾನಕ್ಕೆ ನಡೆಯುತ್ತಿರುವ ಚುನಾವಣೆಯಲ್ಲಿ ಇತ್ತೀಚಿನ ವರದಿಯಂತೆ ಶೇ.43.35ರಷ್ಟು ಮತದಾನ ನಡೆದಿದೆ.
ಅರಳುಮಲ್ಲಿಗೆ ಪಂಚಾಯ್ತಿಯಲ್ಲಿ 7,326 ಮತದಾರರಿದ್ದು 2762 ಮಂದಿ (ಶೇ.37.70), ದರ್ಗಾಜೋಗಿಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ 7,418 ಮತದಾರರಲ್ಲಿ 3501 ಮಂದಿ (ಶೇ.47.20) ಹಾಗೂ ತಿಪ್ಪೂರು ಗ್ರಾಮ ಪಂಚಾಯ್ತಿಯ ಒಂದು ಕ್ಷೇತ್ರದಲ್ಲಿ 792 ಮತದಾರರಲ್ಲಿ 472 ಮಂದಿ (ಶೇ.59.60) ಒಟ್ಟು 15536 ಮತದಾರರಲ್ಲಿ 6735 (ಶೇ.43.35) ಮತದಾರರು ಮತ ಚಲಾಯಿಸಿದ್ದಾರೆ.
ಮೂರು ಗ್ರಾಮ ಪಂಚಾಯಿತಿಗಳಿಂದ 19 ಮತಗಟ್ಟೆ ಸ್ಥಾಪಿಸಲಾಗಿದೆ.
22 ರಿಟರ್ನಿಂಗ್ ಅಧಿಕಾರಿಗಳು, 22 ಸಹಾಯಕ ರಿಟರ್ನಿಂಗ್ ಅಧಿಕಾರಿಗಳು, 44 ಮತಗಟ್ಟೆ ಅಧಿಕಾರಿಗಳು ಸೇರಿದಂತೆ 88 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….