ದೊಡ್ಡಬಳ್ಳಾಪುರ: ಡಿ.27 ರಂದು ತಾಲೂಕಿನ ಮೂರು ಗ್ರಾಮಪಂಚಾಯಿತಿಗಳಿಗೆ ಚುನಾವಣೆ ನಡೆಯಲಿದ್ದು, ಮತದಾರರಿಗೆ ವೇತನ ಸಹಿತ ರಜೆಯನ್ನು ಘೋಷಿಸಲಾಗಿದೆ ಎಂದು ತಹಶೀಲ್ದಾರ್ ಟಿ.ಎಸ್.ಶಿವರಾಜ್ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ತಿಪ್ಪೂರು ಗ್ರಾಮಪಂಚಾಯಿತಿ ಒಂದು ಸ್ಥಾನದ ಉಪಚುನಾವಣೆ ಮತ್ತು ಅವಧಿ ಮುಗಿದಿರುವ ದರ್ಗಾಜೋಗಹಳ್ಳಿ ಮತ್ತು ಅರಳುಮಲ್ಲಿಗೆ ಗ್ರಾಮಪಂಚಾಯಿತಿಗಳ 19 ಮತಗಟ್ಟೆಗಳಿಗೆ ಡಿ.27 ರಂದು ಬೆಳಗ್ಗೆ 07 ರಿಂದ ಸಂಜೆ 05 ಗಂಟೆಯ ವರೆಗೆ ಮತದಾನ ನಡೆಯಲಿದೆ.
ಮತದಾನ ನಡೆಯುವ ಗ್ರಾಮಪಂಚಾಯಿತಿ ಮತ ಕ್ಷೇತ್ರದಲ್ಲಿ ಅರ್ಹ ಮತದಾರರಿಗೆ ಉಲ್ಲೇಖದಂತೆ ರಾಜ್ಯ ಸರ್ಕಾರವು ವಿವಿಧ ಕಾಯ್ದೆ ಅಡಿಯಲ್ಲಿ ಡಿ.27ರಂದು ವೇತನ ಸಹಿತ ರಜೆಯನ್ನು ಘೋಷಿಸಿ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….